ಒಂದು ಕಾಲದಲ್ಲಿ ಸ್ಕೂಲ್‌ ಫೀ ಕಟ್ಟೋಕು ಹಣವಿರ್ಲಿಲ್ಲ..ಈಗ 800 ಕೋಟಿಯ ಅರಮನೆಯಲ್ಲಿ ನಟಿಯ ವಾಸ!

Published : May 23, 2024, 02:42 PM ISTUpdated : May 23, 2024, 08:28 PM IST

ಇಂದು ಈಕೆ ಪ್ರಖ್ಯಾತ ನಟಿ. ಸಿನಿಮಾ ಹಿನ್ನಲೆಯಿಂದ ಬಂದ ಕುಟುಂಬವಾಗಿದ್ದರೂ ಒಂದು ಕಾಲದಲ್ಲಿ ಈಕೆಯ ಶಾಲೆಯ ಫೀಸ್‌ ಕಟ್ಟೋಕು ಹಣವಿರಲಿಲ್ಲ. ಆದರೆ, ಇಂದು ಇದೇ ನಟಿ 800 ಕೋಟಿಯ ಐಷಾರಾಮಿ ಅರಮನೆಯಲ್ಲಿ ವಾಸ ಮಾಡುತ್ತಿದ್ದಾರೆ.  

PREV
115
ಒಂದು ಕಾಲದಲ್ಲಿ ಸ್ಕೂಲ್‌ ಫೀ ಕಟ್ಟೋಕು ಹಣವಿರ್ಲಿಲ್ಲ..ಈಗ 800 ಕೋಟಿಯ ಅರಮನೆಯಲ್ಲಿ ನಟಿಯ ವಾಸ!

ಸಿನಿಮಾ ಸೆಲೆಬ್ರಿಟಿಗಳ ಮಕ್ಕಳು ಬೆಳ್ಳಿ ಚಮಚವನ್ನ ಬಾಯಲಿಟ್ಟುಕೊಂಡು ಹುಟ್ಟುತ್ತಾರೆ ಅನ್ನೋದು ಸಾಮಾನ್ಯವಾಗಿ ಇರುವ ಅಭಿಪ್ರಾಯ. ಕೆಲವು ಸ್ಟಾರ್‌ಗಳ ಮಕ್ಕಳು ಚಿಕ್ಕಂದಿನಿಂದಲೂ ಐಷಾರಾಮಿ ಜೀವನ ನಡೆಸ್ತಾರೆ ಅನ್ನೋದು ನಿಜ.

215

ಆದರೆ, ಎಲ್ಲಾ ಸ್ಟಾರ್‌ಗಳ ಮಕ್ಕಳು ಇದೇ ರೀತಿ ಬೆಳೆಯುತ್ತಾರೆ ಅನ್ನೋ ಅಭಿಪ್ರಾಯವಿದ್ದರೆ ಅದು ಸುಳ್ಳು. ಕೆಲವು ಸ್ಟಾರ್‌ಗಳ ಮಕ್ಕಳು ಬಾಲ್ಯದಲ್ಲಿ ಬಡತನದ ವಾತಾವರಣದಲ್ಲೇ ಬೆಳೆದಿರುತ್ತಾರೆ. ನಂತರ ತಮ್ಮ ನಟನಾ ಕೌಶಲದಿಂದ ಕೋಟಿ ಕೋಟಿ ಗಳಿಸಿರುತ್ತಾರೆ.

315

ಅಂಥಾ ಒಬ್ಬರು ಸ್ಟಾರ್‌ನ ಬಗ್ಗೆ ನೀವು ಈ ಸುದ್ದಿಯಲ್ಲಿ ತಿಳಿಯಲಿದ್ದೀರಿ. ಈ ನಟಿ ಬೇರೆ ಯಾರೂ ಅಲ್ಲ. ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌.

415

ನಿಮಗೆ ಗೊತ್ತಿರಲಿ, ಕರೀನಾ ಕಪೂರ್ ಖ್ಯಾತ ಬಾಲಿವುಡ್ ನಟ ಮತ್ತು ನಿರ್ದೇಶಕ ರಾಜ್ ಕಪೂರ್ ಅವರ ಮೊಮ್ಮಗಳು. ರಾಜ್‌ ಕಪೂರ್‌ ಎಂದರೆ ಒಂದು ಕಾಲದಲ್ಲಿ ಬಾಲಿವುಡ್‌ನ ಪ್ರಖ್ಯಾತ ಸ್ಟಾರ್‌.

515

ಕರೀನಾ ಕಪೂರ್‌ ತಂದೆ ಸ್ಟಾರ್ ಜೋಡಿಯಾದ ರಣಧೀರ್‌ ಕಪೂರ್‌ ಹಾಗೂ ಬಬಿತಾ. ನಟಿ ಕರೀಷ್ಮಾ ಕಪೂರ್‌ ಈಕೆಯ ಅಕ್ಕ. 90ರ ದಶಕದಲ್ಲಿ ಕರೀಷ್ಮಾ ಕಪೂರ್‌ ಕೂಡ ಬಾಲಿವುಡ್‌ನ ಹೆಸರಾಂತ ಕಲಾವಿದೆಯಾಗಿದ್ದರು.

 

 

615

ಆದರೆ, ತಮ್ಮ ಮಕ್ಕಳ ಬಾಲ್ಯದ ದಿನಗಳ ಬಗ್ಗೆ ಹಿಂದೊಮ್ಮೆ ಮಾತನಾಡಿದ್ದ ಇವರ ತಂದೆ ರಣಧೀರ್‌, 80ರ ದಶಕದಲ್ಲಿ ನಮ್ಮ ಇಡೀ ಕುಟುಂಬ ಕಠಿಣ ಸಮಯ ಎದುರಿಸಿತ್ತು ಎಂದು ಹೇಳಿದ್ದರು. ಇವರಿಬ್ಬರ ಶಾಲೆಯ ಫೀ ಕೂಡ ಕಟ್ಟೋಕೆ ತಮ್ಮಲ್ಲಿ ಹಣವಿದ್ದಿರಲಿಲ್ಲ ಎಂದಿದ್ದರು.

 

715

ಅದೇ ರೀತಿ ಕರೀನಾ ಕಪೂರ್‌ ಕೂಡ ತಮ್ಮ ಬಾಲ್ಯದ ಬಡತನದ ಬಗ್ಗೆ ಮಾತನಾಡಿದ್ದರು. ನಾನು ಮತ್ತು ತನ್ನ ಸಹೋದರಿ ಬಾಲ್ಯದಲ್ಲಿ ಐಷಾರಾಮಿ ಜೀವನವನ್ನು ನಡೆಸಲಿಲ್ಲ  ಎಂದು ಕರೀನಾ ಕಪೂರ್‌ ತಿಳಿಸಿದ್ದರು.

815

ಕಾಲೇಜು ದಿನಗಳವರೆಗೂ ನಮಗೆ ಸಾಲಗಳಿಂದಾಗಿ ಕಷ್ಟಗಳೇ ಇದ್ದವು. ಅಕ್ಕ ಕರೀಷ್ಮಾ ಕಾಲೇಜಿಗೆ ಎಲೆಕ್ಟ್ರಿಕ್‌ ರೈಲಿನಲ್ಲಿ ಹೋಗ್ತಾ ಇದ್ದಳು. ನಾನು ಬಸ್‌ನಲ್ಲ ಶಾಲೆಗೆ ಹೋಗುತ್ತಿದ್ದೆ ಎಂದಿದ್ದಾರೆ. ಒಂದು ಕಾಲದಲ್ಲಿ ನಮ್ಮ ಕುಟುಂಬ ಬಡತನದ ಅಂಚಿಗೆ ಬಂದು ನಿಂತಿತ್ತು ಎಂದೂ ತಿಳಿಸಿದ್ದಾರೆ.

 

915

2000 ಇಸವಿಯಲ್ಲಿ ಬಾಲಿವುಡ್‌ಗೆ ಕಾಲಿಟ್ಟ ಕರೀನಾ ಕಪೂರ್‌ ಬಳಿಕ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡರು. ಕರೀನಾ ಇಲ್ಲಿಯವರೆಗೂ ಬಾಲಿವುಡ್‌ನಲ್ಲಿ 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

 

1015

ಶಾರುಖ್ ಖಾನ್, ಹೃತಿಕ್ ರೋಷನ್, ಅಮೀರ್ ಖಾನ್ ಮುಂತಾದ ಹಲವು ಟಾಪ್ ನಟರೊಂದಿಗೆ ನಟಿಸಿದ್ದಾರೆ. ಕರೀನಾ ಬಾಲಿವುಡ್‌ನ ಅತಿ ಹೆಚ್ಚು ಗಳಿಕೆ ಮಾಡಿದ ಕೆಲವು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

 

1115

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಗರಿಷ್ಠ ವೇತನ ಪಡೆಯುವ ನಟಿಯರ ಪೈಕಿ ಇವರೂ ಒಬ್ಬರಾಗಿದ್ದರು. ಇಂದಿಗೂ ಕೂಡ ಕರೀನಾ ಬಾಲಿವುಡ್‌ನಲ್ಲಿ ಬೇಡಿಕೆಯನ್ನೂ ಇರಿಸಿಕೊಂಡಿದ್ದಾರೆ.

1215

ಇಂದು ಕರೀನಾ ಕಪೂರ್‌ ಖಾನ್‌ ಒಂದು ಸಿನಿಮಾಗೆ 8 ರಿಂದ 18 ಕೋಟಿಯವರೆಗೆ ಸಂಭಾವನೆ ಪಡೆದುಕೊಳ್ಳುತ್ತಾರೆ. ಅವರ ಆಸ್ತಿಯ ಮೌಲ್ಯ 480 ಕೋಟಿ ರೂಪಾಯಿ.

1315

2012ರಲ್ಲಿ ಸೈಫ್‌ ಅಲೀ ಖಾನ್‌ರನ್ನು ವಿವಾಹವಾಗಿದ್ದ ಕರೀನಾ ಕಪೂರ್‌ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಹಿರಿಯ ಪುತ್ರನ ಹೆಸರು  ತೈಮೂರ್‌ ಆಗಿದ್ದರೆ, 2ನೇ ಪುತ್ರನ ಹೆಸರು ಜಹಾಂಗೀರ್‌.

1415

ಕರೀನಾ ಅವರ ಪತಿ ಸೈಫ್ ಅಲಿ ಖಾನ್ ಅವರ ನಿವ್ವಳ ಮೌಲ್ಯ 12000 ಕೋಟಿ ರೂ. ದಂಪತಿಗಳು ಸೈಫ್ ಅಲಿ ಖಾನ್ ಅವರ ಪೂರ್ವಜರ ಮನೆಯಾದ ಪಟೌಡಿ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. 

1515

ಈ ಅರಮನೆಯು 10 ಎಕರೆಯಲ್ಲಿ ಹರಡಿಕೊಂಡಿದ್ದು, 800 ಕೋಟಿ ರೂಪಾಯಿ ಮೌಲ್ಯದ್ದಾಗಿದೆ, ಭಾರತದ ಯಾವುದೇ ನಟಿ ಇಷ್ಟು ದುಬಾರಿ ಅರಮನೆಯಲ್ಲಿ ವಾಸಿಸುತ್ತಿರಲಿಲ್ಲ ಎಂಬುದು ಗಮನಾರ್ಹ.
 

Read more Photos on
click me!

Recommended Stories