ಸ್ಟಾರ್ಟ್‌ಅಪ್‌ ಕನಸಿದ್ಯಾ? ಹಾಗಿದ್ರೆ OTT ಅಲ್ಲಿ ನೀವು ಮಿಸ್‌ ಮಾಡದೇ ಈ ಚಿತ್ರಗಳನ್ನ ನೋಡ್ಲೇಬೇಕು

First Published | Nov 18, 2024, 7:05 PM IST

ನಿಮ್ಮಲ್ಲಿ ಸ್ಟಾರ್ಟ್‌ಅಪ್‌ ಮಾಡೋ ಕನಸಿದ್ಯಾ? ಅದಕ್ಕೆ ಸ್ಫೂರ್ತಿ ಅನ್ನೋದು ಬೇಕಿದ್ದರೆ ಒಟಿಟಿ ವೇದಿಕೆಯಲ್ಲಿರುವ ಈ 10 ಚಿತ್ರಗಳನ್ನು ನೀವು ನೋಡಲೇಬೇಕು. ನಿಮ್ಮ ಕನಸಿಗೆ ಸ್ಪೂರ್ತಿ ಈ ಸಿನಿಮಾಗಳಿಂದ ಸಿಗಬಹುದು.

ಜಾಬ್ಸ್‌ (Jobs)

2013ರಲ್ಲಿ ರಿಲೀಸ್‌ ಆದ ಸಿನಿಮಾ. ಅಮೆಜಾನ್‌ ಪ್ರೈಮ್‌ನಲ್ಲಿ ಲಭ್ಯವಿದೆ. ಆಪಲ್‌ ಕಂಪನಿಯ ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ನಿಜ ಜೀವನದ ಕಥೆ. ಸ್ಟೀವ್‌ ಜಾಬ್ಸ್‌ ಜೀವನದಲ್ಲಿ ಆದ ಕಥೆಗಳನ್ನು ದಾಖಲಿಸಲಾಗಿದೆ.
 

ಸ್ಟಾರ್ಟ್‌ಅಪ್‌.ಕಾಮ್‌ (Startup.com)

2001ರಲ್ಲಿ ಬಂದ ಡಾಕ್ಯುಮೆಂಟರಿ ಡ್ರಾಮಾ. ಡಾಟ್‌ಕಾಮ್‌ ಸ್ಟಾರ್ಟ್‌ಅಪ್‌ govWorks.com ಹುಟ್ಟಿದ ಕಥೆ ಈ ಸಿನಿಮಾದಲ್ಲಿದೆ.ಅಮೆಜಾನ್‌ ಪ್ರೈಮ್‌ನಲ್ಲಿ ಈ ಸಿನಿಮಾ ವೀಕ್ಷಣೆ ಮಾಡಬಹುದು.
 

Latest Videos


ದಿ ವೂಲ್ಫ್‌ ಆಫ್‌ ವಾಲ್‌ ಸ್ಟ್ರೀಟ್‌ (The Wolf Of Wall Street)

 "ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್" ಸಿನಿಮಾ ಜೋರ್ಡಾನ್ ಬೆಲ್ಫೋರ್ಟ್ ಅವರ ಅದೇ ಹೆಸರಿನ ಆತ್ಮಚರಿತ್ರೆಯನ್ನು ಆಧರಿಸಿದೆ. ಇದು ವಾಲ್ ಸ್ಟ್ರೀಟ್ ಸ್ಟಾಕ್ ಬ್ರೋಕರ್ ಆಗಿದ್ದ ಅವರ ಸಮಯವನ್ನು ತೋರಿಸುತ್ತದೆ. ಹೂಡಿಕೆದಾರರಿಂದ ಮಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ಕದ್ದು ಹಣಕಾಸಿನ ವಂಚನೆಗಾಗಿ ಶಿಕ್ಷೆಯನ್ನು ಪಡೆಯುವ ಕಥೆ ಹೊಂದಿದೆ. ಅಮೆಜಾನ್‌ ಪ್ರೈಮ್‌ನಲ್ಲಿ ಸಿನಿಮಾವಿದೆ. 18+ ಕಂಟೆಂಟ್‌ ಸಿನಿಮಾದಲ್ಲಿ ಹೆಚ್ಚಿದೆ.
 

ದಿ ಸೋಶಿಯಲ್‌ ನೆಟ್‌ವರ್ಕ್‌(The Social Network)

2010ರಲ್ಲಿ ರಿಲೀಸ್‌ ಆದ ಸಿನಿಮಾ. ಇದು ದಶಕದ ಶ್ರೇಷ್ಠ ಸಿನಿಮಾಗಳಲ್ಲಿ ಒಂದು ಎಂದು ಬಣ್ಣಿಸಲಾಗಿದೆ. ಫೇಸ್‌ಬುಕ್‌ ಅನ್ನೋ ಕಂಪನಿ ಸ್ಥಾಪನೆಯಾಗಿದ್ದರ ಕಥೆ ಎಂದು ಹೇಳಲಾದರೂ, ಸಂಪೂರ್ಣವಾಗಿ ಅದೇ ವಿಚಾರವಲ್ಲ. ದಿ ಆಕ್ಸಿಡೆಂಟಲ್ ಬಿಲಿಯನೇರ್ಸ್ ಅನ್ನೂ ಪುಸ್ತಕದ ಆಧಾರದಲ್ಲಿ ಬಂದ ಸಿನಿಮಾ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾವಿದೆ.
 

ಲ್ಯಾಂಬೋರ್ಗಿನಿ (Lamborghini: The Man Behind the Legend)

ಬಹುಕಾಲದ ಪ್ರತಿಸ್ಪರ್ಧಿ ಎಂಜೊ ಫೆರಾರಿಯನ್ನು ಸೋಲಿಸಲು ಆಸೆ ಪಡುವ ಫೆರುಸಿಯೊ ಲ್ಯಾಂಬೋರ್ಗಿನಿ ಮುಂಬರುವ ಜಿನೀವಾ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಇನ್ನೂ ಟೆಸ್ಟ್‌ ಮಾಡಲಾಗದ ಕಾರ್‌ಅನ್ನು ಗೆಲುವಿಗೆ ಸಿದ್ದಪಡಿಸುವ ಕಥೆ ಇದರಲ್ಲಿದೆ. ಟ್ರ್ಯಾಕ್ಟರ್‌ ಉತ್ಪಾದನೆ ಮಾಡ್ತಿದ್ದ ಫೆರುಸಿಯೊ ಲ್ಯಾಂಬೋರ್ಗಿನಿ ಐಷಾರಾಮಿ ಸ್ಟೋರ್ಟ್ಸ್ ಕಾರ್‌ ಉತ್ಪಾದಿಸುವ ಮಟ್ಟಕ್ಕೆ ಬೆಳೆದ ರಿಯಲ್‌ ಕಥೆ ಇದರಲ್ಲಿದೆ. ಲ್ಯಾಂಬೋರ್ಗಿನಿ: ದ ಮ್ಯಾನ್‌ ಬಹೈಂಡ್‌ ದ ಲಜೆಂಡ್‌ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿದೆ.
 

ಜಾಯ್‌ (Joy)

ಸ್ವಯಂ ಹಿಂಡುವ ಮಿರಾಕಲ್‌ ಮಾಪ್‌ ನಿಮಗೆ ಗೊತ್ತಿರಬಹುದು. ಅದರ ಸೃಷ್ಟಿಕರ್ತೆ ಜಾಯ್ ಮಂಗನೋ ಅವರ ಜೀವನವನ್ನು ಆಧರಿಸಿದ ಕಥೆ. ಯಾರ ಸಹಾಯವೂ ಇಲ್ಲದೆ, ಕೋಟ್ಯಧಿಪತಿಯಾದ ಮಹಿಳೆಯ ಕಥೆಯನ್ನು ಅಮೆಜಾನ್‌ ಪ್ರೈಮ್‌ನಲ್ಲಿ ವೀಕ್ಷಣೆ ಮಾಡಬಹುದು.
 

ದಿ ಫೌಂಡರ್‌ (The Founder)

ಮೆಕ್‌ಡೊನಾಲ್ಡ್ಸ್‌ ಇಲ್ಲದ ದೇಶ ಯಾವುದಿದೆ ಹೇಳಿ. ಇದರ ಪೂರ್ಣಕಥೆ ಈ ಸಿನಿಮಾ. 1950 ರ ದಶಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಬರ್ಗರ್ ವ್ಯಾಪಾರ ಮಾಡುತ್ತಿದ್ದ ಮ್ಯಾಕ್ (ಜಾನ್ ಕ್ಯಾರೊಲ್ ಲಿಂಚ್) ಮತ್ತು ಡಿಕ್ ಮೆಕ್‌ಡೊನಾಲ್ಡ್ (ನಿಕ್ ಆಫರ್‌ಮ್ಯಾನ್) ಅವರನ್ನು ಇಲಿನಾಯ್ಸ್‌ನ  ಸೇಲ್ಸ್‌ಮ್ಯಾನ್ ರೇ ಕ್ರೋಕ್ (ಮೈಕೆಲ್ ಕೀಟನ್) ಹೇಗೆ ಭೇಟಿಯಾದರು ಎನ್ನುವುದರ ನಿಜ ಕಥೆ. ಅಮೆಜಾನ್‌ ಪ್ರೈಮ್‌ನಲ್ಲಿ ಈ ಸಿನಿಮಾವಿದೆ.
 

ದಿ ಪರ್ಸ್ಯೂಟ್‌ ಆಫ್‌ ಹ್ಯಾಪಿನೆಸ್‌ (The Pursuit of Happyness)

ಇಂದು ಅಮೆರಿಕದ ದೊಡ್ಡ ಉದ್ಯಮಿಗಳಲ್ಲಿ ಒಬ್ಬರಾಗಿರುವ ಕ್ರಿಸ್‌ ಗಾರ್ಡ್‌ನೆರ್‌ ಅವರ ನಿಜ ಕಥೆ. ಮನೆಯಿಲ್ಲ, ಪುಟ್ಟ ಮಗನನ್ನು ಸಾಕುವ ಜವಾಬ್ದಾರಿ ಬೇರೆ. ಎಲ್ಲಾ ದಾರಿಗಳು ಮುಚ್ಚಿದಾಗ ಸ್ಟಾಕ್‌ ಬ್ರೋಕರ್‌ ಆಗುವ ಗಾರ್ಡ್‌ನೆರ್‌, 1987ರಲ್ಲಿ ಗಾರ್ಡನೆರ್‌ ರಿಚ್‌ & ಕೋ ಎನ್ನುವ ಕಂಪನಿ ಆರಂಭಿಸಿ ಯಶಸ್ಸು ಪಡೆಯುವ ಕಥೆ. ವಿಲ್‌ ಸ್ಮಿತ್‌ ನಾಯಕರಾಗಿ ನಟಿಸಿದ ಈ ಸಿನಿಮಾ ಜೀ 5ನಲ್ಲಿ ಲಭ್ಯವಿದೆ.
 

ಪೈರಟ್ಸ್‌ ಆಫ್‌ ಸಿಲಿಕಾನ್‌ ವ್ಯಾಲಿ (Pirates of Silicon Valley)

1971 ರಿಂದ 1997ರ ಅವಧಿಯಲ್ಲಿ ಸ್ಟೀವ್‌ ಜಾಬ್ಸ್‌ ಹಾಗೂ ಬಿಲ್‌ ಗೇಟ್ಸ್‌ ನಡುವೆ ಪರ್ಸನಲ್‌ ಕಂಪ್ಯೂಟರ್‌ ಉತ್ಪಾದನೆ ಮಾಡುವ ವಿಚಾರದಲ್ಲಿ ಆದ ಮುಖಾಮುಖಿಯ ಕಥೆ. 1984ರಲ್ಲಿ 'ಫೈರ್‌ ಇನ್‌ ದ ವ್ಯಾಲಿ: ದ ಮೇಕಿಂಗ್‌ ಆಫ್‌ ದ ಪರ್ಸನಲ್‌ ಕಂಪ್ಯೂಟರ್‌' ಎನ್ನುವ ಬುಕ್‌ ಈ ಸಿನಿಮಾಕ್ಕೆ ಮೂಲ. ಅಮೆಜಾನ್‌ ಪ್ರೈಮ್‌ನಲ್ಲಿ ಈ ಸಿನಿಮಾವಿದೆ.
 

ಸೂರರೈ ಪೊಟ್ರು (Soorarai Pottru)

ಸೂರ್ಯ ಅಭಿನಯದ ಸುಧಾ ಕೊಂಗಾರಾ ನಿರ್ದೇಶನದ ಸಿನಿಮಾ. ಭಾರತದಲ್ಲಿ ಲೋ ಕಾಸ್ಟ್‌ ಏರ್‌ಲೈನ್‌ ಏರ್‌ಡೆಕ್ಕನ್‌ಅನ್ನು ಸ್ಥಾಪನೆ ಮಾಡಿದ್ದ ಕ್ಯಾಪ್ಟನ್‌ ಜಿಆರ್‌ ಗೋಪಿನಾಥ್‌ ಅವರ ಜೀವನದ ಸ್ಪೂರ್ತಿಯ ಕಥೆಗಳು ಇದರಲ್ಲಿವೆ. ಅಮೆಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಇದೆ.

click me!