ಬರ್ತ್‌ಡೇ ಗರ್ಲ್ ಕರೀನಾ ಕಪೂರ್‌ ಅಪರೂಪದ ಫೋಟೋಗಳು

First Published | Sep 22, 2024, 9:07 PM IST

ಕರೀಷ್ಮಾ ಕಪೂರ್  44ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಕೆಲ ಬಹಳ ಅಪರೂಪದ ಫೋಟೋಗಳು ಇಲ್ಲಿವೆ. 

ಕರೀನಾ ಕಪೂರ್ ಸೆಪ್ಟೆಂಬರ್‌ 21ರಂದು ಅಂದ್ರೆ ನಿನ್ನೆ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 2000ದಲ್ಲಿ ಅಭಿಷೇಕ್‌ ಬಚ್ಚನ್ ಜೊತೆ ರೆಫ್ಯುಜಿ ಸಿನಿಮಾದಲ್ಲಿ ನಟಿಸುವ ಮೂಲಕ ಕರೀನಾ ತಮ್ಮ ಬಾಲಿವುಡ್ ಕೆರಿಯರ್‌ ಅನ್ನು ಆರಂಭಿಸಿದರು. ಅವರ ಕೆಲ ಅಪರೂಪದ ಫೋಟೋಗಳು ಇಲ್ಲಿವೆ. 

ಮಾಜಿ ಪ್ರೇಮಿ ಶಾಹೀದ್ ಕಪೂರ್ ಹಾಗೂ ಸಲ್ಮಾನ್ ಖಾನ್ ಜೊತೆ ಕರೀನಾ ಕಪೂರ್ ಇರುವ ಫೋಟೋ ಇದಾಗಿದ್ದು, ಐಐಎಫ್‌ಎ ರಾಕ್ಸ್ 2005ರಲ್ಲಿ ತೆಗೆದ ಫೋಟೋ ಇದಾಗಿದೆ. 

Tap to resize

ಕರೀನಾ ಕಪೂರ್ ಸೋದರಿ ಕರೀಶ್ಮಾ ಕಪೂರ್ ಜೊತೆಗಿರುವ ಫೋಟೋ ಇದಾಗಿದ್ದು, ಇದು ಹಿರಿಯ ಕಲಾವಿದ ಸುನಿತ್ ದತ್ ಅವರು 2005ರಲ್ಲಿ ಸಾವಿಗೀಡಾದ ಸಂದರ್ಭದ ಫೋಟೋ ಆಗಿದೆ. 

ಇದು ಕರೀನಾ ಕಪೂರ್‌ ಸಿಮಿ ಗೇರೆವಾಲ್ ಅವರ ಜೊತೆಗಿರುವ ಫೋಟೋ, 2002ರಲ್ಲಿ ನಿರೂಪಕಿ ಹಾಗೂ ನಟಿ ಸಿಮಿ ಗೆರೆವಾರ್‌ ನಡೆಸಿಕೊಡುತ್ತಿದ್ದ ರೆಂಡೆಜ್ವಸ್ ವಿತ್ ಸಿಮಿ ಗೆರೆವಾಲ್ ಟಾಕ್‌ ಶೋದಲ್ಲಿ ಭಾಗವಹಿಸಿದ್ದಾಗ ತೆಗೆದ ಫೋಟೋವಾಗಿದೆ.

ಕರೀನಾ ಕಪೂರ್ ಹಾಗೂ ಹೃತಿಕ್ ರೋಷನ್ ಹಾಗೂ ಜಾಕಿ ಶ್ರಾಫ್ ಅವರು ಜೊತೆಗಿರುವ 2001ರ ಫೋಟೋ, 'ಯಾದೇ' ಸಿನಿಮಾದ ಸುದ್ದಿಗೋಷ್ಠಿ ವೇಳೆ ತೆಗೆದ ಫೋಟೋ ಇದಾಗಿದ್ದು, ಕರೀನಾ ಹಾಗೂ ಹೃತಿಕ್ ರೋಷನ್ ಅವರು ಜೊತೆಯಾಗಿ ಕಭಿ ಖುಷಿ ಕಭಿ ಗಮ್, ಮೇ ಪ್ರೇಮ್ ಕಿ ದಿವಾನಿ ಹೂ ಹಾಗೂ ಮುಝ್ಸೆ ದೋಸ್ತಿ ಕರೋಗೆ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. 

Latest Videos

click me!