ತಾಯಿಯಾಗ್ತಿದ್ದಾರೆ ಹಿಂದಿಯ 'ಶಕೀಲಾ..', ಇನ್ಸ್‌ಟಾಗ್ರಾಮ್‌ನಲ್ಲಿ ನ್ಯೂಸ್‌ ನೀಡಿದ ಜೋಡಿ!

First Published | Feb 10, 2024, 10:57 PM IST


ಬಾಲಿವುಡ್‌ನ  ಮತ್ತೊಂದು ಹೊಸ ಜೋಡಿ ಶುಭ ಸುದ್ದಿ ನೀಡಿದೆ. ತಾವು ತಂದೆ-ತಾಯಿ ಆಗುತ್ತಿರುವುದನ್ನು ಜೋಡಿ ಬಹಳ ವಿಶೇಷವಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಪ್ರಕಟಿಸಿದೆ.
 

ಬಾಲಿವುಡ್‌ನ ಫೇಮ್‌ ಜೋಡಿಗಳಲ್ಲಿ ಒಂದಾದ ರಿಚಾ ಚಡ್ಡಾ ಹಾಗೂ ಅಲಿ ಫಜಲ್‌ ಜೋಡಿ ಶುಭ ಸುದ್ದಿ ನೀಡಿದೆ. ತಾವು ತಂದೆ-ತಾಯಿ ಆಗುತ್ತಿರುವುದಾಗಿ ಜೋಡಿ ಪ್ರಕಟಿಸಿದೆ.
 

ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ದ್ವಿಭಾಷಾ ಚಲನಚಿತ್ರ 'ಶಕೀಲಾ..' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿರುವ ರಿಚಾ ಚಡ್ಡಾ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು.
 

Tap to resize

ಇನ್ಸ್‌ಟಾಗ್ರಾಮ್‌ನಲ್ಲಿ '1+1=3' ಎಂದು ಪೋಸ್ಟ್‌ ಹಂಚಿಕೊಳ್ಳುವ ಮೂಲಕ ರಿಚಾ ಚಡ್ಡಾ ಹಾಗೂ ಅಲಿ ಫಜಲ್‌ ತಾವು ಪೋಷಕರಾಗುತ್ತಿರುವ ಬಗ್ಗೆ ಪ್ರಕಟಿಸಿದ್ದಾರೆ.

ಶುಕ್ರವಾರ ಅಲಿ ಫಜಲ್‌ ಹಾಗೂ ರಿಚಾ ಚಡ್ಡಾ ಇಬ್ಬರೂ ಕೂಡ ತಮ್ಮ ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ಒಂದೇ ರೀತಿಯ ಪೋಸ್ಟ್‌ ಹಾಗೂ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಈ ಸುದ್ದಿ ತಿಳಿಸಿದ್ದಾರೆ.
 

2022ರ ಸೆಪ್ಟೆಂಬರ್‌ 23 ರಂದು ವಿವಾಹವಾಗಿದ್ದ ಈ ಜೋಡಿ, ಆ ಬಳಿಕ ಮುಂಬೈ, ದೆಹಲಿ ಹಾಗೂ ಲಕ್ನೋದಲ್ಲಿ ಆರತಕ್ಷತೆ ಸಮಾರಂಭ ನಡೆಸಿತ್ತು.

ಕಳೆದ ವರ್ಷ ರಿಚಾ ಚಡ್ಡಾ ಹಾಗೂ ಅಲಿ ಫಜಲ್‌ ಅದ್ದೂರಿಯಾಗಿ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದ್ದರು.

ಇದರ ಬೆನ್ನಲ್ಲಿಯೇ ದಂಪತಿಗಳು ತಾವು ಪಾಲಕರಾಗುತ್ತಿರುವ ಸುದ್ದಿ ನೀಡಿದ್ದಾರೆ. ಈ ಸುದ್ದಿ ಘೋಷಿಸಿದ ಬೆನ್ನಲ್ಲಿಯೇ ಜೋಡಿಗೆ ಅಭಿನಂದನೆಗಳ ಮಹಾಪೂರವೇ ಹರಿದಿದೆ.

ಒಂದು ಚಿಕ್ಕ ಹಾರ್ಟ್‌ಬೀಟ್‌, ನಮ್ಮ ಜಗತ್ತಿನಲ್ಲಿ ಅತಿದೊಡ್ಡ ಶಬ್ದ ಎಂದು ಈ ಜೋಡಿ ತಮ್ಮ ಚಿತ್ರಗಳಿಗೆ ಶೀರ್ಷಿಕೆ ನೀಡಿ ಪ್ರೆಗ್ನೆನ್ಸಿ ನ್ಯೂಸ್‌ ಹಂಚಿಕೊಂಡಿದೆ.

ಸಾಕಷ್ಟು ಬಾಲಿವುಡ್‌ ಸೆಲೆಬ್ರಿಟಿಗಳು ಇವರ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ. ಸಬಾ ಆಜಾದ್‌, ಸಯ್ಯಾಮಿ ಖೇರ್‌, ಕರೀಷ್ಮಾ ತನ್ನಾ, ಕಲ್ಲಿ ಕೊಚಿನ್‌, ಸುಶಾಂತ್‌ ದಿವಿಗ್‌ಕರ್‌, ಆಕೃತಿ ಕಕ್ಕರ್‌ ಜೋಡಿಗೆ ಶುಭ ಕೋರಿದೆ.

ರಿಚಾ ಚಡ್ಡಾ ಹಾಗೂ ಅಲಿ ಫಜಲ್‌ ಮೊಟ್ಟಮೊದಲಿ ಫುಕ್ರೆ ಸಿನಿಮಾದ ಸೆಟ್‌ನಲ್ಲಿ ಭೇಟಿಯಾಗಿದ್ದರು. ಅಲ್ಲಿಂದಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

2012ರಿಂದ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಅಂದಾಜು 10 ವರ್ಷಗಳ ಡೇಟಿಂಗ್‌ನ ಬಳಿಕ 2022ರಲ್ಲಿ ಈ ಜೋಡಿ ಅದ್ದೂರಿಯಾಗಿ ವಿವಾಹವಾಗಿತ್ತು.

ಗ್ಯಾಂಗ್ಸ್‌ ಆಫ್‌ ವಾಸ್ಸೆಪುರ್‌ ಸಿನಿಮಾದ ಮೂಲಕ ರಿಚಾ ಚಡ್ಡಾ ಪ್ರಸಿದ್ಧರಾಗಿದ್ದರೆ, ಅಲಿ ಫಜಲ್‌ 'ಮಿರ್ಜಾಪುರ್‌' ವೆಬ್‌ ಸಿರೀಸ್‌ನಲ್ಲಿ ತಮ್ಮ ಗುಡ್ಡು ಪಂಡಿತ್‌ ಪಾತ್ರದಿಂದ ಜನಪ್ರಿಯರಾಗಿದ್ದಾರೆ.

Latest Videos

click me!