ನಟ, ನಿರ್ದೇಶಕ ಹಾಗೂ ನಿರ್ಮಾಪಕದ ಕರಣ್ ಜೋಹರ್ ಇತ್ತೀಚೆಗೆ ಭಾರತದಲ್ಲಿ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದು ಬಹಳ ದುಬಾರಿ ಎಂದು ಹೇಳಿದ್ದರು. ಇತ್ತೀಚೆಗೆ ತಮ್ಮೊಂದಿಗೆ ಒಂದು ಕುಟುಂಬ ಮಾತನಾಡುತ್ತಿತ್ತು. ಅವರು ಹೇಳಿದ್ದೇನೆಂದರೆ, ನಾವು ಸಿನಿಮಾ ಹಾಲ್‌ಗೆ ಹೋಗಿ ಫಿಲ್ಮ್ ನೋಡೋಕೆ ಇಷ್ಟ ಪಡೋದಿಲ್ಲ. ಏಕೆಂದರೆ, ಸಿನಿಮಾಗೆ ಹೋದಾಗ ಮಕ್ಕಳು ಅಲ್ಲಿ ಪಾಪ್‌ಕಾರ್ನ್ ಅಥವಾ ಇನ್ನೂ ಏನಾದರೂ ಬೇಕು ಅಂತಾ ಕೇಳ್ತಾರೆ. ಈ ವೇಳೆ ಇಲ್ಲ ಅಂತಾ ಹೇಳೋಕೆ ಆಗಲ್ಲ. ನಾಲ್ಕು ಮಂದಿಯ ಒಂದು ಕುಟುಂಬ ವೀಕೆಂಡ್‌ನಲ್ಲಿ ಸಿನಿಮಾಗೆ ಹೋಗಬೇಕು ಅಂದರೆ, ಕನಿಷ್ಠ 10 ಸಾವಿರ ರೂಪಾಯಿ ಖರ್ಚಾಗುತ್ತದೆ' ಎಂದು ಹೇಳಿದ್ದಾಗಿ ತಿಳಿಸಿದ್ದರು. ಕರಣ್ ಜೋಹರ್ ಈ ಮಾತಿನ ಬೆನ್ನಲ್ಲಿಯೇ ಭಾರತದಲ್ಲಿ ವೀಕೆಂಡ್‌ನಲ್ಲಿ ಸಿನಿಮಾ ನೋಡೋಕೆ ಹೋದ್ರೆ ಖರ್ಚಾಗೋದೆಷ್ಟು ಅನ್ನೋದರ ಚರ್ಚೆ ಆರಂಭವಾಗಿದೆ.