ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಕುಟುಂಬದೊಂದಿಗೆ ಜೆಪಿ ನಗರದ ನಿವಾಸದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಿದರು. ಅನಿತಾ ಕುಮಾರಸ್ವಾಮಿ ಮತ್ತು ರೇವತಿ ಮ್ಯಾಚಿಂಗ್ ಸೀರೆಯಲ್ಲಿ ಮಿಂಚಿದರು. ನಿಖಿಲ್ ಕುಮಾರಸ್ವಾಮಿ ಕೂಡ ಪೂಜೆಯಲ್ಲಿ ಭಾಗವಹಿಸಿದ್ದರು.
ಬುಧವಾರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್ ಜೊತೆ ಜೆಪಿ ನಗರದಲ್ಲಿ ತಮ್ಮ ನಿವಾಸದಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡಿದ್ದಾರೆ.
57
ಇದರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಎಲ್ಲರ ಗಮನ ಅನಿತಾ ಕುಮಾರಸ್ವಾಮಿ ಹಾಗೂ ರೇವತಿ ಧರಿಸಿದ್ದ ಮ್ಯಾಚಿಂಗ್ ಸೀರೆ ಹಾಗೂ ಬ್ಲೌಸ್‌ಗಳ ಕಡೆ ಹೋಗಿದೆ.
67
ಮ್ಯಾಚಿಂಗ್ ಸೀರೆಯಲ್ಲಿ ಅತ್ತೆ-ಸೊಸೆ ಭರ್ಜರಿಯಾಗಿ ಮಿಂಚಿದ್ದು ಪೂಜಾ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗಿಯಾಗಿದೆ. ನಿಖಿಲ್ ಕುಮಾರಸ್ವಾಮಿ, ಎಚ್‌ಡಿ ಕುಮಾರಸ್ವಾಮಿ ಕೂಡ ಪೂಜೆಯಲ್ಲಿದ್ದರು.
77
ಇತ್ತೀಚಿನ ದಿನಗಳಲ್ಲಿ ಕುಮಾರಸ್ವಾಮಿ ಅವರ ಆರೋಗ್ಯದ ವಿಚಾರದಲ್ಲಿ ಅಭಿಮಾನಿಗಳಲ್ಲಿ ಕಳವಳ ಉಂಟಾಗಿದ್ದು, ನಿಖಿಲ್ ಕುಮಾರಸ್ವಾಮಿ ಕೂಡ ಇದನ್ನು ಕೆಲವು ವೇದಿಕೆಯಲ್ಲಿ ಹೇಳಿಕೊಂಡಿದ್ದರು.