ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಸಂಗೀತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳಿನ ಪ್ರಖ್ಯಾತ ನಿರ್ದೇಶಕ ಅಟ್ಲಿ ತಮ್ಮ ಪತ್ನಿಯ ಜೊತೆಗಿನ ಫೋಟೋಶೂಟ್‌ನ ಚಿತ್ರವನ್ನು ಬಹಿರಂಗಪಡಿಸಿದ್ದಾರೆ.
ಜವಾನ್ ಚಿತ್ರದ ದೊಡ್ಡ ಮಟ್ಟದ ಯಶಸ್ಸಿನ ಬಳಿಕ ಅಟ್ಲಿ ಕಾಲಿವುಡ್‌ನಲ್ಲಿ ಮಾತ್ರವಲ್ಲಿ ಬಾಲಿವುಡ್‌ನಲ್ಲೂ ಫೇಮಸ್ ಡೈರಕ್ಟರ್ ಆಗಿದ್ದಾರೆ. ಪ್ರಖ್ಯಾತ ನಿರ್ದೇಶಕ ಶಂಕರ್ ಅವರಿಗೆ ಸಹಾಯಕರಾಗಿದ್ದ ಅಟ್ಲಿ ಈಗ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ನಿರ್ದೇಶಕ
29
2013ರಲ್ಲಿ ಆರ್ಯ ಹಾಗೂ ನಯನತಾರಾ ಅಭಿನಯದ ರಾಜಾ ರಾಣಿ ಸಿನಿಮಾ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದ ಅಟ್ಲಿ ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ.
39
ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಅಟ್ಲಿ ತಮ್ಮ ಬಹುಕಾಲದ ಪ್ರೀತಿಯಾಗಿದ್ದ ಕೃಷ್ಣಾ ಪ್ರಿಯಾ ಅವರನ್ನು 2014ರಲ್ಲಿ ವಿವಾಹವಾಗಿದ್ದರು.
49
ಕಾಲಿವುಡ್ ಮತ್ತು ಬಾಲಿವುಡ್ ಜಗತ್ತಿನಲ್ಲಿ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ನಿರ್ದೇಶಕ ಅಟ್ಲಿ ಇತ್ತೀಚೆಗೆ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಸಂಗೀತದಲ್ಲಿ ಭಾಗವಹಿಸಿದ್ದರು.
59
director atlee
ಈ ವೇಳೆ ಅಟ್ಲಿ ಮತ್ತು ಅವರ ಪತ್ನಿ ಪ್ರಿಯಾ ಅವರು ಮುಖೇಶ್ ಅಂಬಾನಿ ಮನೆಯಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಅಭಿಮಾನಿಗಳು ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ.
69
atlee priya
ಅಟ್ಲಿ ಹಾಗೂ ಪ್ರಿಯಾ ಅವರ ಫ್ಯಾಷನ್ ಆಯ್ಕೆಗಳು ಸಾಕಷ್ಟು ಗಮನಸೆಳೆದವು. ಅಟ್ಲೀ ಅವರು ಹೂವಿನ ಮಾದರಿಯಿಂದ ಅಲಂಕರಿಸಲ್ಪಟ್ಟ ಶೆರ್ವಾನಿ ಧರಿಸಿದ್ದರು.
79
atlee
ಇನ್ನೊಂದೆಡೆ ಅಟ್ಲಿ ಅವರ ಪತ್ನಿ ಪ್ರಿಯಾ ಅಟ್ಲಿ, ಆಕರ್ಷಕ ಬ್ಲೇಜರ್‌ನೊಂದಿಗೆ ಅದಕ್ಕೆ ಒಪ್ಪುವಂಥ ಲೆಹಂಗಾವನ್ನೂ ಕೂಡ ಧರಿಸಿದ್ದರು. ಈ ಲುಕ್ ಬಹಳ ಸ್ಪೆಷಲ್ ಆಗಿತ್ತು.
89
Atlee
ಅಟ್ಲಿ ಹಾಗೂ ಪ್ರಿಯಾ ಅಟ್ಲಿ ಅವರ ಸಿಂಕ್ರೊನೈಸ್ ಮಾಡಿದ ಡ್ರೆಸ್‌ಗಳು ಅವರ ಆಳವಾದ ಬಂಧವನ್ನು ಮತ್ತು ಫ್ಯಾಷನ್-ಫಾರ್ವರ್ಡ್ ಸಂವೇದನೆಗಳನ್ನು ಎತ್ತಿ ತೋರಿಸಿದವು
99
ರಾಜ ರಾಣಿ, ಥೆರಿ, ಮರ್ಸೆಲ್, ಬಿಗಿಲ್ ಹಾಗೂ ಜವಾನ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಅಟ್ಲಿ ಮುಂದಿನ ಸಿನಿಮಾ ಯಾರೊಂದಿಗೆ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.