ಹೀಟ್‌ವೇವ್‌ನಲ್ಲಿ ಹಾರ್ಟ್‌ಬೀಟ್‌ ಏರಿಸಿದ ಅಮಿಷಾ ಪಟೇಲ್‌ 'ಹಾಟ್‌' ಲುಕ್‌!


ದೇಶದ ಎಲ್ಲಾ ಕಡೆ ಹೀಟ್‌ವೇವ್‌ ತಾಂಡವವಾಡ್ತಾ ಇದ್ರೆ, ಇಂಟರ್ನೆಟ್‌ನಲ್ಲಿ ಮಾತ್ರ ಅಮಿಶಾ ಪಟೇಲ್‌ ಅವರ ಹಾಟ್‌ ಲುಕ್‌ ಪಡ್ಡಹುಡುಗರ ಹಾರ್ಟ್‌ಬೀಟ್‌ ಏರಿಸಿದೆ.
 

ದೇಶದ ಎಲ್ಲಾ ಕಡೆ ಹೀಟ್‌ವೇವ್‌ ತಾಂಡವವಾಡ್ತಾ ಇದೆ. ಕೇರಳಕ್ಕೆ ಪ್ರವೇಶ ಪಡೆದಿರುವ ಮಾನ್ಸೂನ್‌ ಆದಷ್ಟು ಶೀಘ್ರವಾಗಿ ದೇಶಕ್ಕೆ ವ್ಯಾಪಿಸಲಿ ಅನ್ನೋ ಹಾರೈಕೆಯಲ್ಲಿ ಜನರಿದ್ದಾರೆ.

ಇದರ ನಡುವೆ ಇಂಟರ್ನೆಟ್‌ನಲ್ಲೂ ಹೀಟ್‌ವೇವ್‌ ಶುರುವಾಗಿದೆ. ಈ ಹಾಟ್‌ ವೇವ್‌ಗೆ ಕಾರಣರಾದವರು ಬಾಲಿವುಡ್‌ ನಟಿ ಅಮಿಶಾ ಪಟೇಲ್‌.


ಅಮಿಶಾ ಪಟೇಲ್‌ ತಮ್ಮ ಇನ್ಸ್‌ಟಾಗ್ರಾಮ್‌ ಫಾಲೋವರ್‌ಗಳಿಗಾಗಿ ಸ್ಟೈಲಿಶ್‌ ಹಾಟ್‌ ಫೋಟೋಗಳನ್ನು ಒಂದು ದಿನದ ಹಿಂದೆಯಷ್ಟೇ ಪೋಸ್ಟ್‌ ಮಾಡಿದ್ದಾರೆ.

ಪೂಲ್‌ಸೈಡ್‌ನಲ್ಲಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದು, ಸ್ಟೈಲಿಶ್ ಚೆಕರ್ಡ್ ಬ್ರಾ ಟಾಪ್ ಮತ್ತು ಹಾಟ್ ಶಾರ್ಟ್ಸ್‌ನಲ್ಲಿ ಅವರು ಮಿಂಚಿದ್ದಾರೆ.


ಅಮಿಶಾ ಪಟೇಲ್‌ ಅವರ ಈ ಫೋಟೋ ನೋಡಿದವರೆಲ್ಲ, ಈ ಬೇಸಿಗೆಯಲ್ಲಿ ಟೆಂಪರೇಚರ್‌ಅನ್ನು ಅವರು ಇನ್ನಷ್ಟು ಹೀಟ್‌ ಮಾಡಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ.

ನಟಿ ತನ್ನ ಸಮ್ಮರ್ ಲುಕ್‌ನೊಂದಿಗೆ ಫ್ಯಾಷನಿಸ್ಟ್‌ಗಳು ಮತ್ತು ಅಭಿಮಾನಿಗಳನ್ನು ಸೆಳೆಯವಂಥ ಅದ್ಭುತವಾದ ಪೂಲ್‌ಸೈಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

ಅಮಿಶಾ ಪಟೇಲ್‌ ಅವರ ಟ್ರೆಂಡಿ ಡ್ರೆಸ್‌ ಮತ್ತು ರಿಫ್ರೆಶ್ ಪೂಲ್‌ಸೈಡ್ ಸೆಟ್ಟಿಂಗ್ ಬೇಸಿಗೆಯ ವಿಶ್ರಾಂತಿ ಮತ್ತು ಶೈಲಿಯ ನೋಟವನ್ನು ಸೂಕ್ತವಾಗಿ ಸೆರೆಹಿಡಿದಿದೆ.

48 ವರ್ಷದ ನಟಿ ಅಮಿಶಾ ಪಟೇಲ್‌, 2023ರಲ್ಲಿ ಬಿಡುಗಡೆಯಾದ ಗದ್ದರ್‌-2 ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದರಲ್ಲಿ ಸಕೀನಾ ಪಾತ್ರದಲ್ಲಿ ಅವರು ನಟಿಸಿದ್ದರು.

2024ರಲ್ಲಿ ಇವರ ನಟನೆಯ ತೌಬಾ ತೇರೆ ಜಲ್ವಾ ಸಿನಿಮಾ ಬಿಡುಗಡೆಯಾಗಬೇಕಿದೆ. ಇದರಲ್ಲ ಅಮಿಶಾ ಪಟೇಲ್‌ ಲೈಲಾ ಖಾನ್‌ ಪಾತ್ರದಲ್ಲಿ ನಟಿಸಿದ್ದಾರೆ.

2001ರಲ್ಲಿ ಗದ್ದರ್‌ ಏಕ್‌ ಪ್ರೇಮ್‌ಕಥಾ ಚಿತ್ರದಲ್ಲಿ ನಟಿಸಿದ್ದ ಅಮಿಶಾ ಪಟೇಲ್‌, ಈಗ ಗದ್ದರ್‌-2 ಸಿನಿಮಾದ ದೊಡ್ಡ ಯಶಸ್ಸಿನಲ್ಲಿ ತೇಲುತ್ತಿದ್ದಾರೆ.

Latest Videos

click me!