ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ನ ರಿಯಲ್‌ ಫೇಸ್‌ ಜಾರಾ ಪಟೇಲ್‌, 'ನಾನು ಭಾಗಿಯಾಗಿಲ್ಲ' ಎಂದ ಎನ್ಆರ್‌ಐ!

Published : Nov 07, 2023, 04:57 PM IST

Know About Zara Patel: ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಕಂಟೆಂಟ್‌ಗಳಿಂದಲೇ ಫಾಲೋವರ್ಸ್‌ಗಳನ್ನು ಸಂಪಾದಿಸುವ ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆ ಜಾರಾ ಪಟೇಲ್‌, ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ವಿಡಿಯೋನ ರಿಯಲ್‌ ಫೇಸ್‌ ಆಗಿದ್ದಾರೆ.  

PREV
114
ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ನ ರಿಯಲ್‌ ಫೇಸ್‌ ಜಾರಾ ಪಟೇಲ್‌, 'ನಾನು ಭಾಗಿಯಾಗಿಲ್ಲ' ಎಂದ ಎನ್ಆರ್‌ಐ!

ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೋದಲ್ಲಿದ್ದ ನಿಜವಾದ ಹುಡುಗಿ ಜಾರಾ ಪಟೇಲ್‌ ತಮ್ಮ ವಿಡಿಯೋವನ್ನು ಇದಕ್ಕೆ ಬಳಕೆ ಮಾಡಿರುವ ಬಗ್ಗೆ ತೀವ್ರ ವಿಚಲಿತಳಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

214

ವಿವಾದ ಉದ್ಭವವಾದ ಬಳಿಕ ಈ ವಿಡಿಯೋದ ನೈಜ ಹುಡುಗಿ ಜಾರಾ ಪಟೇಲ್‌ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಾಗಿ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
 

314

ಈ ರೀತಿಯಲ್ಲಿ ಗೊಂದಲವನ್ನು ಯಾರೂ ಸೃಷ್ಟಿಸಬಾರದು. ಇದು ನನಗೆ ಬಹಳ ಬೇಸರ ತಂದಿದೆ ಎಂದು ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆಯಾಗಿರುವ ಜಾರಾ ಪಟೇಲ್‌ ಬರೆದಿದ್ದಾರೆ.
 

414

ಅದಲ್ಲದೆ, ರಶ್ಮಿಕಾ ಮಂದಣ್ಣ ಅವರ ಮುಖವನ್ನು ಇಟ್ಟು ಡೀಪ್‌ಫೇಕ್‌ ವಿಡಿಯೋ ತಯಾರಿಸಿರುವುದರಲ್ಲಿ ನಾನು ಭಾಗಿಯಾಗಿಲ್ಲ. ಇದರಲ್ಲಿ ನನ್ನ ಪಾತ್ರವಿಲ್ಲ ಎಂದು ಜಾರಾ ಪಟೇಲ್‌ ಹೇಳಿದ್ದಾರೆ.
 

514

ನನ್ನ ದೇಹ ಮತ್ತು ಬಾಲಿವುಡ್‌ನ ಜನಪ್ರಿಯ ನಟಿಯ ಮುಖವನ್ನು ಬಳಸಿಕೊಂಡು ಯಾರೋ ಒಬ್ಬರು ಡೀಪ್‌ಫೇಕ್ ವೀಡಿಯೊವನ್ನು ರಚಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಡೀಪ್‌ಫೇಕ್ ವೀಡಿಯೊದೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಹಾಗೆಯೇ ಏನಾಗುತ್ತಿದೆ ಎಂಬುದರ ಬಗ್ಗೆ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ ಮತ್ತು ಅಸಮಾಧಾನಗೊಂಡಿದ್ದೇನೆ ಎಂದು ಜಾರಾ ಬರೆದಿದ್ದಾರೆ.

614

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಬಗ್ಗೆ ಮಹಿಳೆಯರು ಈಗ ಇನ್ನಷ್ಟು ಭಯಪಡಬೇಕಾದ ಪರಿಸ್ಥಿತಿ ಇದೆ. ಹುಡುಗಿಯರ ಭವಿಷ್ಯದ ಬಗ್ಗೆ ನಾನು ಚಿಂತೆ ಮಾಡುತ್ತೇನೆ ಎಂದು ಜಾರಾ ಪಟೇಲ್‌ ಬರೆದಿದ್ದಾರೆ.
 

714

ದಯವಿಟ್ಟು ಇಂಟರ್ ನೆಟ್‌ನಲ್ಲಿ ನೀವು ನೋಡುವ ಸಂಗತಿಗಳನ್ನು ಪರಿಶೀಲಿಸಿ. ಅದರಲ್ಲಿನ ಎಲ್ಲವೂ ನಿಜವಾಗಿರೋದಿಲ್ಲ ಎಂದು ಜಾರಾ ಪಟೇಲ್ ಟ್ವೀಟ್​ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

814

ಜಾರಾ ಪಟೇಲ್‌ ತಮ್ಮ ಬೋಲ್ಡ್‌ ಕಂಟೆಂಟ್‌ಗಳಿಂದಲೇ ಸೋಶಿಯಲ್‌ ಮೀಡಿಯಾದಲ್ಲಿ ಜನಪ್ರಿಯರಾಗಿದ್ದಾರೆ. ಇದರಿಂದಲೇ ಅವರು ಇನ್ಸ್‌ಟಾಗ್ರಾಮ್‌ನಲ್ಲಿ 4.5 ಲಕ್ಷ ಫಾಲೋವರ್ಸ್‌ಗಳನ್ನು ಸಂಪಾದನೆ ಮಾಡಿದ್ದಾರೆ.

914

ಇನ್ಸ್‌ಗ್ರಾಮ್‌ನಲ್ಲಿ ಅವರೇ ಹಾಕಿರುವ ಮಾಹಿತಿಯ ಪ್ರಕಾರ ಡೇಟಾ ಇಂಜಿನಿಯರ್‌ ಆಗಿರುವ ಜಾರಾ ಪಟೇಲ್‌, ಮಾನಸಿಕ ಆರೋಗ್ಯದ ಕಾರ್ಯಕರ್ತೆಯೂ ಆಗಿದ್ದಾರೆ.
 

1014

ಇದರ ಹೊರತಾಗಿ, ತನ್ನ ಫಾಲೋವರ್ಸ್‌ಗಳಿಗೆ ಅಡಲ್ಟ್‌ ಕಂಟೆಂಟ್‌ಗಳನ್ನೂ ಈಕೆ ನೀಡುತ್ತಾರೆ. ಅದರಲ್ಲಿ ಇವರು ಸಕ್ರಿಯರೂ ಆಗಿದ್ದಾರೆ.
 

1114


ತಮ್ಮ ಇನ್ಸ್‌ಟಾಗ್ರಾಮ್‌ ಅಕೌಂಟ್‌ನಲ್ಲಿ ಫಾಲೋವರ್ಸ್‌ಗಳಿಗಾಗಿ ಸೀಕ್ರೆಟ್‌ ಲಿಂಕ್‌ ಅವರೂ ಹಂಚಿಕೊಂಡಿದ್ದಾರೆ. ಇದು ಆಕೆಯೊಂದಿಗೆ ಚಾಟ್‌ ಮಾಡಲು ಹಾಗೂ ಆಕೆಯ ಅಡಲ್ಟ್‌ ಕಂಟೆಂಟ್‌ ನೋಡಲು ಅನುವು ಮಾಡಿಕೊಡುತ್ತದೆ.

1214

ಅಕ್ಟೋಬರ್ 9 ರಂದು, ಜಾರಾ ಪಟೇಲ್ ಅವರು ಕಪ್ಪು ಉಡುಪಿನಲ್ಲಿ ಲಿಫ್ಟ್‌ಗೆ ಪ್ರವೇಶಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆಕೆ ಪೋಸ್ಟ್ ಅನ್ನು ಶೇರ್ ಮಾಡಿದ್ದು, 'ನೀವು ನನ್ನ ಮೇಲೆ ಮತ್ತೆ ಲಿಫ್ಟ್ ಬಾಗಿಲನ್ನು ಬಹುತೇಕ ಮುಚ್ಚಿದ್ದೀರಿ....'' ಎನ್ನುವ ಸಾಲಿನೊಂದಿಗೆ ಹಂಚಿಕೊಂಡಿದ್ದರು.

1314

ಇದೇ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಕೂರಿಸಿ ಡೀಪ್‌ಫೇಕ್‌ ವಿಡಿಯೋವನ್ನು ಪ್ರಸಾರ ಮಾಡಲಾಗಿತ್ತು. ಈ ಬಗ್ಗೆ ರಶ್ಮಿಕಾ ಮಂದಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು.

ಪಡ್ಡೆ ಹುಡುಗರ ನಿದ್ದೆ ಕದ್ದ ಮಾಳವಿಕಾ ಮೋಹನನ್‌ ಒದ್ದೆ ಸೀರೆಯ ಹಾಟ್‌ ಫೋಟೋಸ್‌!

1414

ರಶ್ಮಿಕಾ ಮಂದಣ್ಣ ಅವರು ಟ್ವಿಟ್‌ ಮಾಡಿ ಅಸಮಾಧಾನ ಹೊರಹಾಕಿದ ಬಳಿಕ, ದಿಗ್ಗಜ ನಟ ಅಮಿತಾಬ್‌ ಬಚ್ಛನ್‌ ಕೂಡ ಇದನ್ನು ಬೆಂಬಲಿಸಿದ್ದರು.     

'ವೇಶ್ಯಾವಾಟಿಕೆ ಕೂಲ್‌ ಪ್ರೊಫೆಶನ್‌..' ಎಂದ ವಿದೂಷಿ ಸ್ವರೂಪ್‌, ಸೋಶಿಯಲ್‌ ಮೀಡಿಯಾದಲ್ಲಿ ಶುರು ಜಟಾಪಟಿ!

Read more Photos on
click me!

Recommended Stories