Published : Nov 27, 2021, 02:24 PM ISTUpdated : Nov 27, 2021, 02:45 PM IST
ಸೋಷಿಯಲ್ ಮೀಡಿಯಾ(Social Media) ಇತ್ತೀಚಿನ ದಿನಗಳಲ್ಲಿ ಬಳಕೆದಾರರ ಫೊಟೋ, ಕಂಟೆಂಟ್‌ಗಳ ಕುರಿತು ಹೆಚ್ಚು ಜಾಗೃತವಾಗುತ್ತಿದೆ. ಇತ್ತೀಚೆಗೆ ನಿಪಲ್ ತೋರಿಸಿದ ಟಾಪ್ ಗಾಯಕಿಯ ಫೊಟೋವನ್ನು ಇನ್‌ಸ್ಟಾಗ್ರಾಮ್ ಡಿಲೀಸ್ ಮಾಡಿದೆ. ಸಿಂಗರ್ ಮಡೊನ್ನಾ(Madonna) ಫೊಟೋ ಶೇರಿಂಗ್ ಎಪ್ಲಿಕೇಷನ್ ಬಗ್ಗೆ ಸಿಟ್ಟಾಗಿದ್ದು ಮತ್ತೊಮ್ಮೆ ಅದೇ ಫೋಟೋ ಶೇರ್ ಮಾಡಿದ್ದಾರೆ.
ತನ್ನ ಮೊಲೆತೊಟ್ಟುಗಳನ್ನು ಪ್ರದರ್ಶಿಸಿದ, ತನ್ನ ರಿಸ್ಕಿ ಫೋಟೋಗಳನ್ನು ಶೇರ್ ಮಾಡಿದ ಸಿಂಗರ್ ಮಡೊನ್ನಾ ಅವರ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಡಿಲೀಟ್ ಮಾಡಿದೆ.
28
ಫೋಟೋ-ಶೇರಿಂಗ್ ಅಪ್ಲಿಕೇಶನ್ ತನ್ನ ಫೋಟೋ ಡಿಲೀಸ್ ಮಾಡಿದ ನಂತರ ಮಡೋನಾ Instagram ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ತನ್ನ ತೆರೆದ ಮೊಲೆತೊಟ್ಟುಗಳನ್ನು ಮರೆಮಾಚುವ ಹೃದಯದ ಎಮೋಜಿಯೊಂದಿಗೆ ಫೋಟೋಗಳನ್ನು ಮರು-ಪೋಸ್ಟ್ ಮಾದ್ದಾರೆ.
38
ಫೋಟೋಗೆ ಕ್ಯಾಪ್ಶನ್ ಕೊಟ್ಟು ತಮ್ಮ ಲೈಂಗಿಕ ನೀತಿಗಾಗಿ Instagram ವಿರುದ್ಧ ಕಿಡಿಕಾರಿದ್ದಾರೆ. ಗಾಯಕಿ ತನ್ನ ಫೋಟೋಗಳನ್ನು ತೆಗೆದ ನಂತರ ಸ್ತ್ರೀ ಲೈಂಗಿಕತೆಯನ್ನು ಸೆನ್ಸಾರ್ ಮಾಡುವ ನಿಲುವುಗಳಿಗಾಗಿ ಇನ್‌ಸ್ಟಾಗ್ರಾಮ್ ವಿರುದ್ಧ ಕಿಡಿ ಕಾರಿದ್ದಾರೆ.
48
ಗುರುವಾರ ಇನ್‌ಸ್ಟಾಗ್ರಾಮ್‌ನಲ್ಲಿ ಗಾಯಕಿ ತನ್ನ ಫೋಟೋಗಳನ್ನು ಸೆನ್ಸಾರ್ ಮಾಡುವ ಇನ್‌ಸ್ಟಾಗ್ರಾಮ್‌ಗೆ ಪ್ರತಿಕ್ರಿಯಿಸಿ ಸುದೀರ್ಘ ಪೋಸ್ಟ್ ಅನ್ನು ಬರೆದಿದ್ದಾರೆ.
58
ನಾನು ಇನ್‌ಸ್ಟಾಗ್ರಾಮ್‌ಗೆ ಶೇರ್ ಮಾಡಿದ ಫೋಟೋಗಳನ್ನು ಎಚ್ಚರಿಕೆ ಅಥವಾ ಸೂಚನೆಯಿಲ್ಲದೆ ಡಿಲೀಟ್ ಮಾಡಿದ್ದು ಅದನ್ನು ಮರು ಪೋಸ್ಟ್ ಮಾಡುತ್ತಿದ್ದೇನೆ. ಫೊಟೋದಲ್ಲಿ ನನ್ನ ಮೊಲೆತೊಟ್ಟುಗಳ ಒಂದು ಸಣ್ಣ ಭಾಗವಷ್ಟೇ ರಿವೀಲ್ ಆಗಿದೆ ಎಂದಿದ್ದಾರೆ.
68
ನಾವು ಒಂದು ಮೊಲೆತೊಟ್ಟು ಹೊರತುಪಡಿಸಿ ಮಹಿಳೆಯ ದೇಹದ ಪ್ರತಿಯೊಂದು ಅಂಗುಲವನ್ನು ತೋರಿಸಲು ಅನುಮತಿಸುವ ಸಂಸ್ಕೃತಿಯಲ್ಲಿ ವಾಸಿಸುತ್ತಿದ್ದೇವೆ ಎಂಬುದು ನನಗೆ ಇನ್ನೂ ವಿಸ್ಮಯಕಾರಿಯಾಗಿದೆ ಎಂದಿದ್ದಾರೆ.
78
ಅದು ಮಹಿಳೆಯ ಅಂಗರಚನಾಶಾಸ್ತ್ರದ ಒಂದು ಭಾಗವಾಗಿದೆ. ಅದು ಲೈಂಗಿಕತೆ ಹೊಂದಬಹುದು. ಮೊಲೆತೊಟ್ಟು ಮಗುವನ್ನು ಪೋಷಿಸುತ್ತದೆ! ಪುರುಷರ ಮೊಲೆತೊಟ್ಟುಗಳನ್ನು ಕಾಮಪ್ರಚೋದಕವಾಗಿ ನೋಡಬಹುದಲ್ಲವೇ! ಎಂದು ಪ್ರಶ್ನಿಸಿದ್ದಾರೆ
88
ಗಾಯಕಿ ಈ ಹಿಂದೆ ತನ್ನ ಇತರ ಫೋಟೋಶೂಟ್‌ಗಾಗಿ ಸುದ್ದಿಯಲ್ಲಿದ್ದರು. Instagram ನ ನೀತಿಯ ವಿರುದ್ಧ ಮಾತನಾಡಿದ ಮಡೋನಾ ಅವರ ಇತ್ತೀಚಿನ ಪೋಸ್ಟ್ ಅವರ ಅಭಿಮಾನಿಗಳು ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯಿತು.