ಪವನ್ ಕಲ್ಯಾಣ್ ಜೀವನದ ಕಷ್ಟದ ಸಮಯದಲ್ಲೂ ಜೊತೆಯಾಗಿ ನಿಂತಿದ್ದ ಅನ್ನಾ ಲೆಜ್ನೆವಾ ದಾಂಪತ್ಯದಿಂದ ದೂರವಾದ ಬೆನ್ನಲ್ಲೇ ಸಹೋದರ ನಾಗಬಾಬು ಸೆನ್ಸೇಷನಲ್ ಕಮೆಂಟ್ಸ್ ವೈರಲ್ ಆಗಿದೆ. ಅನ್ನಾ ಲೆಜ್ನೇವಾ ಬಗ್ಗೆ
Pawan Kalyan Divorce: ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಸುಮಾರು 13 ವರ್ಷಗಳ ದಾಂಪತ್ಯ ಜೀವನದ ಬಳಿಕ ಬೇರ್ಪಡುವ ನಿರ್ಧಾರ ತೆಗೆದುಕೊಂಡಿರುವುದು ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದೆ. ಈ ನಿರ್ಧಾರದ ಹಿಂದಿನ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪವನ್ ಅವರ ಕಷ್ಟದ ಸಮಯದಲ್ಲೂ ಜೊತೆಯಾಗಿ ನಿಂತಿದ್ದ ಅನ್ನಾ ದಾಂಪತ್ಯದಿಂದ ದೂರವಾಗಲು ಕಾರಣವೇನು ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಹೀಗಾಗಿ ಈ ಜೋಡಿಗೆ ಸಂಬಂಧಿಸಿದ ಪ್ರತಿಯೊಂದು ಹಳೆಯ ವಿಚಾರವೂ ಈಗ ಚರ್ಚೆಯ ವಿಷಯವಾಗಿದೆ.
ಇದೇ ಸಂದರ್ಭದಲ್ಲಿ ನಾಗಬಾಬು ಅವರ ಹಳೆಯ ಸಂದರ್ಶನವೊಂದು ಮತ್ತೆ ವೈರಲ್ ಆಗಿದೆ. ಅದರಲ್ಲಿ ಅವರು ಅನ್ನಾ ಲೆಜ್ನೆವಾ ಅವರ ಗುಣಸ್ವಭಾವ ಮತ್ತು ಕುಟುಂಬದೊಂದಿಗಿನ ಒಡನಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅನ್ನಾ ರಷ್ಯಾ ಮೂಲದವರಾದರೂ ಭಾರತೀಯ ಸಂಪ್ರದಾಯಗಳಿಗೆ ಅಪಾರ ಗೌರವ ನೀಡುತ್ತಿದ್ದರು. ನಮ್ಮ ಕುಟುಂಬದ ಆಚರಣೆಗಳನ್ನು ಕೇವಲ ಗೌರವಿಸುವುದಲ್ಲದೆ, ಅವುಗಳನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದರು ಎಂದು ನಾಗಬಾಬು ಹೇಳಿದ್ದರು.
ಅಷ್ಟೇ ಅಲ್ಲದೆ, ಪವನ್ ಅವರ ಹಿಂದಿನ ಇಬ್ಬರು ಪತ್ನಿಯರು ಕುಟುಂಬದೊಂದಿಗೆ ಹೆಚ್ಚು ಬೆರೆಯುತ್ತಿರಲಿಲ್ಲ. ಆದರೆ ಅನ್ನಾ ಮಾತ್ರ ನಮ್ಮ ಮನೆಯವರೊಂದಿಗೆ ಬಹಳ ಆತ್ಮೀಯವಾಗಿ ಹೊಂದಿಕೊಂಡಿದ್ದರು. ನಮ್ಮ ಕುಟುಂಬದ ಪ್ರತಿಯೊಬ್ಬರೂ ಅವರನ್ನು ಇಷ್ಟಪಡುತ್ತಾರೆ. ನಾವು ಕೆಲವು ಸಂಪ್ರದಾಯಗಳನ್ನು ಔಪಚಾರಿಕವಾಗಿ ಪಾಲಿಸಿದರೂ, ಅನ್ನಾ ಅವುಗಳನ್ನು ಮನಃಪೂರ್ವಕವಾಗಿ ಅನುಸರಿಸುತ್ತಿದ್ದರು ಎಂದು ನಾಗಬಾಬು ಹೊಗಳಿದ್ದರು. ಈ ಮಾತುಗಳ ವಿಡಿಯೋ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅಂದಹಾಗೆ, ಅನ್ನಾ ಲೆಜ್ನೆವಾ ರಷ್ಯಾದ ಮಾಡೆಲ್. ಜಯಂತ್ ಸಿ. ಪರಂಜಿ ನಿರ್ದೇಶನದ 'ತೀನ್ಮಾರ್' ಚಿತ್ರದ ಮೂಲಕ ಟಾಲಿವುಡ್ಗೆ ಪ್ರವೇಶಿಸಿದ್ದರು. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ ನಟಿಸುವಾಗ ಇಬ್ಬರ ನಡುವೆ ಸ್ನೇಹ ಬೆಳೆದು, ಬಳಿಕ ಪ್ರೀತಿಗೆ ತಿರುಗಿತ್ತು. 2013ರಲ್ಲಿ ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ಎರ್ರಗಡ್ಡದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇವರ ವಿವಾಹ ನೋಂದಣಿಯಾಗಿತ್ತು. ದಂಪತಿಗೆ ಪೋಲೆನಾ ಅಂಜನಾ ಪವನೋವಾ ಎಂಬ ಮಗಳು ಹಾಗೂ ಮಾರ್ಕ್ ಶಂಕರ್ ಪವನೋವಿಚ್ ಎಂಬ ಮಗನಿದ್ದಾರೆ.
55
ಸದ್ಯ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ರಾಜಕೀಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಅನ್ನಾ ಅವರಿಂದ ಪವನ್ ದೂರವಾಗಲು ಕಾರಣವೇನು ಎಂಬ ಪ್ರಶ್ನೆ ಮಾತ್ರ ಇನ್ನೂ ಉತ್ತರ ಸಿಗದ ಕುತೂಹಲವಾಗಿಯೇ ಉಳಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.