ಅಬ್ಬಬ್ಬಾ ಇಷ್ಟೊಂದು ದುಡ್ಡಾ..ಐಷಾರಾಮಿ ಫ್ಲ್ಯಾಟ್‌ ಖರೀದಿ ಮಾಡಿದ ದಿಗ್ಗಜ ನಟನ ಪುತ್ರಿ!

Published : Nov 03, 2023, 07:48 PM IST

ಒಂದೆರಡಲ್ಲ.. ದಿಗ್ಗಜನ ನಟನ ಪುತ್ರಿ ಮುಂಬೈನ ಖಾರ್‌ ಪ್ರದೇಶದಲ್ಲಿ ಬರೋಬ್ಬರಿ 15 ಕೋಟಿ ರೂಪಾಯಿಗೆ ಐಷಾರಾಮಿ ಫ್ಲ್ಯಾಟ್‌ ಖರೀದಿ ಮಾಡಿದ್ದಾರೆ.

PREV
110
ಅಬ್ಬಬ್ಬಾ ಇಷ್ಟೊಂದು ದುಡ್ಡಾ..ಐಷಾರಾಮಿ ಫ್ಲ್ಯಾಟ್‌ ಖರೀದಿ ಮಾಡಿದ ದಿಗ್ಗಜ ನಟನ ಪುತ್ರಿ!

ನಟಿ ಅಕ್ಷರಾ ಹಾಸನ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣವೂ ಇದೆ. ದಿಗ್ಗಜ ನಟ ಕಮಲ್‌ ಹಾಸನ್‌ ಅವರ ಪುತ್ರಿ ಅಕ್ಷರಾ ಹಾಸನ್‌ ಹೊಸ ಫ್ಲ್ಯಾಟ್‌ ಖರೀದಿ ಮಾಡಿದ್ದಾರೆ.

 

210

ಕಮಲ್‌ ಹಾಸನ್‌ ಹಾಗೂ ಸಾರಿಕಾ ಅವರ ಪುತ್ರಿಯಾಗಿರುವ ಅಕ್ಷರಾ ಹಾಸನ್‌, ಚಿತ್ರರಂಗದಲ್ಲಿ ಅಕ್ಕ ಶ್ರುತಿ ಹಾಸನ್‌ರಷ್ಟು ಮಿಂಚಿಲ್ಲ.

310

2015ರಲ್ಲಿ ಅಮಿತಾಬ್‌ ಬಚ್ಛನ್‌ ಹಾಗೂ ಧನುಷ್‌ ಮುಖ್ಯ ಭೂಮಿಕೆಯಲ್ಲಿದ್ದ ಶಮಿತಾಬ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ಅಕ್ಷರಾ ಹಾಸನ್‌ ಪಾದಾರ್ಪಣೆ ಮಾಡಿದ್ದರು.

410

ಹಿಂದಿ ಮಾತ್ರವಲ್ಲದೆ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮುಂಬೈನಲ್ಲಿಯೇ ನೆಲೆಸಿದ್ದ ಈಕೆ ಈಗ ತನ್ನದೇ ಆದ ಸ್ವಂತ ಫ್ಲ್ಯಾಟ್‌ ಖರೀದಿ ಮಾಡಿದ್ದಾರೆ. 

510

ಮುಂಬೈನ ಖಾರ್‌ ಪ್ರದೇಶದಲ್ಲಿ ಅಕ್ಷರಾ ಹಾಸನ್‌ ಫ್ಲ್ಯಾಟ್‌ ಖರೀದಿ ಮಾಡಿದ್ದಾರೆ. ಅಂದಾಜು 15 ಮಹಡಿಗಳನ್ನು ಹೊಂದಿರುವ ಕಟ್ಟಡದಲ್ಲಿ 13ನೇ ಫ್ಲ್ಯಾಟ್‌ನಲ್ಲಿ ಮನೆ ಖರೀದಿಸಿದ್ದಾರೆ.

610

ಮೂಲಗಳ ಪ್ರಕಾರ ಬರೋಬ್ಬರಿ 15.75 ಕೋಟಿ ರೂಪಾಯಿ ವೆಚ್ಚದ ಫ್ಲ್ಯಾಟ್‌ ಇದಾಗಿದೆ. ಮುಂಬೈನಲ್ಲಿ ಅಕ್ಷರಾ ಹಾಸನ್‌ ತಾಯಿ ಸಾರಿಕಾ ಜೊತೆಗೆ ವಾಸ ಮಾಡುತ್ತಿದ್ದಾರೆ. 

710

ಸಾರಿಕಾ ಠಾಕೂರ್‌ ಹಾಗೂ ಕಮಲ್‌ ಹಾಸನ್‌ 2004ರಲ್ಲಿಯೇ ವಿಚ್ಛೇದನ ಪಡೆದುಕೊಂಡಿದ್ದರು. ಅಂದಿನಿಂದ ಅಮ್ಮನ ಜೊತೆ ಅಕ್ಷರಾ ವಾಸ ಮಾಡುತ್ತಿದ್ದಾರೆ. 

810

ಕೊನೆಯ ಬಾರಿಗೆ ತಮಿಳಿನಲ್ಲಿ ಅಚ್ಚಂ ಮದಮ್‌ ನಾನಮ್‌ ಪಾಯಿರು ಸಿನಿಮಾದಲ್ಲಿ ಅಕ್ಷರಾ ಹಾಸನ್‌ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಯಾವ ಚಿತ್ರದಲ್ಲೂ ಅವರು ನಟಿಸಿಲ್ಲ.

910

ಸಿನಿಮಾ ಮಾತ್ರವಲ್ಲದೆ ಅಕ್ಷರಾ ಹಾಸನ್‌ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಮಹಿಳಾ ಹಕ್ಕುಗಳ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದಾರೆ.

1010

ತಂದೆ ಕಮಲ್‌ ಹಾಸನ್‌ ಜೊತೆಗೂ ಉತ್ತಮ ಬಾಂಧವ್ಯ ಹೊಂದಿರುವ ಅಕ್ಷರಾ ಹಾಸನ್‌, ಸೋಶಿಯಲ್‌ ಮೀಡಿಯಾದಲ್ಲಿ ಕಮಲ್‌ ಅವರ ಜೊತೆಗಿನ ಚಿತ್ರಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.ಸ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories