ನಟಿ ರಾಶಿ ಖನ್ನಾ ಅವರ ಕ್ಯಾರವಾನ್‌ನಿಂದ 50,000 ರೂಪಾಯಿ ನಗದು ಕಳವಾಗಿತ್ತು. ತನಿಖೆ ನಡೆಸಿದಾಗ, ಕ್ಯಾರವಾನ್ ಸಿಬ್ಬಂದಿಯೇ ಕಳ್ಳತನ ಮಾಡಿರುವುದು ಪತ್ತೆಯಾಗಿದ್ದು, ಆ ಹಣ ನಟಿಯ ಮ್ಯಾನೇಜರ್‌ಗೆ ಸೇರಿದ್ದೆಂದು ಅವರ ತಂಡ ಸ್ಪಷ್ಟಪಡಿಸಿದೆ.
ನಟಿ ರಾಶಿ ಖನ್ನಾ ಅವರ ಕ್ಯಾರವಾನ್‌ನಲ್ಲಿ ಇರಿಸಲಾಗಿದ್ದ ಬ್ಯಾಗ್‌ನಿಂದ 50,000 ರೂಪಾಯಿ ನಗದು ನಾಪತ್ತೆಯಾಗಿತ್ತು. ಹಣ ಕಾಣದಿದ್ದಾಗ ಸೆಟ್‌ನಲ್ಲಿ ತಪಾಸಣೆ ನಡೆಸಲಾಗಿ ಕಳ್ಳತನವಾಗಿರುವುದು ದೃಢಪಟ್ಟಿದೆ.
25
ಸಿಕ್ಕಿಬಿದ್ದ ಕ್ಯಾರವಾನ್ ಸಿಬ್ಬಂದಿ
ಕಳ್ಳತನದ ಬಗ್ಗೆ ತನಿಖೆ ನಡೆಸಿದಾಗ ಕ್ಯಾರವಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಆತನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಭದ್ರತಾ ಸಿಬ್ಬಂದಿ, ಹಣವನ್ನು ವಶಪಡಿಸಿಕೊಂಡಿದ್ದಾರೆ.
35
ಕೆಲಸದಿಂದ ವಜಾ ಮತ್ತು ಹಲ್ಲೆ
ಕಳ್ಳತನದ ಆರೋಪದ ಮೇಲೆ ಕ್ಯಾರವಾನ್ ಸಿಬ್ಬಂದಿಯನ್ನು ಸಿನಿಮಾ ಸೆಟ್‌ನಿಂದ ತಕ್ಷಣವೇ ಹೊರಹಾಕಲಾಗಿದೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ಕೆಲವು ವರದಿಗಳು ಹೊರಬಂದಿವೆ.
ಈ ಹಣ ರಾಶಿ ಖನ್ನಾ ಅವರದ್ದಲ್ಲ, ಬದಲಾಗಿ ಅವರ ಮ್ಯಾನೇಜರ್‌ಗೆ ಸೇರಿದ್ದು ಎಂದು ನಟಿಯ ತಂಡ ಸ್ಪಷ್ಟಪಡಿಸಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ. ಈ ಘಟನೆಗೆ ಸಂಬಂಧಿಸಿದಂತೆ ನಟಿ ರಾಶಿ ಖನ್ನಾ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
55
ಸಿನಿಮಾಗಳಲ್ಲಿ ಬ್ಯುಸಿ ಇರುವ ರಾಶಿ
ಸದ್ಯ ಅನೀಸ್ ಬಜ್ಮಿ ಅವರ ಮುಂಬರುವ ಸಿನಿಮಾದಲ್ಲಿ ರಾಶಿ ಖನ್ನಾ ನಟಿಸುತ್ತಿದ್ದಾರೆ. ಇತ್ತೀಚೆಗೆ 'ಉಸ್ತಾದ್ ಭಗತ್ ಸಿಂಗ್'ನಲ್ಲಿ ಕಾಣಿಸಿಕೊಂಡಿದ್ದ ಅವರು, 'ಫರ್ಜಿ 2' ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂನ 'ವಿಲ್ಲನ್' ಮತ್ತು 'ಭ್ರಮಮ್' ಚಿತ್ರಗಳಲ್ಲೂ ಇವರು ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.