Latest Videos

ಬೆಕ್ಕು, ನಾಯಿ ಜತೆಗಿನ ಫೋಟೋ ರಶ್ಮಿಕಾ ಹಂಚಿಕೊಂಡ್ರೆ, 'ಪ್ರಾಣಿಗಳಿಗೆ ನಿಯತ್ತಿದೆ..' ಅಂತಾ ಕಾಮೆಂಟ್‌ ಬರೋದ್ಯಾಕೆ?

First Published May 24, 2024, 7:30 PM IST

ನಟಿ ರಶ್ಮಿಕಾ ಮಂದಣ್ಣ ಶುಕ್ರವಾರ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ತಾವು ಪ್ರಾಣಿಗಳ ಜೊತೆ ಇರುವ ಕೆಲವೊಂದು ಫೋಟೋಸ್‌ಗಳನ್ನು ಹಂಚಿಕೊಂಡಿದ್ದಾರೆ.
 

ನಟಿ ರಶ್ಮಿಕಾ ಶುಕ್ರವಾರ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಸಾಕಷ್ಟು ಕಲರ್‌ಫುಲ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಈ ಚಿತ್ರಗಳಲ್ಲಿ ಬರೀ ರಶ್ಮಿಕಾ ಮಾತ್ರವೇ ಇಲ್ಲ, ಅವರ ನೆಚ್ಚಿನ ಪ್ರಾಣಿಗಳು ಕೂಡ ಈ ಫೋಟೋಗಳಲ್ಲಿವೆ. ಪ್ರಾಣಿಪ್ರಿಯರು ಕೂಡ ಈ ಫೋಟೋಗಳನ್ನು ಮೆಚ್ಚಿಕೊಂಡಿದ್ದಾರೆ.

ಇನ್ಸ್‌ಟಾಗ್ರಾಮ್‌ನಲ್ಲಿ 10ಕ್ಕೂ ಅಧಿಕ ಫೋಟೋಗಳನ್ನು ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ತಮ್ಮ ಮನೆಯಲ್ಲಿರುವ ಪ್ರಾಣಿಗಳ ವಿವರಗಳನ್ನು ನೀಡಿದ್ದಾರೆ.

ವಿವಿಧ ತಳಿಯ ತಾಯಿಗಳೊಂದಿಗೆ ಅವರು ತೆಗೆದುಕೊಂಡಿರುವ ಫೋಟೋಗಳು ಬಹಳ ಮುದ್ದಾಗಿ ಬಂದಿವೆ. ಈ ಫೋಟೋಗಳನ್ನು ಕಂಡು ಅಪಾರ ಮಂದಿ ಮೆಚ್ಚಿಕೊಂಡಿದ್ದಾರೆ.

ಫೋಟೋಗಳನ್ನು ಹಂಚಿಕೊಳ್ಳುವುದರೊಂದಿಗೆ ಅವರು ಪೋಸ್ಟ್‌ನ ವಿವರವನ್ನೂ ಅವರು ಹಾಕಿಕೊಂಡಿದ್ದಾರೆ. ಇನ್ನು ಇವರ ಈ ಫೋಟೋಗಳನ್ನು ನೋಡಿದವರು, 'ಪ್ರಾಣಿಗಳಿಗೆ ನಿಯತ್ತಿದೆ..' ಎಂದು ಕಾಮೆಂಟ್‌ ಮಾಡಿದ್ದಾರೆ. 

ಯಾವಾಗ ಬೇಕಾದರೂ ಇರಲಿ ನಾನು ನನ್ನ ಸುತ್ತಲೂ ತುಪ್ಪಳವನ್ನೇ ಹೊಂದಿರುವ ಇವುಗಳನ್ನೇ ಕಾಣುತ್ತೇನೆ. ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುವುದು ನನಗೆ ಸಾರ್ವತ್ರಿಕ ಒತ್ತಾಯದಂತೆ ಭಾಸವಾಗುತ್ತದೆ ಎಂದು ರಶ್ಮಿಕಾ ಬರೆದಿದ್ದಾರೆ.


ಇಂದು ನಾನು ಗ್ಯಾಲರಿಯನ್ನು ಸರ್ಚ್‌ ಮಾಡುವ ವೇಳೆ, ಹಿಂದೆಂದೂ ಹಂಚಿಕೊಳ್ಳದ ಕೆಲವು ಸುಂದರ ಕ್ಷಣಗಳು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಬರೆದಿದ್ದಾರೆ.

ಒಮ್ಮೊಮ್ಮೆ ನನಗೆ ನನ್ನ ಜೊತೆ ಇರುವ ಇಂಥ ಪ್ರಾಣಿಗಳ ಪ್ರತ್ಯೇಕ ಸರಣಿಗಳನ್ನು ಮಾಡಬೇಕು ಅನಿಸುತ್ತದೆ. ಈಗ ನಿಮ್ಮನ್ನು ಸುಮ್ಮನೆ ನಗಿಸುವ ಸಲುವಾಗಿ ಈ ಫೋಟೋ ಹಂಚಿಕೊಂಡಿದ್ದೇನೆ ಎಂದು ಅವರು ಬರೆದಿದ್ದಾರೆ.

ರಶ್ಮಿಕಾ ಮಂದಣ್ಣ ಅವರ 10ಕ್ಕೂ ಹೆಚ್ಚು ಫೋಟೋಗಳು ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, ಇದನ್ನು ನೋಡಿ ನಿಮ್ಮ ಮನೆಯ ನಾಯಿ ಬೆಕ್ಕು ನೋಡಿ ಹೊಟ್ಟೆ ಉರಿಯುತ್ತಿದೆ ಎಂದಿದ್ದಾರೆ.

ನಿಮ್ಮ ಹಿಂದಿನ ಚುನಾವಣಾ ಪ್ರಚಾರದ ಪೋಸ್ಟ್‌ಗಿಂತ ಈ ಪೋಸ್ಟ್‌ ನನ್ನ ಹೃದಯವನ್ನು ಮೃದು ಮಾಡಿದೆ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

click me!