ತಾಯಿಯ ಫೋಟೋ ಹಂಚಿಕೊಂಡ ಸಿಎಂ ಡಿಕೆಶಿ: ಪೋಸ್ಟ್‌ನಲ್ಲಿ ಅಡಗಿದ್ದ ಭಾವನಾತ್ಮಕ ಕಥೆ ಏನು?

Published : Jun 07, 2026, 08:46 PM IST

ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ ಗೌರಮ್ಮ ಅವರನ್ನು..

PREV
17
ನನ್ನ 'ಗೌರ'ವವ'ಮ್ಮ

ಕನಕಪುರ (ಜೂ.07): ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹುಟ್ಟೂರಾದ ದೊಡ್ಡ ಆಲಹಳ್ಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವನಾತ್ಮಕವಾಗಿ ಮಾತನಾಡಿದರು. ಇದೇ ವೇಳೆ ತಮ್ಮ ತಾಯಿ ಗೌರಮ್ಮ ಅವರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್ ಕೂಡ ಗಮನ ಸೆಳೆಯಿತು. ಬೆಳಗ್ಗಿನಿಂದ ಕನಕಪುರ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಾಯಿ ಗೌರಮ್ಮ ಅವರೊಂದಿಗಿನ ಹಳೆಯ ಫೋಟೋವನ್ನು ಹಂಚಿಕೊಂಡು, "ಬದುಕಿನ ಸಮರದಲ್ಲಿ ನಾನು ಗೆದ್ದ ಪ್ರತಿಯೊಂದು ಪ್ರಶಸ್ತಿಯೂ ಅವಳ ತ್ಯಾಗಕ್ಕೆ ಸಂದ ಗೌರವ. ನನ್ನ 'ಗೌರ'ವವ'ಮ್ಮ'" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

27
"ಇದು ನನಗೊಬ್ಬನಿಗೆ ಸಿಕ್ಕ ಗೌರವವಲ್ಲ"

ದೊಡ್ಡ ಆಲಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, "ಇಂದು ದೊಡ್ಡ ಆಲಹಳ್ಳಿಯ ಇತಿಹಾಸದಲ್ಲಿ ವಿಶೇಷ ದಿನ. ದೊಡ್ಡ ಆಲಹಳ್ಳಿ ಕೆಂಪೇಗೌಡ ಶಿವಕುಮಾರ್ ಆಗಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಇದು ನನಗೊಬ್ಬನಿಗೆ ಸಿಕ್ಕ ಗೌರವವಲ್ಲ, ಇಡೀ ಕನಕಪುರ ಹಾಗೂ ದೊಡ್ಡ ಆಲಹಳ್ಳಿ ಜನತೆಗೆ ಸಿಕ್ಕ ಗೌರವ" ಎಂದು ಹೇಳಿದರು.

37
"ನಾನು ಮುಖ್ಯಮಂತ್ರಿ ಆಗಿ ಬಂದಿಲ್ಲ, ನಿಮ್ಮ ಮನೆಯ ಮಗನಾಗಿ ಬಂದಿದ್ದೇನೆ"

"ಸಾಕಷ್ಟು ಜನರು ತ್ಯಾಗ ಮಾಡಿದ್ದಾರೆ, ಆಶೀರ್ವಾದ ನೀಡಿದ್ದಾರೆ. ನಾನು ಇಲ್ಲಿ ಮುಖ್ಯಮಂತ್ರಿ ಆಗಿ ಬಂದಿಲ್ಲ, ನಿಮ್ಮ ಮನೆಯ ಮಗನಾಗಿ, ನಿಮ್ಮ ಸಹೋದರನಾಗಿ ಬಂದಿದ್ದೇನೆ" ಎಂದು ಡಿಕೆಶಿ ಹೇಳಿದರು.

47
"ಜೈಲಿಗೆ ಕಳುಹಿಸಿದರೂ ನೀವು ಕೈಬಿಡಲಿಲ್ಲ"

ರಾಜಕೀಯ ಹೋರಾಟದ ದಿನಗಳನ್ನು ನೆನಪಿಸಿಕೊಂಡ ಅವರು, "ಬಿಜೆಪಿಯವರು ನನ್ನನ್ನು ಜೈಲಿಗೆ ಕಳುಹಿಸಿದರು. ಆದರೂ ನೀವು ಹರಿಕೆ ಕಟ್ಟಿಕೊಂಡು ಆಶೀರ್ವಾದ ಮಾಡಿದ್ದೀರಿ. ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್‌ಗೆ 136 ಸ್ಥಾನಗಳು ಬಂದವು. ಅಧಿಕಾರ ಹಸ್ತಾಂತರ ಸ್ವಲ್ಪ ತಡವಾದರೂ ಅಂತಿಮವಾಗಿ ಜನರ ಆಶಯ ಗೆದ್ದಿದೆ" ಎಂದು ಹೇಳಿದರು.

57
"ಬಿಜೆಪಿ-ಜೆಡಿಎಸ್ ನಾಯಕರಿಗೂ ನನ್ನ ಮನೆ ಬಾಗಿಲು ತೆರೆದಿದೆ"

ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಎಲ್ಲರನ್ನೂ ಒಗ್ಗೂಡಿಸುವ ಸಂದೇಶ ನೀಡಿದ ಸಿಎಂ, "ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೂ ನನ್ನ ಮನೆ ಬಾಗಿಲು ಸದಾ ತೆರೆದಿದೆ. ರಾಜಕೀಯ ಬೇರೆ, ಜನರ ಅಭಿವೃದ್ಧಿ ಬೇರೆ" ಎಂದು ಹೇಳಿದರು.

67
"800 ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜು"

ಕ್ಷೇತ್ರದ ಅಭಿವೃದ್ಧಿ ಕುರಿತು ಮಾತನಾಡಿದ ಅವರು, "ಸುಮಾರು ₹800 ಕೋಟಿ ವೆಚ್ಚದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. ನಿಮ್ಮ ಋಣವನ್ನು ನಾನು ಧರ್ಮದಿಂದ ತೀರಿಸುತ್ತೇನೆ. ಈ ಊರು ಹಿಂದೆ ಹೇಗಿತ್ತು, ಈಗ ಹೇಗಿದೆ ಎಂಬುದು ನಿಮಗೆ ಗೊತ್ತಿದೆ. ಊರಿಗೆ ಬೇಕಾದ ಅನೇಕ ಮೂಲಸೌಕರ್ಯಗಳನ್ನು ಈಗಾಗಲೇ ಒದಗಿಸಿದ್ದೇವೆ" ಎಂದು ತಿಳಿಸಿದರು.

77
"ರಸ್ತೆ ಅಗಲೀಕರಣದಿಂದ ನೋವಾಗಿರಬಹುದು, ಆದರೆ ಅಭಿವೃದ್ಧಿಗೆ ಸಹಾಯವಾಗಿದೆ"

"ರಸ್ತೆ ಅಗಲೀಕರಣ ವೇಳೆ ಕೆಲವರಿಗೆ ತೊಂದರೆ ಆಗಿರಬಹುದು. ಆದರೆ ಇಂದು ಅದೇ ಅಭಿವೃದ್ಧಿಗೆ ಕಾರಣವಾಗಿದ್ದು, ಆಸ್ತಿ ಮೌಲ್ಯ ಹೆಚ್ಚಳಕ್ಕೂ ಸಹಕಾರಿಯಾಗಿದೆ" ಎಂದು ಡಿ.ಕೆ. ಶಿವಕುಮಾರ್ ಹೇಳಿದರು. ಹುಟ್ಟೂರಿನ ಜನರ ಆಶೀರ್ವಾದ ಮತ್ತು ಬೆಂಬಲವೇ ತಮ್ಮ ರಾಜಕೀಯ ಬದುಕಿನ ಶಕ್ತಿ ಎಂದು ಹೇಳಿದ ಮುಖ್ಯಮಂತ್ರಿ, ಜನರ ಗೌರವ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories