ಕಾಂತಾರ ಚಾಪ್ಟರ್ 1 ಚಿತ್ರತಂಡದಲ್ಲಿ 3 ಸಾವು; ದೈವದ ಮುನಿಸೇ ಕಾರಣವಾಯ್ತಾ? 2 ಎಚ್ಚರಿಕೆ 5 ಅವಘಡ!

Published : Jun 12, 2025, 12:13 PM IST

ಕಾಂತಾರ ಚಿತ್ರತಂಡದ ಮೂವರು ಕಲಾವಿದರು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ದೈವದಿಂದ ರಿಷಬ್ ಶೆಟ್ಟಿಗೆ ಎಚ್ಚರಿಕೆ ನೀಡಲಾಗಿತ್ತು. ಈ ಸಾವುಗಳು ದೈವದ ಶಾಪವೇ? ಎಂಬ ಪ್ರಶ್ನೆ ಅದಕ್ಕೆ ಸಂಬಂಧಿಸಿದ ಘಟನೆಗಳು ಇಲ್ಲಿವೆ ನೋಡಿ..

PREV
18

ಕಾಂತಾರ ಸಿನಿಮಾ ಜಾಗತಿಕ ಮಟ್ಟದಲ್ಲಿ ಭಾರೀ ಯಶಸ್ಸು ಗಳಿಸಿದ ಬೆನ್ನಲ್ಲಿಯೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ; ಚಾಪ್ಟರ್ 1 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದರು. ಈ ವೇಳೆ ಚಿತ್ರೀಕರಣ ಆರಂಭಕ್ಕೂ ಮುನ್ನವೇ ದೈವದಿಂದ ರಿಷಷ್ ಶೆಟ್ಟಿಗೆ ತುಂಬಾ ಜಾಗ್ರತೆಯಿಂದ ಸಿನಿಮಾ ಮಾಡುವಂತೆ ಎಚ್ಚರಿಕೆಯನ್ನೂ ನೀಡಿತ್ತು. ದೈವಕ್ಕೆ ಅಸಮಾಧಾನ ಬರುವಂತಹ ಯಾವುದೇ ಕೃತ್ಯವನ್ನೂ ಮಾಡದಂತೆ ದೈವದ ಸೂಚನೆಯ ಬೆನ್ನಲ್ಲಿಯೇ ಶೂಟಿಂಗ್ ಆರಂಭಿಸಲಾಗಿತ್ತು. ಆದರೆ, ಇದೀಗ ಚಿತ್ರತಂಡದ ಮೂವರು ಕಲಾವಿದರು ಸಾವಿಗೀಡಾಗಿದ್ದಾರೆ.

28

ಕಾಂತಾರ ಚಾಪ್ಟರ್ 1 ಸಿನಿಮಾ ಚಿತ್ರೀಕರಣಕ್ಕೆ ಆರಂಭದಿಂದಲೇ ಹಲವು ವಿಘ್ನಗಳು ಎದುರಾಗಿದ್ದವು. ಕೆಲವರು ಕಾಂತಾರ ಚಾಪ್ಟರ್ 1 ಸಿನಿಮಾ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇನ್ನು ಅರಣ್ಯದಲ್ಲಿ ಚಿತ್ರೀಕರಣ ಮಾಡುವ ವೇಳೆ ಮರ ಕಡಿದ ಪ್ರಕರಣದಿಂದಲೂ ಚಿತ್ರತಂಡಕ್ಕೆ ಸಮಸ್ಯೆ ಉಂಟಾಗಿತ್ತು. ಇನ್ನು ಸಿನಿಮಾದಲ್ಲಿ ಕೆಲಸ ಮಾಡುವವನ್ನು ಕರೆದೊಯ್ಯುವ ಬಸ್ ಕೂಡ ಅಪಘಾತವಾಗಿತ್ತು. ಆದರೆ, ಆಗ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.

38

ಆಗ ನಟ ರಿಷಬ್ ಶೆಟ್ಟಿ ವಾರಾಹಿ ಪಂಜುರ್ಲಿ ದೈವದ ಮೊರೆ ಹೋದಾಗ 'ನಿನ್ನ ಕೆಸಲ ಹಾಳು ಮಾಡುವ ಸಂಚು ನಡೆದಿದೆ, ನಿನ್ನ ಸಂಸಾರ ಹಾಳು ಮಾಡುವ ಸಂಚು ನಡೆಯುತ್ತಿದೆ' ಎಂದು ಎಚ್ಚರಿಕೆಯನ್ನೂ ರವಾನಿಸಲಾಗಿತ್ತು.

48

ದೈವರ ಎಚ್ಚರಿಕೆ ಕಡೆಗಣಿಸಿದ್ದಕ್ಕೆ 3 ಸಾವಾಯ್ತಾ?

ಇನ್ನು ಕಾಂತಾರ ಸಿನಿಮಾ ಚಿತ್ರೀಕರಣ ಉತ್ತಮವಾಗಿ ಸಾಗುತ್ತಿದೆ ಎನ್ನುತ್ತಿರುವಾಗ ಚಿತ್ರತಂಡಲದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಸರಣಿ ಸಾವು ಸಂಭವಿಸಿವೆ. ಕಳೆದ ತಿಂಗಳು ಮೇ 6ರಂದು ಸಂಜೆ ಕೇರಳ ಮೂಲದ ಎಂ.ಎಫ್. ಕಪಿಲ್, ಮೇ 12ರಂದು ಕರ್ನಾಟಕದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಹಾಗೂ ಇಂದು ಜೂ.12ರಂದು ಕೇರಳ ತ್ರಿಶೂರ್ ಮೂಲದ ವಿಜು ವಿ.ಕೆ. ಸಾವಿಗೀಡಾಗಿದ್ದಾರೆ.

58

ನದಿಯಲ್ಲಿ ಮುಳುಗಿ ಕಪಿಲ್ ಸಾವು:

ಕಾಂತಾರ ಸಿನಿಮಾ ಚಿತ್ರೀಕರಣದಲ್ಲಿ ಕೆಲಸ ಮಾಡುತ್ತಿದ್ದ ಎಂ.ಎಫ್. ಕಪಿಲ್ ಅವರು ಶೂಟಿಂಗ್ ಬಿಡುವಿನ ವೇಳೆ ಮೇ 6ರ ಸಂಜೆ ಉಡುಪಿ ಜಿಲ್ಲೆಯ ಕೊಲ್ಲೂರು ಬಳಿಯಿರುವ ಸೌಪರ್ಣಿಕಾ ನದಿಯಲ್ಲಿ ಕಪಿಲ್ ಸ್ನೇಹಿತರೊಂದಿಗೆ ಈಜಾಡಲು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಈಜುಪಟುಗಳೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು 3 ಗಂಟೆಗಳ ಕಾರ್ಯಾಚರಣೆ ನಡೆಸಿ ರಾತ್ರಿ 7 ಗಂಟೆಯ ಸುಮಾರಿಗೆ ಕಪಿಲ್ ಶವ ಪತ್ತೆ ಮಾಡಿದ್ದರು.

68

ಹೃದಯಾಘಾತದಿಂದ ರಾಕೇಶ್ ಪೂಜಾರಿ ಸಾವು:

ಕಾಂತಾರ ಚಾಪ್ಟರ್ 1 ಸಿನಿಮಾದ ಮುಖ್ಯ ಪಾತ್ರಧಾರಿ ಆಗಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 3 ವಿಜೇತ ರಾಕೇಶ್ ಪೂಜಾರಿ (34) ಸ್ನೇಹಿತರ ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ ನಂತರ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಈ ವೇಳೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೇ 12 ರಂದು ಮುಂಜಾನೆ ರಾಕೇಶ್ ಪೂಜಾರಿ ಕೊನೆಯುಸಿರೆಳೆದರು. ರಾಕೇಶನ ಸಾವಿಗೆ ಇಡೀ ಕನ್ನಡ ಚಿತ್ರರಂಗ ಮತ್ತು ಕನ್ನಡ ಕಿರುತೆರೆಯ ಬಹುತೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ. ಪ್ರತಿಭಾವಂತ ಕಲಾವಿದ ಮಿಂಚುವ ಮುನ್ನವೇ ಕತ್ತಲೆ ಜಗತ್ತಿಗೆ ಸೇರಿದ್ದಾನೆ.

78

ಹೃದಯಾಘಾತಕ್ಕೆ ಮತ್ತೊಬ್ಬ ಕಲಾವಿದ ವಿಜು ಬಲಿ:

ಇದೇ ಕಾಂತಾರ ಸಿನಿಮಾದಲ್ಲಿ ಸಹಾಯಕ ಕಲಾವಿದನಾಗಿ ನಟಿಸುತ್ತಿದ್ದ ವಿಜು ವಿ.ಕೆ. ಅವರು ಶಿವಮೊಗ್ಗದ ಆಗುಂಬೆಯ ಹೋಂ ಸ್ಟೇನಲ್ಲಿ ಇರುವಾಗ ಹೃದಯಾಘಾತಕ್ಕೆ ಬಲಿ ಆಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡಾಕ್ಷಣ ಆಸ್ಪತ್ರೆಗೆ ದಾಖಲಿಸಿತಾದರೂ ವೈದ್ಯರು ಸಾವನ್ನಪ್ಪಿದ್ದಾಗಿ ತಿಳಿಸಿದ್ದಾರೆ.

88

ಕಾಂತಾರ ಸಿನಿಮಾದ 8 ಎಚ್ಚರಿಕೆ ಮತ್ತು ಅವಘಡಗಳು:

  • ಕಾಂತಾರ ಸಿನಿಮಾ ಆರಂಭಕ್ಕೂ ಮುನ್ನ ದೈವದ ಎಚ್ಚರಿಕೆ; ಜಾಗ್ರತೆಯಿಂದ ಸಿನಿಮಾ ಮಾಡಲು ಸೂಚನೆ.
  • ಕರಾವಳಿಯ ವಾರಾಹಿ ಪಂಜುರ್ಲಿ ದೈವದ ಹೆಸರಿನಲ್ಲಿ ಹಣ ಮಾಡಿಕೊಳ್ಳಲಾಗುತ್ತಿದೆ ಎಂದು ಸ್ಥಳೀಯರ ಆರೋಪ. ಚಿತ್ರೀಕರಣಕ್ಕೆ ಆರಂಭದಲ್ಲಿ ವಿರೋಧ.
  • ಕಾಂತಾರ ಸಿನಿಮಾ ಜ್ಯೂನಿಯರ್ ಕಲಾವಿದರಿಗೆ ವೇತನ ಕೊಟ್ಟಿಲ್ಲ ಎಂದು ದೂರು ಕೂಡ ಕೇಳಿಬಂದಿತ್ತು.
  • ಹಾಸನದ ಹೊಸೂರು ಗ್ರಾಮದಲ್ಲಿ ಅರಣ್ಯದಲ್ಲಿದ್ದ ಮರ ಕಡಿದು ಬೆಂಕಿ ಹಚ್ಚಿದ ಆರೋಪ ಕೇಳಿಬಂದಿತ್ತು. ನಂತರ ಕ್ಲೀನ್ ಚಿಟ್ ಸಿಕ್ಕಿತ್ತು.
  • ಪಂಜುರ್ಲಿ ದೈವದಿಂದ ನಿನ್ನ ಕೆಲಸ ಮತ್ತು ಸಂಸಾರ ಹಾಳು ಮಾಡುವ ಸಂಚು ನಡೆದಿದೆ ಎಂದು ಎಚ್ಚರಿಕೆ ರವಾನೆ ಆಗಿತ್ತು.
  • ಉಡುಪಿ ಸೌಪರ್ಣಿಕಾ ನದಿಯಲ್ಲಿ ಮುಳುಗಿ ಕಾಂತಾರ ಚಿತ್ರತಂಡದ ಕಪಿಲ್ ಸಾವು
  • ಸ್ನೇಹಿತನ ಮದುವೆಗೆ ಹೋಗಿದ್ದ ಹಾಸ್ಯನಟ ರಾಕೇಶ್ ಪೂಜಾರಿ ಸಾವು
  • ಶಿವಮೊಗ್ಗದ ಹೋಂ ಸ್ಟೇನಲ್ಲಿ ತಂಗಿದ್ದ ಸಹನಟ ವಿಜು ವಿ.ಕೆ ಸಾವು
Read more Photos on
click me!

Recommended Stories