ಹಲವು ಅದ್ಭುತ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ತೆಲುಗು, ತಮಿಳಿನಲ್ಲಿ ಪ್ರಮುಖ ನಾಯಕಿಯಾಗಿ ಮೆರೆದರು. ಎನ್.ಟಿ.ಆರ್, ಎ.ಎನ್.ಆರ್, ಶಿವಾಜಿ ಗಣೇಶನ್, ಎಂ.ಜಿ.ಆರ್, ಜೆಮಿನಿ ಗಣೇಶನ್ ಮುಂತಾದವರ ಜೊತೆಗೆ ನಟಿಸಿ ನಕ್ಷತ್ರ ಸ್ಥಾನಮಾನ ಪಡೆದರು. ಒಂದು ಹಂತದಲ್ಲಿ ಅವರ ಖ್ಯಾತಿ ಅವರನ್ನೂ ಮೀರಿ ಹೋಯಿತು ಎಂದರೆ ತಪ್ಪಾಗಲಾರದು. ಸುಂದರ ರೂಪ, ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು ನಟಿ ಸಾವಿತ್ರಿ.