ಆ ಚಿತ್ರದಲ್ಲಿ, ಅವರು ವಿಜಯಕಾಂತ್ ಅವರಿಗೆ ಛತ್ರಿ ಹಿಡಿದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದರು. ವಿಜಯಕಾಂತ್ ವಡಿವೇಲು ಅವರನ್ನು ಕಮಲ್, ಪ್ರಭು ಮತ್ತು ಕಾರ್ತಿಕ್‌ರಂಥ ನಟರಿಗೆ ಪರಿಚಯಿಸಿದರು. 'ತೇವರ್ ಮಗನ್' ಚಿತ್ರದಲ್ಲಿ ವಡಿವೇಲು ಅವರ ಅಭಿನಯವನ್ನು ಮೆಚ್ಚಿದ ಶಿವಾಜಿ ಗಣೇಶನ್, ಕಮಲ್ ಅವರಿಗೆ ವಡಿವೇಲು ಕೇವಲ ಹಾಸ್ಯನಟನಲ್ಲ, ಒಬ್ಬ ಉತ್ತಮ ಪಾತ್ರಧಾರಿ ಎಂದು ಹೇಳಿದರು. ತಮ್ಮ ಹಾಸ್ಯ ಪಾತ್ರಗಳೊಂದಿಗೆ ಕ್ರಮೇಣ ಯಶಸ್ಸಿನ ಏಣಿಯನ್ನು ಏರಿದರು. ವಡಿವೇಲು ಅವರ ವೃತ್ತಿಜೀವನದಲ್ಲಿ ಅತ್ಯಂತ ಮರೆಯಲಾಗದ ಚಿತ್ರ 'ವಿನ್ನರ್'. ಈ ಚಿತ್ರದಲ್ಲಿ, ವಡಿವೇಲು ಕೈಪುಲ್ಲ ಪಾತ್ರವನ್ನು ನಿರ್ವಹಿಸಿದ್ದಾರೆ, 'ವೇಣಂ ವಾಲಿಕುತು ಅಳುಧುರ್ವೆನ್' ಎಂಬ ಸಾಲು ಸಖತ್ ವೈರಲ್ ಆಗಿತ್ತು. ಈ ನಿರ್ದಿಷ್ಟ ದೃಶ್ಯವು 16 ಟೇಕ್‌ಗಳನ್ನು ತೆಗೆದುಕೊಂಡಿತು. ಏಕೆಂದರೆ ದೃಶ್ಯವನ್ನು ಹಂಚಿಕೊಂಡ ನಟ ರಿಯಾಜ್ ಖಾನ್ ವಡಿವೇಲು ಅವರ ಸಂಭಾಷಣೆಯನ್ನು ಕೇಳಿ ನಗುವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದಿದ್ದರು.