ವಯಸ್ಸು 45 ದಾಟಿದರೂ ಇನ್ನೂ ಯಂಗ್ ಆಗಿ ಕಾಣಿಸ್ತಾರೆ ಈ ನಾಯಕಿಯರು

Published : Aug 29, 2023, 05:46 PM IST

ಬಾಲಿವುಡ್ ನಲ್ಲಿ ಹಲವಾರು ನಾಯಕಿಯರಿದ್ದಾರೆ ಅವರು ಒಂದಾನೊಂದು ಕಾಲದ ಟಾಪ್ ನಾಯಕಿಯರು, ಆದರೆ ಇಂದಿಗೂ ಸಹ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಅಂತಹ ನಾಯಕಿಯರು ಯಾರು ನೋಡೋಣ.   

PREV
18
ವಯಸ್ಸು 45 ದಾಟಿದರೂ ಇನ್ನೂ ಯಂಗ್ ಆಗಿ ಕಾಣಿಸ್ತಾರೆ ಈ ನಾಯಕಿಯರು

ನಟಿಯರ ಸೌಂದರ್ಯ ಎಂದಿಗೂ ಮಾಸೋದೇ ಇಲ್ವೇನೋ ಎಂದು ಈ ನಟಿಯರನ್ನು (evergreen beauties)  ನೋಡಿದಾಗ ಅನಿಸುತ್ತೆ. ಯಾಕಂದ್ರೆ ಒಂದಾನೊಂದು ಕಾಲದಲ್ಲಿ ಅವರು ಹೀರೋಯಿನ್ ಆಗಿದ್ದಾಗ, ಯಾವ ರೀತಿ ಸುಂದರಿಯಾಗಿದ್ದರೋ, ಈಗಲೂ ಸಹ ಅವರು ಅದೇ ಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ. ಅವರು ಯಾರು ತಿಳಿಯಬೇಕೇ? ವಯಸ್ಸಾದ ನಂತರವೂ ತುಂಬಾ ಯಂಗ್ ಆಗಿ ಕಾಣುವ ಅನೇಕ ಬಾಲಿವುಡ್ ನಟಿಯರು ಇದ್ದಾರೆ. ರೇಖಾ ಅವರಿಂದ ಹಿಡಿದು ಸಂಗೀತಾ ಬಿಜ್ಲಾನಿವರೆಗೆ ಈ ಲಿಸ್ಟ್ ನಲ್ಲಿ ಯಾವ ಯಾವ ನಟಿಯರ ಹೆಸರು ಇದೆ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ, ಇಲ್ಲಿದೆ ನೋಡಿ.

28

ರೇಖಾ
ಬಾಲಿವುಡ್ ನಟಿ ರೇಖಾ (Rekha) 68 ನೇ ವಯಸ್ಸಿನಲ್ಲಿಯೂ ತುಂಬಾ ಸುಂದರವಾಗಿ ಕಾಣುತ್ತಾರೆ. ಇವರನ್ನು ಎವರ್ ಗ್ರೀನ್ ನಟಿ ಎಂದರೆ ತಪ್ಪಾಗಲ್ಲ, 80ರ ದಶಕದಲ್ಲಿ ಬಾಲಿವುಡ್ ನ್ನೆ ಗೆದ್ದ ಈ ನಟಿ, ಇಂದಿಗೂ ಅದೇ ಬ್ಯೂಟಿ, ಅದೇ ಸ್ಟೈಲ್ ಹೊಂದಿದ್ದಾರೆ ಅಂದ್ರೆ ತಪ್ಪಾಗಲ್ಲ. 

38

ಕಾಜೋಲ್ (kajol)
49ನೇ ವಯಸ್ಸಿನಲ್ಲೂ ಕಾಜೋಲ್ ಮುಖ ಹೇಗೆ ಹೊಳೆಯುತ್ತೆ, ಅಂದ್ರೆ, ಈಗಷ್ಟೇ ಸಿನಿಮಾ ಇಂಡಷ್ಟ್ರಿಗೆ ಬಂದ ನಟಿಯಂತೆ ಕಾಣಿಸುತ್ತಾರೆ. ಇವರನ್ನು ನೋಡಿದ್ರೆ ಯಾರೂ ಸಹ ಇಬ್ಬರು ಮಕ್ಕಳ ತಾಯಿ ಇವರು ಎಂದು ಹೇಳಲಾರದು. ತಮ್ಮ ಅಭಿನಯ, ಸೌಂದರ್ಯದಿಂದಾಗಿಯೇ ಇಂದಿಗೂ ಅವರು ಬಹುಬೇಡಿಕೆಯ ನಟಿಯಾಗಿ ಉಳಿದಿದ್ದಾರೆ. 

48

ಐಶ್ವರ್ಯ ರೈ (Aishwarya Rai)
ಐಶ್ವರ್ಯಾ ರೈ ಸೌಂದರ್ಯಕ್ಕೆ ಸರಿಯಾದುದು ಯಾವುದು ಇಲ್ಲ ಅಂತಾನೆ ಅನ್ನಬಹುದು, ಮಾಹಿ ವಿಶ್ವಸುಂದರಿ ಇಂದಿಗೂ ಅದೇ ಚಾರ್ಮಿಂಗ್ ಉಳಿಸಿಕೊಂಡಿದ್ದಾರೆ.ಐಶ್ವರ್ಯಾ 49 ನೇ ವಯಸ್ಸಿನಲ್ಲಿಯೂ ತುಂಬಾ ಸುಂದರವಾಗಿ ಯುವಕರ ಹೃದಯವನ್ನು ಕದಿಯುವ ಹುಡುಗಿಯಂತೆ ಕಾಣಿಸ್ತಾರೆ. .

58

ಮಲೈಕಾ ಅರೋರಾ (Malaika Arora)
ಬಾಲಿವುಡ್ ನಟಿ ಮಲೈಕಾ ಅರೋರಾ 49 ನೇ ವಯಸ್ಸಿನಲ್ಲಿಯೂ ತುಂಬಾ ಚಿಕ್ಕವರಂತೆ ಕಾಣುತ್ತಾರೆ. ಈ ವಯಸ್ಸಲ್ಲೂ ಅವರು ಫಿಟ್ನೆಸ್ ಕಡೆಗೆ ತುಂಬಾನೆ ಗಮನ ಹರಿಸುತ್ತಾರೆ. ಪ್ರತಿದಿನ ವಾಕಿಂಗ್, ಜಿಮ್, ಯೋಗ ಮಾಡೋದನ್ನು ಇವರು ಮರೆಯೋದಿಲ್ಲ. ಇವರ ಫಿಟ್ನೆಸ್ ಹದಿಹರೆಯದವರನ್ನು ನಾಚಿಸುತ್ತೆ. 
 

68

ಕರೀಷ್ಮಾ ಕಪೂರ್ (Kareeshma kapoor)
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಕೂಡ 49 ನೇ ವಯಸ್ಸಿನಲ್ಲಿ ಯಂಗ್ ಮತ್ತು ಸುಂದರವಾಗಿ ಕಾಣುತ್ತಾರೆ. ಅವರನ್ನ ನೋಡಿದ್ರೆ ಯಾರೂ ಸಹ ಅವರಿಗೆ ಇನ್ನೇನು 50 ವರ್ಷ ಆಗಲಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಏನು ಹೇಳ್ತೀರಾ ನೀವು? 

78

ಶಿಲ್ಪಾ ಶೆಟ್ಟಿ (Shilpa Shetty)
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕೂಡ 48 ನೇ ವಯಸ್ಸಿನಲ್ಲಿ ಹೇಗೆ ಕಾಣಿಸ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ನಟಿಯ ತಳುಕು- ಬಳುಕಿನ ಲತೆಯಂತ ದೇಹಸಿರಿಗೆ ಮಾರುಹೋಗದವರು ಯಾರೂ ಇಲ್ಲ. ಯೋಗವೇ ಇವರ ಫಿಟ್ನೆಸ್ ರಹಸ್ಯ.

88

ಸಂಗೀತಾ ಬಿಜ್ಲಾನಿ(Sangeeta Bijlani)
63 ನೇ ವಯಸ್ಸಿನಲ್ಲಿಯೂ, ಸಂಗೀತಾ ಬಿಜ್ಲಾನಿ ಯಂಗ್ ಮತ್ತು ಬ್ಯೂಟಿಫುಲ್ ಆಗಿ ಕಾಣುತ್ತಾರೆ. 80 ದಶಕದಲ್ಲಿ ಸಿನಿಮಾ ಮತ್ತು ಮಾಡೆಲಿಂಗ್ ನಲ್ಲಿ ಸಕ್ರಿಯರಾಗಿದ್ದ ಇವರನ್ನು ಬಿಜ್ಲಿ ಅಂತಾನೆ ಕರೆಯಲಾಗುತ್ತಿತ್ತು. ಇಂದಿಗೂ ಸಹ ಇವರು ಅದೇ ಚಾರ್ಮಿಂಗ್ ಉಳಿಸಿಕೊಂಡಿದ್ದಾರೆ. 
 

Read more Photos on
click me!

Recommended Stories