ಸಿಕಂದರ್ ತಾರಾಗಣದ ನಿವ್ವಳ ಮೌಲ್ಯ, ಯಾರು ಎಷ್ಟು ಶ್ರೀಮಂತರು ನೋಡಿ ಒಂದ್ಸಲ..!
ಸಿಕಂದರ್ ಸಿನಿಮಾ ರಿಲೀಸ್ ಆಗಿದೆ! ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಮತ್ತು ಉಳಿದ ತಾರಾಗಣದಲ್ಲಿ ಯಾರು ಶ್ರೀಮಂತರು ಮತ್ತು ಯಾರ ಬಳಿ ಎಷ್ಟು ಆಸ್ತಿ ಇದೆ ಎಂದು ತಿಳಿಯಿರಿ.
ಸಿಕಂದರ್ ಸಿನಿಮಾ ರಿಲೀಸ್ ಆಗಿದೆ! ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಮತ್ತು ಉಳಿದ ತಾರಾಗಣದಲ್ಲಿ ಯಾರು ಶ್ರೀಮಂತರು ಮತ್ತು ಯಾರ ಬಳಿ ಎಷ್ಟು ಆಸ್ತಿ ಇದೆ ಎಂದು ತಿಳಿಯಿರಿ.
ನಿರ್ದೇಶಕ ಎ. ಆರ್. ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಸಿಕಂದರ್' ಮಾರ್ಚ್ 30 ರಂದು ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಲ್ಮಾನ್ ಖಾನ್ ಅವರ ಬಳಿ ಸುಮಾರು 2900 ಕೋಟಿ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಮೂಲಕ ಅದಕ್ಕೆ ಸ್ವಲ್ಪ ಸಂಪತ್ತು ಹೆಚ್ಚು ಸೇರಿಕೊಂಡಿದೆ.
ರಶ್ಮಿಕಾ ಮಂದಣ್ಣ ಅವರ ಬಳಿ ಸುಮಾರು 66 ಕೋಟಿ ರೂಪಾಯಿ ಆಸ್ತಿ ಇದೆ. ಇದೀಗ ಸಿಕಂದರ್ ಬಳಿಕ ಇನ್ನು ಸ್ವಲ್ಪ ಜಾಸ್ತಿ ಆಗಿದೆ. ಆದರೆ ಅದೆಷ್ಟು ಎನ್ನುವ ಪಕ್ಕಾ ಮಾಹಿತಿ ಲಭ್ಯವಿಲ್ಲ.
ಕಾಜಲ್ ಅಗರ್ವಾಲ್ ಅವರ ಬಳಿ ಸುಮಾರು 83 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಕಾಜಲ್ ಅಗರವಾಲ್ ಅವರು ಮದುವೆ ಬಳಿಕ ಸಿನಿಮಾ ನಟನೆಯಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುತ್ತಿಲ್ಲ.
ಸತ್ಯರಾಜ್ ಅವರ ಬಳಿ ಸುಮಾರು 80 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ. ಅವರು ಇಡೀ ಇಂಡಿಯಾಗೂ ಸಲ್ಲುವ ನಟ ಎಂದು ಇದೀಗ ಖ್ಯಾತಿ ಪಡೆದಿದ್ದಾರೆ.
ಪ್ರತೀಕ್ ಬಬ್ಬರ್ ಅವರ ಆಸ್ತಿ 17-42 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅವರು ಹೆಚ್ಚಾಗಿ ಬಾಲಿವುಡ್ ಚಿತ್ರರಂಗದಲ್ಲಿ ಪೋಷಕ ಪಾತ್ರಗಳನ್ನೇ ಮಾಡುತ್ತ ಬಂದಿದ್ದಾರೆ.
ಶರ್ಮನ್ ಜೋಶಿ ಅವರ ಬಳಿ 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಇದೆ ಎಂದು ಹೇಳಲಾಗಿದೆ. ಆದರೆ, ಅವರು ಇತ್ತೀಚೆಗೆ ಯಾವುದೇ ಭಾಷೆಯ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿಲ್ಲ.
ಸಂಜಯ್ ಕಪೂರ್ ಅವರ ಬಳಿ ಸುಮಾರು 99 ಕೋಟಿ ರೂಪಾಯಿ ಆಸ್ತಿ ಇದೆ. ಈ ನಟ ಇತ್ತೀಚೆಗೆ ನಟನೆ ಮಾಡುವುದು ಸಾಕಷ್ಟು ಕಡಿಮೆ ಆಗಿದೆ. ಆದರೆ ಅಲ್ಲೊಂದು ಇಲ್ಲೊಂದು ಪಾತ್ರ ಮಾಡುತ್ತಿದ್ದಾರೆ ಅಷ್ಟೇ.