Bharathi Vishnuvardhan: ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಮನೆಯಲ್ಲಿ ಮಹಾ ಚಂಡಿಕಾ ಹೋಮ ನಡೆದಿದೆ. ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಯಾರೆಲ್ಲಾ ಬಂದಿದ್ದರು ನೋಡಿ.
ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರ ಮನೆಯಲ್ಲಿ ಆಗಾಗ್ಗೆ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ಅಂತೆಯೇ ಇದೀಗ ಮನೆಯಲ್ಲಿ ಮಹಾ ಚಂಡಿಕಾ ಹೋಮ ನಡೆದಿದ್ದು, ಪೂಜಾ ಕಾರ್ಯಕ್ರಮದಲ್ಲಿ ಮನೆಯವರು, ಆಪ್ತರು ಮಾತ್ರವಲ್ಲದೆ, ಸಿನಿ ತಾರೆಯರ ದಂಡೇ ನೆರೆದಿತ್ತು.
26
ಯಶಸ್ವಿಯಾಗಿ ನೆರವೇರಿದ ಪೂಜಾ ಕಾರ್ಯಕ್ರಮ
ಪೂಜಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಸಿನಿ ತಾರೆಯರಾದ ಸುಮಲತಾ, ಜಯಮಾಲಾ, ಹೇಮಾ ಚೌಧರಿ, ತಾರಾ, ಪ್ರೇಮಾ ಅನುರಾಧ ಮುಂತಾದವರು ಭಾಗವಹಿಸಿರುವುದನ್ನು ನೀವಿಲ್ಲಿ ನೋಡಬಹುದು.
36
ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕೆ
ಜೀವನದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಲು, ಯಶಸ್ಸನ್ನು ಸಾಧಿಸಲು, ಕರ್ಮ ದೋಷಗಳನ್ನು ನಿವಾರಿಸಲು, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ಪಡೆಯಲು ಭಕ್ತರು ಚಂಡಿ ದೇವಿಯನ್ನು ಪೂಜಿಸುತ್ತಾರೆ. ಹೋಮವು ಎಲ್ಲಾ ರೀತಿಯ ಅಪಾಯಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಹಿರಿಯ ನಟ, ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದಕ್ಕೆ ಭಾರತಿ ಅವರು ಸಂತಸ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲಿ ವಿಷ್ಣು ಅವರನ್ನ ಮಿಸ್ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆಗೆ ಸದಾ ಇರುತ್ತಾರೆ ಎಂದು ಭಾರತಿ ಅವರು ಹಂಚಿಕೊಂಡಿದ್ದರು.
56
ಅಪರೂಪದ ಜೋಡಿ
ವಿಷ್ಣು- ಭಾರತಿ ಅವರದ್ದು ಅಪರೂಪದ ಜೋಡಿ. ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆ ಆಗಿದ್ದರು.'ಮನೆ ಬೆಳಗಿದ ಸೊಸೆ' ಚಿತ್ರದಲ್ಲಿ ಮೊದಲ ಬಾರಿ ಇಬ್ಬರೂ ಒಟ್ಟಿಗೆ ನಟಿಸಿದ್ದರು.
66
ಫೆಬ್ರವರಿ 27, 1975ರಲ್ಲಿ ಮದುವೆ
'ಮನೆ ಬೆಳಗಿದ ಸೊಸೆ' ಚಿತ್ರಕ್ಕೂ ಮುನ್ನ 'ನಾಗರಹಾವು' ಸಿನಿಮಾ ಶತದಿನೋತ್ಸವ ಸಮಾರಂಭಕ್ಕೆ ಭಾರತಿ ಅವರನ್ನು ಆಹ್ವಾನಿಸಲು ವಿಷ್ಣು ಹೋಗಿದ್ದರು. ಅದೇ ಮೊದಲ ಭೇಟಿ ಆಗಿತ್ತು. ಬಳಿಕ ಫೆಬ್ರವರಿ 27, 1975ರಲ್ಲಿ ಇಬ್ಬರ ಮದುವೆ ನಡೆದಿತ್ತು.