ಬಿಗ್ಬಾಸ್ 12ರ ಸ್ಪರ್ಧಿ ರಿಷಾ ಗೌಡ, ತಾವು ಶೋಗೆ ಎಂಟ್ರಿ ಕೊಟ್ಟಿದ್ದರ ಹಿಂದಿನ ಕಾರಣವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 11ನೇ ಸೀಸನ್‌ಗೆ ಬಂದಿದ್ದ ಆಫರ್ ನಿರಾಕರಿಸಿದ್ದ ಅವರು, ಪದೇ ಪದೇ ಇಲ್ಲ ಎನ್ನಲಾಗದೆ 12ನೇ ಸೀಸನ್‌ಗೆ ಒಪ್ಪಿಕೊಂಡಿದ್ದಾಗಿ ತಿಳಿಸಿದ್ದಾರೆ.
ಬಿಗ್ಬಾಸ್ 12 (Bigg Boss 12)ರ ಟಫೆಸ್ಟ್ ಸ್ಪರ್ಧಿ ಎನ್ನಿಸಿಕೊಂಡಿದ್ದ ರಿಷಾ ಗೌಡ ಅವರು, 'ಬಿಗ್ ಬಾಸ್'ಗೆ ಎಂಟ್ರಿ ಕೊಟ್ಟ 5ನೇ ವಾರದಲ್ಲಿ ದೊಡ್ಮನೆಯಿಂದ ಔಟ್ ಆಗಿ ಹೊರ ಬಂದವರು. ನಟಿ, ಮಾಡೆಲ್, ರಂಗಭೂಮಿ ಕಲಾವಿದೆ, ರಾಷ್ಟ್ರೀಯ ಕ್ರೀಡಾಸ್ಪರ್ಧಿಯಾಗಿದ್ದಾರೆ.
26
ಬಿಗ್ಬಾಸ್ಗೆ ಹೋಗಿದ್ದೇಕೆ?
ಇಂತಿಪ್ಪ ರಿಷಾ ಗೌಡ, ತಾವು ಬಿಗ್ಬಾಸ್ಗೆ ಹೋಗಿದ್ದೇಕೆ ಎನ್ನುವ ಗುಟ್ಟನ್ನು ಇದೀಗ ರಿವೀಲ್ ಮಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಿಷಾ ಅವರು, ಈ ವಿಷಯವನ್ನು ತಿಳಿಸಿದ್ದಾರೆ. ನನಗೆ 11ನೇ ಸೀಸನ್ನಲ್ಲಿಯೇ ಕರೆ ಬಂದಿತ್ತು. ಆದರೆ ತುಂಬಾ ಬಿಜಿಯಾಗಿದ್ದ ಕಾರಣ, ಹೋಗಲು ಆಗಿರಲಿಲ್ಲ ಎಂದಿದ್ದಾರೆ.
36
ಈ ಸಲವೂ ಕರೆ ಬಂತು
ಈ ಸಲವೂ ಕರೆಬಂದಿತ್ತು. ನೀವು ಬರಲೇಬೇಕು ಎಂದು ಕರೆ ಮಾಡಿದ್ದರು. ಪದೇ ಪದೇ ಇಲ್ಲ ಎನ್ನಲು ಚೆನ್ನಾಗಿರಲ್ಲ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. ಈ ಸಲವೂ ಬಿಜಿ ಇದ್ದೆ. ಅವುಗಳ ನಡುವೆಯೇ ಸಮಯ ಹೊಂದಾಣಿಕೆ ಮಾಡಿಕೊಂಡು ಬಂದೆ. ಕಳೆದ ಬಾರಿ ಹೋಗದೇ ಇದ್ದುದಕ್ಕೆ ಈ ಸಲ ಕರೆ ಬರಬಹುದು ಎಂದು ಗೊತ್ತಿತ್ತು. ಅದಕ್ಕಾಗಿಯೇ ಸಿದ್ಧವಾಗಿದ್ದೆ ಎಂದಿದ್ದಾರೆ ನಟಿ.
ಅಷ್ಟಕ್ಕೂ ರಿಷಾ ಗೌಡ ಕುರಿತು ಹೇಳುವುದಾದರೆ, ಇವರು ಮೈಸೂರಿನವರು. 2019ರಲ್ಲಿ ಮಿಸ್ ಮೈಸೂರು, 2020ರಲ್ಲಿ ಮಿಸ್ ಕರ್ನಾಟಕ ಪಟ್ಟ ಗೆದ್ದಿದ್ದಾರೆ. 2021ರಲ್ಲಿ 'ಕ್ರೇಜಿ ಕೀರ್ತಿ' ಸಿನಿಮಾದಲ್ಲಿ ನಟಿಸಿದ್ದು, ಇದು SIIMAಯಲ್ಲಿ ಅತ್ಯುತ್ತಮ ಚೊಚ್ಚಲ ನಟಿ ವಿಭಾಗಕ್ಕೆ ನಾಮನಿರ್ದೇಶನಗೊಂಡಿತು.
56
ಹಲವು ಭಾಷೆಗಳಲ್ಲಿ ನಟನೆ
ನಂತರ 'ಜೂನಿಯರ್' (ತೆಲುಗು) ಮತ್ತು 'ಆಸ್ಟಿನ್ ನ ಮಹಾನ್ ಮೌನ', ಭಗೀರಥ ಸಿನಿಮಾಗಳಲ್ಲಿ ನಟಿಸಿದರು. 'ಬೆಂಗಳೂರು ಇನ್' (ಧರ್ಮ ಕೀರ್ತಿ ನಿರ್ದೇಶನ), 'ಪ್ರರಕಾಮಿ' (ಪ್ರಮೋದ್ ಶೆಟ್ಟಿ ನಟಿಸಿದ್ದು), 'ಪಿಂಗಕ್ಷ' ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾಗಳಾದ 'ಮಿಸ್ ಕರೋನಲ್', 'ಡಿಯರ್ ಲವ್'ಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
66
ರಂಗಭೂಮಿ ನಂಟು
ರಿಷಾ ಗೌಡಗೆ ರಂಗಭೂಮಿ ನಂಟು ಕೂಡ ಇದೆ. ರಿಷಾ "ಬಿಗ್ ಬಾಸ್ ಮೂಲಕ ಜನರ ಪ್ರೀತಿಯನ್ನು ಸಂಪಾದಿಸಬಹುದು. ಅದಕ್ಕಾಗಿ ನಾನು ಈ ಮನೆಗೆ ಬಂದಿದ್ದೇನೆ" ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.