ಅಬುಧಾಬಿಯಲ್ಲಿ ಧರೆಗಿಳಿದ ತಾರೆಯರು: ಐಫಾದಲ್ಲಿ ಮಿಂಚಿದ ಸೆಲೆಬ್ರಿಟಿಸ್ ಫೋಟೋಸ್‌

First Published | Oct 1, 2024, 5:55 PM IST

ಅಬುಧಾಬಿಯಲ್ಲಿ ಮೂರು ದಿನಗಳ ಕಾಲ ನಡೆದ ಇಂಟರ್‌ನ್ಯಾಷನಲ್ ಫಿಲಂ ಅವಾರ್ಡ್‌ ಸಮಾರಂಭದಲ್ಲಿ ಬಹುತೇಕ ಎಲ್ಲಾ ಭಾರತೀಯ ಸಿನಿಮಾ ತಾರೆಯರು ಸಿನಿಮಾ ನಿರ್ದೇಶಕರು ನಿರ್ಮಾಪಕರು ಭಾಗವಹಿಸಿದ್ದರು. ಅವರ ಸುಂದರ ಫೋಟೋಗಳು ಇಲ್ಲಿವೆ ನೋಡಿ.

IIFA -2024

ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ-2024 ಸಮಾರಂಭದಲ್ಲಿ ಬಾಲಿವುಡ್ ನಟ ಒಟಿಟಿ ಸ್ಟಾರ್, ತಮನ್ನಾ ಗೆಳೆಯ ವಿಜಯ್‌ ವರ್ಮಾ  ಕಪ್ಪು ಬಣ್ಣದ ನಾರ್ಮಲ್ ಸೂಟ್‌ಗೆ ಬಿಳಿ ಶೂ ಧರಿಸಿ ಕಂಗೊಳಿಸಿದರು.

IIFA -2024

ಹಾಗೆಯೇ 90ರ ದಶಕದ ಬಾಲಿವುಡ್‌ನ ರಾಣಿ ನಟಿ ರಾಣಿ ಮುಖರ್ಜಿ ಬೂದು ಬಣ್ಣದ ಸೀರೆ ಹಾಗೂ ಅದಕ್ಕೊಪ್ಪುವ ಬೌಸ್‌ ಧರಿಸಿ ಈ ಐಫಾದಲ್ಲಿ ಕಂಗೊಳಿಸಿದರು. ಈ ಸಮಾರಂಭದಲ್ಲಿ ಅವರಿಗೆ 'ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ' ಸಿನಿಮಾದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Tap to resize

IIFA -2024

ಹಾಗೆಯೇ ಬಾಲಿವುಡ್‌ನ ಮತ್ತೊಬ್ಬ ಹಿರಿಯ ನಟಿ ಡ್ರೀಮ್‌ ಗರ್ಲ್‌ ಹೇಮಾ ಮಾಲಿನಿ ಅವರಿಗೆ ಭಾರತೀಯ ಸಿನಿಮಾದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ಅತ್ಯುತ್ತಮ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು. ಈ ಸಮಾರಂಭಕ್ಕೆ ಹೇಮಾ ಹೊಳೆಯುವ ಬೂದು ಬಣ್ಣದ ಸೀರೆಯುಟ್ಟು ಆಗಮಿಸಿದ್ದರು.

IIFA -2024

 ಐಫಾ ಸಮಾರಂಭದ ನಿರೂಪಣೆಯನ್ನು ಮಾಡಿದ ನಟ ಶಾರುಖ್ ಖಾನ್ ಅವರಿಗೆ ಜವಾನ್ ಸಿನಿಮಾದಲ್ಲಿನ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಯ್ತು.

IIFA -2024

ಐಶ್ವರ್ಯಾ ರೈ ಅವರಿಗೂ ಈ ಬಾರಿಯ ಐಫಾದಲ್ಲಿ ಅವರ ಐತಿಹಾಸಿಕ ತಮಿಳು ಸಿನಿಮಾ ಪೊನ್ನಿಯಿನ್ ಸೆಲ್ವನ್-2ನಲ್ಲಿನ ನಟನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯ್ತು. ಈ ಸಿನಿಮಾಗೆ ಈಗಾಗಲೇ ಫಿಲಂ ಫೇರ್ ಅವಾರ್ಡ್ ಕೂಡ ಲಭಿಸಿದೆ. ಈ ಕಾರ್ಯಕ್ರಮದಲ್ಲಿ ತೆಲುಗಿನ ಹಿರಿಯ ನಟ ಬಾಲಯ್ಯ ಅವರ ಕಾಲಿಗೆ ಬಿದ್ದು ನಟಿ ಆಶೀರ್ವಾದ ಪಡೆದಿದ್ದು ಕೂಡ ಗಮನ ಸೆಳೆಯಿತು. 

IIFA -2024

ಸೀತಾರಾಮ ನಟಿ ಮೃಣಾಳ್ ಠಾಕೂರ್‌, ಸಂಪೂರ್ಣ ವಿಭಿನ್ನ ಹಾಗೂ ಸ್ಟೈಲಿಶ್‌ ಲುಕ್‌ನಲ್ಲಿ ಐಫಾ ಸಮಾರಂಭಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟರು.

IIFA -2024

ಬಾಲಿವುಡ್ ನಟಿ ರೇಖಾ ಎಂದಿನಂತೆ ಸಾರಿ ಧರಿಸಿ ತಮ್ಮ ಎಂದಿನ ರೇಡಿಯೆಂಟ್ ಲುಕ್‌ನಲ್ಲಿ ಗಮನ ಸೆಳೆದರು ಕ್ರೀಮ್ ಬಣ್ಣದ ಸೀರೆ ಧರಿಸಿದ್ದ ರೇಖಾ, ಈ ಸಮಾರಂಭದಲ್ಲಿ20 ನಿಮಿಷ ನಿರಂತರ ನೃತ್ಯ ಮಾಡುವ ಮೂಲಕ ಸಿನಿ ರಸಿಕರ ಮನಸೆಳೆದರು. 

Latest Videos

click me!