ಧರ್ಮಸ್ಥಳ ಥೀಮ್ ಗಣೇಶ; ಗಣೇಶನಾಗಿ ಧರ್ಮಾಧಿಕಾರಿ ಜನರ ಮುಂದೆ; ಸುಳ್ಳು ಹೇಳಿದ ಬುರುಡೆ ಗ್ಯಾಂಗ್ ಕಂಬಿ ಹಿಂದೆ!

Published : Aug 27, 2025, 06:33 PM IST

ಬೆಂಗಳೂರು ಗಣೇಶೋತ್ಸವದಲ್ಲಿ ಡಾ. ವೀರೇಂದ್ರ ಹೆಗ್ಗಡೆ ರೂಪದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಜಾಗೃತಿ ಮೂಡಿಸುವುದು ಇದರ ಉದ್ದೇಶ. ಹೆಗ್ಗಡೆ ಅವರ ಸಾಧನೆಗಳನ್ನು ಪ್ರದರ್ಶಿಸುವುದರ ಜೊತೆಗೆ, ಅಪಪ್ರಚಾರ ಮಾಡುವವರ ಚಿತ್ರ ಪ್ರದರ್ಶಿಸಲಾಗಿದೆ.

PREV
16

ಬೆಂಗಳೂರು (ಆ.27): ಪ್ರತಿಷ್ಠಿತ ಬೆಂಗಳೂರು ಗಣೇಶೋತ್ಸವದಲ್ಲಿ ಈ ಬಾರಿ ಗಜಾನನ ಭಕ್ತ ಮಂಡಳಿಯು ವಿಭಿನ್ನ ಹಾಗೂ ಅರ್ಥಪೂರ್ಣ ಪರಿಕಲ್ಪನೆಯೊಂದಿಗೆ ಗಮನ ಸೆಳೆದಿದೆ. ಧರ್ಮಸ್ಥಳ ಹಾಗೂ ಡಾ. ವೀರೇಂದ್ರ ಹೆಗ್ಗಡೆ ಅವರ ಕುರಿತ ಅಪಪ್ರಚಾರಕ್ಕೆ ಭಕ್ತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ಗಣೇಶನನ್ನು ಸ್ವತಃ ವೀರೇಂದ್ರ ಹೆಗ್ಗಡೆ ಅವರ ರೂಪದಲ್ಲಿ ಪ್ರತಿಷ್ಠಾಪಿಸಲಾಗಿದೆ.

26

ಗಣೇಶ ಮೂರ್ತಿಯನ್ನು ಡಾ. ವೀರೇಂದ್ರ ಹೆಗ್ಗಡೆ ಅವರು ಧರಿಸುವ ಪಂಚೆ, ಶಾಲು ಮತ್ತು ಪೇಟದೊಂದಿಗೆ ಸಿಂಗರಿಸಲಾಗಿದೆ. ಇದು ನೋಡಲು ವೀರೇಂದ್ರ ಹೆಗ್ಗಡೆ ಅವರ ಪ್ರತಿಕೃತಿಯಂತೆಯೇ ಕಾಣುತ್ತದೆ. ಈ ಥೀಮ್‌ ಮೂಲಕ, ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರದ ಕುರಿತು ಭಕ್ತರಿಗೆ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಲಾಗಿದೆ.

36

ವಿಷೇಶತೆ ಏನು?

ಪೆಂಡಾಲ್‌ನ ಒಂದು ಬದಿಯಲ್ಲಿ, ಕಂಬಿಗಳ ಹಿಂದೆ ಬುರುಡೆ ಗ್ಯಾಂಗ್‌ನ ಮಾಸ್ಕ್‌ಮ್ಯಾನ್ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮ್ಮರೋಡಿ, ಎಐ ಕಂಟೆಂಟ್ ಕ್ರಿಯೇಟರ್ ಸಮೀರ್, ಸುಜಾತಾ ಭಟ್ ಮತ್ತು ವಕೀಲ ಜಗದೀಶ್ ಅವರ ಫೋಟೊಗಳನ್ನು ಅಳವಡಿಕೆ ಮಾಡಲಾಗಿದೆ. ಇವರು ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮತ್ತು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಮಂಡಳಿ ತಿಳಿಸಿದೆ.

46

ಮತ್ತೊಂದೆಡೆ, ಧರ್ಮಸ್ಥಳದ ಸೇವೆಗಳು ಮತ್ತು ಡಾ. ವೀರೇಂದ್ರ ಹೆಗ್ಗಡೆ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳ ವಿವರಗಳನ್ನು ಪ್ರದರ್ಶಿಸಲಾಗಿದೆ. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಹೆಗ್ಗಡೆ ಅವರ ಸಾಧನೆಗಳನ್ನು ಇಲ್ಲಿ ವಿವರಿಸಲಾಗಿದೆ.

56

ಈ ವಿನೂತನ ಥೀಮ್‌ನ ಹಿಂದಿನ ಉದ್ದೇಶ 'ಧರ್ಮೋ ರಕ್ಷತಿ ರಕ್ಷಿತಃ' ಎಂಬ ಸಂದೇಶವನ್ನು ಎತ್ತಿಹಿಡಿಯುವುದು. ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ ಎಂಬಂತೆ, ಡಾ. ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳವನ್ನು ಮತ್ತು ಧರ್ಮವನ್ನು ಹೇಗೆ ರಕ್ಷಿಸುತ್ತಿದ್ದಾರೆ ಎಂಬುದನ್ನು ಇಲ್ಲಿ ಬಿಂಬಿಸಲಾಗಿದೆ.

66

ಗಜಾನನ ಭಕ್ತ ಮಂಡಳಿಯ ಸದಸ್ಯರು ಧರ್ಮಸ್ಥಳದಿಂದ ತಂದ ತೆಂಗಿನಕಾಯಿಗಳನ್ನು ಭಕ್ತರಿಗೆ ಪ್ರಸಾದವಾಗಿ ವಿತರಿಸುತ್ತಿದ್ದಾರೆ. ಸಮಾಜದಲ್ಲಿ ಧರ್ಮದ ಬಗ್ಗೆ ನಂಬಿಕೆ ಮತ್ತು ಸತ್ಯವನ್ನು ಎತ್ತಿಹಿಡಿಯುವ ಈ ಪ್ರಯತ್ನಕ್ಕೆ ಭಕ್ತರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಶಿಷ್ಟ ಗಣೇಶೋತ್ಸವವು ಬೆಂಗಳೂರಿನಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಜಾಗೃತಿಯ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.

Read more Photos on
click me!

Recommended Stories