Rukmini Vasanth latest photos: ರುಕ್ಮಿಣಿ ಅವರ ಫಾಲೋವರ್ಸ್ ಸಂಖ್ಯೆ ಸಹ ಏರಿಕೆಯಾಗಿದ್ದು, ಅವರು ಕ್ಯಾಶುವಲ್ ಲುಕ್ ನಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿದ ನಂತರ ಪ್ರಸ್ತುತ ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.
'ಕಾಂತಾರ ಅಧ್ಯಾಯ 1' ಚಿತ್ರ ಬಿಡುಗಡೆಯಾದಾಗಿನಿಂದ ಟ್ರೆಂಡಿಂಗ್‌ನಲ್ಲಿರುವ ರುಕ್ಮಿಣಿ ವಸಂತ್ ಅವರ ಇತ್ತೀಚಿನ ಫೋಟೋಗಳು ಇಂಟರ್ನೆಟ್‌ನಲ್ಲಿ ಬಿರುಗಾಳಿಯನ್ನು ಎಬ್ಬಿಸುತ್ತಿವೆ.
26
ವಿಮರ್ಶಕರ ಮೆಚ್ಚುಗೆ
ರುಕ್ಮಿಣಿ ವಸಂತ್ 'ಬೀರ್‌ಬಲ್ ಟ್ರಯಾಲಜಿ' ಚಿತ್ರದಲ್ಲಿ ಎಂ.ಜಿ. ಶ್ರೀನಿವಾಸ್ ಜೊತೆ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ 2023ರ ಸೂಪರ್ ಹಿಟ್ ಚಲನಚಿತ್ರ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಹಾಗೂ ಸೈಡ್ ಬಿ ನಲ್ಲಿ ಪ್ರಿಯಾ ಪಾತ್ರಕ್ಕಾಗಿ ವಿಮರ್ಶಕರ ಮೆಚ್ಚುಗೆಯನ್ನೂ ಪಡೆದರು.
36
ಬಾಲಿವುಡ್‌ಗೂ ಎಂಟ್ರಿ
ಇದಾದ ನಂತರ ರುಕ್ಮಿಣಿ ವಸಂತ್‌ಗೆ ಕನ್ನಡ ಚಿತ್ರಗಳಲ್ಲಿ ಅವಕಾಶಗಳು ಬರಲು ಪ್ರಾರಂಭಿಸಿದವು. ಜೊತೆಗೆ ಹಿಂದಿ ಚಿತ್ರ ಅಪ್ ಸ್ಟಾರ್ಟ್ಸ್‌ನಲ್ಲಿ ನಟಿಸುವ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟರು.
ನಂತರ ರುಕ್ಮಿಣಿ ವಸಂತ್ ನಿಖಿಲ್ ಸಿದ್ದಾರ್ಥ್ ಜೊತೆ ತೆಲುಗು ಚಿತ್ರ 'ಅಪ್ಪುಡೋ ಇಪ್ಪುಡೋ ಎಪ್ಪುಡೋ'ದಲ್ಲಿ ನಟಿಸಿದರು. ಅಷ್ಟೇ ಅಲ್ಲ, ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಅವರ 'ಏಸ್'ನಲ್ಲಿ ನಟಿಸುವ ಮೂಲಕ ತಮಿಳಿಗೂ ಪಾದಾರ್ಪಣೆ ಮಾಡಿದರು.
56
'ಕಾಂತಾರ ಅಧ್ಯಾಯ 1'
ಇತ್ತೀಚೆಗೆ ಶಿವಕಾರ್ತಿಕೇಯನ್ ಅಭಿನಯದ 'ಮದರಸಿ' ಚಿತ್ರದಲ್ಲಿನ ನಟನೆಯ ಮೂಲಕ ರುಕ್ಮಿಣಿ ವಸಂತ್ ತಮಿಳು ಪ್ರೇಕ್ಷಕರಿಗೂ ಹತ್ತಿರವಾದರು. ಪ್ರಸ್ತುತ ಅವರು ಮುಖ್ಯ ಪಾತ್ರದಲ್ಲಿರುವ 'ಕಾಂತಾರ ಅಧ್ಯಾಯ 1' ಬಿಡುಗಡೆಯಾಗಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.
66
ಬಹಳಷ್ಟು ಲೈಕ್ಸ್ ಗಳಿಸುತ್ತಿವೆ ಫೋಟೋಗಳು
ರುಕ್ಮಿಣಿ ಅವರ ಫಾಲೋವರ್ಸ್ ಸಂಖ್ಯೆ ಸಹ ಏರಿಕೆಯಾಗಿದ್ದು, ಅವರು ಕ್ಯಾಶುವಲ್ ಲುಕ್ ನಲ್ಲಿರುವ ಫೋಟೋವನ್ನು ಪೋಸ್ಟ್ ಮಾಡಿದ ನಂತರ ಪ್ರಸ್ತುತ ಇನ್ಸ್ಟಾಗ್ರಾಮ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಈ ಫೋಟೋಗಳು ಬಹಳಷ್ಟು ಲೈಕ್ಸ್ ಸಹ ಗಳಿಸುತ್ತಿದೆ.