ಅಮಿತಾಭ್ ಬಚ್ಚನ್ 'ಲಾವಾರಿಸ್' ಚಿತ್ರದ 8 ಸೂಪರ್ ಹಿಟ್ ಡೈಲಾಗ್‌ಗಳು ಗೊತ್ತಾ?

Published : May 22, 2025, 05:13 PM IST

ಅಮಿತಾಬ್ ಬಚ್ಚನ್ ಮತ್ತು ಜೀನತ್ ಅಮಾನ್ ಅಭಿನಯದ ಲಾವಾರಿಸ್ ಚಿತ್ರ ಬಿಡುಗಡೆಯಾಗಿ 44 ವರ್ಷಗಳು ಪೂರ್ಣಗೊಂಡಿವೆ. ಈ ಸಂದರ್ಭದಲ್ಲಿ, ಚಿತ್ರದ ಕೆಲವು ಅದ್ಭುತ ಸಂಭಾಷಣೆಗಳನ್ನು ನಾವು ನಿಮಗೆ ಹೇಳಲಿದ್ದೇವೆ.

PREV
18
ಅಮಿತಾಭ್ ಬಚ್ಚನ್ 'ಲಾವಾರಿಸ್' ಚಿತ್ರದ 8 ಸೂಪರ್ ಹಿಟ್ ಡೈಲಾಗ್‌ಗಳು ಗೊತ್ತಾ?

1. ನಾನು ಯಾರ ಮನೆ ಬಾಗಿಲಿಗೆ ಕಾಲಿಡ್ತೀನೋ ಅವರ ಇಡೀ ಡಿಪಾರ್ಟ್‌ಮೆಂಟ್ ಬಾಗಿಲು ಮುಚ್ಚುತ್ತೆ. ಇದು ಆ ಚಿತ್ರದ ಒಂದು ಪವರ್ಫುಲ್ ಡೈಲಾಗ್.

28

2. ನಾನು ಈ ಜಗತ್ತಿಗೆ ಕೇವಲ ಶರೀರ ತಂದವನು, ನನ್ನ ಭವಿಷ್ಯ ಯಾರೂ ಬರೆಯಲ್ಲ, ಆಕಾಶದಲ್ಲಿ ನನ್ನ ನಕ್ಷತ್ರಗಳಿಲ್ಲ. ಅವೆಲ್ಲಾ ಸುಳ್ಳು ಎಂಬರ್ಥದ ಡೈಲಾಗ್.. 

38

3. ನಾನು ನಾಯಿ ಬಾಲದ ಹಾಗೆ, ಹನ್ನೆರಡು ವರ್ಷ ಚರಂಡಿಯಲ್ಲಿಟ್ಟರೂ ನಾನು ನೇರವಾಗಲ್ಲ, ಚರಂಡಿ ಬಾಗುತ್ತೆ. ಈ ಡೈಲಾಗ್ ಅಂದು ಸಕತ್ ಮನೆಮಾತಾಗಿತ್ತು.

48

4. ಕೆಲವೊಮ್ಮೆ ಮನುಷ್ಯ ತನ್ನ ಪಾಪದ ಸಣ್ಣ ಗಿಡವನ್ನು ಬಿಟ್ಟು ಓಡಿಹೋಗುತ್ತಾನೆ, ಆದರೆ ಅದೇ ಗಿಡವನ್ನು ದೊಡ್ಡ ಮರವಾಗಿಸಿ ವಿಧಿ ಅವನ ಮುಂದೆ ನಿಲ್ಲಿಸುತ್ತದೆ.

58

5. ಶರೀರದ ಮೇಲೆ ಕುಷ್ಠ ಬಂದರೂ ಆತ್ಮಕ್ಕೆ ಏನೂ ಆಗಲ್ಲ. ಈ ಡೈಲಾಗ್ ಅಂದು ಬಹಳಷ್ಟು ಮೆಚ್ಚುಗೆ ಗಳಿಸಿತ್ತು. ಕರ್ಮ ಸಿದ್ಧಾಂಥದ ಅಲೆ ಇದ್ದ ಕಾಲದಲ್ಲಿ ಈ ಡೈಲಾಗ್ ತುಂಬಾ ಪವರ್‌ಫುಲ್ ಎನ್ನಿಸಿತ್ತು. 

68

6. ತನ್ನ ತಪ್ಪಿಗೆ ಶಿಕ್ಷೆ ಎಲ್ಲರಿಗೂ ಸಿಗುತ್ತದೆ, ಆದರೆ ತಪ್ಪು ಒಪ್ಪಿಕೊಂಡರೆ ಶಿಕ್ಷೆ ಸಹಿಸುವುದು ಸುಲಭ. ಈ ಡೈಲಾಗ್ ಕೂಡ ಅಪಾರ ಮೆಚ್ಚುಗೆ ಗಳಿಸಿತ್ತು. 

78

7. ಮಕ್ಕಳಿಲ್ಲದಿದ್ದರೆ ದುಃಖ, ಮಕ್ಕಳಿದ್ದು ಸತ್ತರೆ ಬಹಳ ದುಃಖ, ಆದರೆ ಮಕ್ಕಳಿದ್ದು ನಾಲಾಯಕ್ ಆಗಿದ್ದರೆ ಸಹಿಸಲು ಆಗಲ್ಲ.

88

8. ಇಂದು ನ್ಯಾಯ ಸಿಗುತ್ತದೆ ಇಲ್ಲಾಂದ್ರೆ ವಿಷಯ ಮುಗಿಯುತ್ತದೆ. ಈ ಡೈಲಾಗ್ ಆ ಸಿನಿಮಾಗಷ್ಟೇ ಸೀಮಿತ ಎಂಬ ಅಭಿಪ್ರಾಯ ಅಂದು ವ್ಯಕ್ತವಾಗಿತ್ತು. ಇಂದೂ ಕೂಡ ಅದೇ ಅನಿಸಿಕೆ ಮನೆಮಾಡಿದೆ ಎನ್ನಬಹುದು.

Read more Photos on
click me!

Recommended Stories