'ಡೆವಿಲ್' ಸಿನಿಮಾದ 'ಒಂದೇ ಒಂದು ಸಲ' ಹಾಡಿನ ಯಶಸ್ಸಿನ ಬೆನ್ನಲ್ಲೇ, ಸಹನಟಿ ರಚನಾ ರೈ ಅವರು ದರ್ಶನ್ ಜೊತೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರ ವೃತ್ತಿಪರತೆ, ತಾಳ್ಮೆ ಮತ್ತು ಸೌಜನ್ಯವನ್ನು ಶ್ಲಾಘಿಸಿದ್ದಾರೆ.
ಬೆಂಗಳೂರು (ಅ.13): ನಟ ದರ್ಶನ್ ಅವರ ಡೆವಿಲ್ ಸಿನಿಮಾದ (The Devil) ಹೊಸ ಹಾಡು 'ಒಂದೇ ಒಂದು ಸಲ' (Onde Ondu Sala) ಈಗ ವಿಪರೀತ ಸದ್ದು ಮಾಡುತ್ತಿದ್ದು, ಈ ಹಾಡಿನಲ್ಲಿ ದರ್ಶನ್ ಜೊತೆ ಕಾಣಿಸಿಕೊಂಡಿರುವ ಸಹನಟಿ ರಚನಾ ರೈ ಅವರು (Rachana Rai) ತಮ್ಮ ಅನುಭವಗಳನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಪೋಸ್ಟ್ ಮಾಡಿದ್ದಾರೆ. ದರ್ಶನ್ ಅವರ ವೃತ್ತಿಪರತೆ, ತಾಳ್ಮೆ ಮತ್ತು ಸೌಜನ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಅವರು 'ನಿಜಕ್ಕೂ ಅತ್ಯುತ್ತಮ ವ್ಯಕ್ತಿ' ಎಂದು ಬಣ್ಣಿಸಿದ್ದಾರೆ.
25
ಸೂಪರ್‌ಸ್ಟಾರ್ ಜೊತೆ ಕೆಲಸ ಮಾಡಿದ್ದು ಅದೃಷ್ಟ!
ದರ್ಶನ್ ಅವರೊಂದಿಗೆ ಕೆಲಸ ಮಾಡಿದ್ದನ್ನು ತಮ್ಮ ಅಪಾರ ಅದೃಷ್ಟ ಎಂದು ನಟಿ ಬಣ್ಣಿಸಿದ್ದಾರೆ. 'ಸೂಪರ್‌ಸ್ಟಾರ್ ದರ್ಶನ್ ಸರ್ ಅವರೊಂದಿಗೆ ಕೆಲಸ ಮಾಡಿದ್ದು ಸಂಪೂರ್ಣ ಆಶೀರ್ವಾದದಂತಿದೆ. ಸೆಟ್‌ನಲ್ಲಿ ಕಳೆದ ಪ್ರತಿ ದಿನವೂ ನನಗೆ ಒಂದು ಪಾಠವಾಗಿತ್ತು. ಅವರ ಏಕಾಗ್ರತೆ, ತಾಳ್ಮೆ ಮತ್ತು ಬದ್ಧತೆಯನ್ನು ನೋಡುವುದೇ ಒಂದು ಕಲಿಕೆ. ಅವರು ಯಾವುದೇ ದೃಶ್ಯವನ್ನು ಪ್ರಯತ್ನವಿಲ್ಲದೆ ಜೀವಂತಗೊಳಿಸುವ ವಿಧಾನ ಅದ್ಭುತ ಎಂದು ತಿಳಿಸಿದ್ದಾರೆ.
35
ಕ್ಯಾಮೆರಾ ಹಿಂದೆಯೂ ದರ್ಶನ್ ಪ್ರೀತಿಯ ವ್ಯಕ್ತಿ:
ಕ್ಯಾಮೆರಾ ಹಿಂದೆಯೂ ದರ್ಶನ್ ಸರ್ ಅವರ ಪ್ರೀತಿ ಮತ್ತು ಸೌಜನ್ಯವೇ ದೊಡ್ಡ ಛಾಪು ಮೂಡಿಸುತ್ತದೆ. ನಾನು ಇದುವರೆಗೆ ಭೇಟಿಯಾದ ಅತ್ಯಂತ ಸಹನೆಯುಳ್ಳ ವ್ಯಕ್ತಿಗಳಲ್ಲಿ ಅವರೂ ಒಬ್ಬರು ಎಂದು ನಟಿ ಭಾವುಕವಾಗಿ ಬರೆದಿದ್ದಾರೆ. ಅವರು ಕೇವಲ ಅದ್ಭುತ ಸಹನಟ ಮಾತ್ರವಲ್ಲ, ಅದಕ್ಕಿಂತ ಹೆಚ್ಚಾಗಿ ಅಸಾಧಾರಣ ಮಾನವೀಯ ವ್ಯಕ್ತಿ. ನೀವು ದಿ ಬೆಸ್ಟ್ (You're the Best) ಎಂದು ಡಿ ಬಾಸ್‌ಗೆ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
'ಒಂದೇ ಒಂದು ಸಲ' ಹಾಡಿನ ಶೂಟಿಂಗ್ ಸುಲಭವಾಗಿರಲಿಲ್ಲ ಎಂಬುದನ್ನು ಸಹ ನಟಿ ನೆನಪಿಸಿಕೊಂಡಿದ್ದಾರೆ. 'ಬೀಚ್ ಶೂಟಿಂಗ್ ತಮಾಷೆಯಾಗಿರಲಿಲ್ಲ. ಸುಡುವ ಸೂರ್ಯ, ಸನ್‌ಬರ್ನ್ಸ್, ಟ್ಯಾನ್ ಮತ್ತು ತೀವ್ರ ವಾತಾವರಣದ ನಡುವೆಯೂ ಬೀಚ್‌ನಲ್ಲಿ ಸುದೀರ್ಘ ಶೂಟಿಂಗ್ ಮಾಡಬೇಕಿತ್ತು.
ಆದರೆ ಸೂರ್ಯ, ಮರಳು ಮತ್ತು ವೈಲ್ಡ್ ವಾತಾವರಣವನ್ನು ಎದುರಿಸಿ ಬಂದ ಔಟ್‌ಪುಟ್ ಎಷ್ಟು ಅದ್ಭುತವಾಗಿ ಕಾಣುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ' ಎಂದು ಅವರು ಹೇಳಿದ್ದಾರೆ. ಕಷ್ಟದ ನಡುವೆಯೂ ಮೂಡಿಬಂದ ಈ ಹಾಡು ತಮಗೆ ಅತ್ಯಂತ ಪ್ರಿಯವಾದುದು ಎಂದು ಅಭಿಪ್ರಾಯಪಟ್ಟಿದ್ದಾರೆ.
55
ಇಡೀ ಚಿತ್ರತಂಡಕ್ಕೆ ಧನ್ಯವಾದ
ಕೊನೆಯಲ್ಲಿ, ಈ ಹಾಡನ್ನು ಯಶಸ್ವಿಗೊಳಿಸಲು ಶ್ರಮಿಸಿದ ಇಡೀ ಚಿತ್ರತಂಡಕ್ಕೆ ಧನ್ಯವಾದ ಹೇಳಿದ ನಟಿ, ಹಾಡಿಗೆ ಪ್ರೀತಿ ತೋರಿಸುತ್ತಿರುವ ಅಭಿಮಾನಿಗಳಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ದರ್ಶನ್ ಅವರ ಮೇಲಿನ ಅಭಿಮಾನ ಮತ್ತು ಗೌರವವನ್ನು ಈ ಪೋಸ್ಟ್ ಸ್ಪಷ್ಟವಾಗಿ ಬಿಂಬಿಸಿದೆ.