ಕೆಜಿಎಫ್‌-2 ಸ್ಟೋರಿ ಕಾಪಿ ಮಾಡಿದ ಪುಷ್ಪ-2; ಇಷ್ಟೆಲ್ಲಾ ಕಾಕತಾಳೀಯ ಇರೋಕೆ ಹೇಗೆ ಸಾಧ್ಯ?

First Published | Nov 22, 2024, 4:36 PM IST

ಪುಷ್ಪ 2 ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ, ಅಭಿಮಾನಿಗಳು ಕೆಜಿಎಫ್ 2 ಸಿನಿಮಾದ ಹಲವು ಅಂಶಗಳನ್ನು ಪುಷ್ಪ 2 ರಲ್ಲಿ ಕಾಣುತ್ತಿದ್ದಾರೆ. ತಾಯಿಯ ಸೆಂಟಿಮೆಂಟ್, ಅಧಿಕಾರ ದಾಹ, ಅಂತಾರಾಷ್ಟ್ರೀಯ ವಿಸ್ತಾರ, ಬಾಲ್ಯದ ಕಥೆ, ಪ್ರೀತಿ-ಪ್ರಣಯದಂತಹ ಹಲವು ಅಂಶಗಳು ಎರಡೂ ಚಿತ್ರಗಳಲ್ಲಿ ಹೋಲುತ್ತಿವೆ. ಚಿನ್ನಕ್ಕಾಗಿ ರಾಕಿ ಹೋರಾಡಿದರೆ, ರಕ್ತ ಚಂದನಕ್ಕಾಗಿ ಪುಷ್ಪ ಹೋರಾಡುವುದೇ ವ್ಯತ್ಯಾಸ.

ಅಲ್ಲು ಅರ್ಜುನ್‌ ಅಭಿನಯದ ಪುಷ್ಪ-2 ಸಿನಿಮಾ ರಿಲೀಸ್‌ಗೆ ರೆಡಿ ಆಗುತ್ತಿದೆ. ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆ ಆದ ಬೆನ್ನಲ್ಲಿಯೇ ಇದರಲ್ಲಿ ಯಶ್‌ ಅಭಿನಯದ ಕೆಜಿಎಫ್‌-2 ಸಿನಿಮಾದ ಸಾಕಷ್ಟು ಪಡಿಯಚ್ಚು ಕಾಣುತ್ತಿದೆ ಎಂದು ಅಭಿಮಾನಿಗಳು ನೋಟ್‌ ಮಾಡಿದ್ದಾರೆ. ಇದು ಕೆಜಿಎಫ್‌-2 ಸಿನಿಮಾದ ಲೋ ಬಜೆಟ್‌ ಕಾಪಿ ಎಂದು ಟೀಕಿಸಿದ್ದಾರೆ. ಅಷ್ಟಕ್ಕೂ ಕಾರಣವಾಗಿರುವ ಅಂಶಗಳು ಯಾವವು ಅನ್ನೋದರ ವಿವರ ಇಲ್ಲಿದೆ.
 

ತಾಯಿಯ ಸೆಂಟಿಮೆಂಟ್‌: ಕೆಜಿಎಫ್‌ ಸಿನಿಮಾದಲ್ಲಿ ತಾಯಿಯ ಸಾವಿನ ಬಳಿಕ ಆಕೆಯ ಆಸೆಯಂತೆ ರಾಕಿ ಬಾಯ್‌ ಶ್ರೀಮಂತನಾಗುವ ಕನಸು ಕಾಣುವ ಕಥೆ ಹೊಂದಿದೆ.

ಪುಷ್ಪ-2 ಸಿನಿಮಾದಲ್ಲೂ ಇಂಥದ್ದೇ ದೃಶ್ಯಗಳಿದ್ದು ಅದರಲ್ಲಿ ಮದುವೆ ಮನೆಯಲ್ಲಿ ತಾಯಿಗೆ ಆದ ಅವಮಾನವನ್ನು ಕಂಡ ಬಳಿಕ ಪುಷ್ಪನ ಕಥೆ ಆರಂಭವಾಗುತ್ತದೆ.
 

Latest Videos


ಅಧಿಕಾರ ದಾಹ: ಅಧಿಕಾರ ಪಡೆಯುವ ನಿಟ್ಟಿನಲ್ಲಿ ರಾಕಿಯ ಮೊದಲ ಹೆಜ್ಜೆ ಆರಂಭವಾಗುವುದು ಗರುಡನ ಸಾವು. ಅಲ್ಲಿಂದಲೇ ರಾಕಿ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ.

ಪುಷ್ಪ-2 ಸಿನಿಮಾದಲ್ಲೂ ಇದೇ ರೀತಿಯ ಕಥೆ ಇದೆ. ಕೊಂಡಾರೆಡ್ಡಿಯ ಸಾವಿನ ಬಳಿಕ ಪುಷ್ಪಗೆ ಅಧಿಕಾರದ ಆಸೆ ಅಮಲೇರುತ್ತದೆ.
 

ಅಂತಾರಾಷ್ಟ್ರೀಯ ವಿಸ್ತಾರ: ತನ್ನ ಗೋಲ್ಡ್‌ ಮೈನಿಂಗ್‌ ಉದ್ಯಮವನ್ನು ವಿಸ್ತಾರ ಮಾಡುವ ನಿಟ್ಟಿನಲ್ಲಿ ದುಬೈಗೆ ಭೇಟಿ ನೀಡುವ ರಾಕಿ ಅಲ್ಲಿ ಇನಾಯತ್‌ ಖಲೀಲ್‌ನನ್ನು ಭೇಟಿ ಮಾಡುವ ಕಥೆ ಕೆಜಿಎಫ್‌ನಲ್ಲಿದೆ.

ಪುಷ್ಪ-2 ಸಿನಿಮಾದಲ್ಲಿ ತನ್ನ ರಕ್ತ ಚಂದನ ಉದ್ಯಮವನ್ನು ವಿಸ್ತಾರ ಮಾಡುವ ಸಲುವಾಗಿ ಜಪಾನ್‌ಗೆ ಪುಷ್ಪ ಜಪಾನ್‌ಗೆ ಭೇಟಿ ನೀಡುವ ಕಥೆ ಹೊಂದಿರುವ ಹಾಗೆ ಕಾಣುತ್ತಿದೆ.
 

ಬಾಲ್ಯ ಹಾಗೂ ಪೂರ್ವದ ಕಥೆ: ಕೆಜಿಎಫ್‌ನಲ್ಲಿ ರಾಕಿ ಬಾಯ್‌ಗೆ ಉತ್ತಮವಾದ ಬಾಲ್ಯ ಇದ್ದಿರಲಿಲ್ಲ. ತಾಯಿಯ ಸಾವಿನೊಂದಗೆ ಆತನ ಬಾಲ್ಯ ಕೂಡ ಹೋರಾಟವೇ ಆಗಿರುವ ಕಥೆ ಹೊಂದಿತ್ತು.

ಪುಷ್ಪ-2 ಸಿನಿಮಾದಲ್ಲೂ ಇದೇ ರೀತಿಯ ಬಾಲ್ಯದ ಸಂಕಷ್ಟಗಳನ್ನು ಪುಷ್ಪ ಎದುರಿಸುವ ಕಥೆ ಹೊಂದಿದೆ. ಕೆಲವೊಂದು ದೃಶ್ಯಗಳು ಕಾಪಿಕ್ಯಾಟ್‌ ಕೂಡ ಆಗಿರುವ ಹಾಗೆ ಕಾಣ್ತಿದೆ.
 

ಪ್ರೀತಿ, ಪ್ರಣಯ: ಕೆಜಿಎಫ್‌ನಲ್ಲಿ ರಾಕಿ ಬಾಯ್‌ನ ಆಟಿಟ್ಯೂಡ್‌ನ ಕಾರಣಕ್ಕಾಗಿ ಆತನ ಲವ್‌ ಇಂಟ್ರಸ್ಟ್‌ ರೀನಾ ಮೊದಲು ಇಷ್ಟಪಡ್ತಾ ಇರ್ಲಿಲ್ಲ. ಕೊನೆಗೆ ಆಕೆ ಆತನನ್ನೇ ಮದುವೆಯಾಗುವ ಕಥೆ ಹೊಂದಿದೆ.

ಪುಷ್ಪ-2 ಸಿನಿಮಾದಲ್ಲೂ ಶ್ರೀವಲ್ಲಿ ಆರಂಭದಲ್ಲಿ ಪುಷ್ಪನನನ್ನು ದ್ವೇಷ ಮಾಡುವ ಕಥೆಯೇ ಇದೆ. ಕೊನೆಗ ಆಕೆ ಆತನನ್ನು ಮದುವೆಯಾಗುತ್ತಾಳೆ.

ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್‌ ಮಾಡ್ತಿದ್ದೀರಾ' ಅನ್ನೋದಾ?

ಇದೊಂದೇ ವ್ಯತ್ಯಾಸ: ಪುಷ್ಪ-2 ಹಾಗೂ ಕೆಜಿಎಫ್‌ ಸಿನಿಮಾದಲ್ಲಿ ಎಲ್ಲವೂ ಕಾಕತಾಳೀಯ ಎನ್ನುವಂತಿಲ್ಲ. ಒಂದು ಅಂಶದಲ್ಲಿ ಬದಲಾವಣೆ ಇದೆ. ಅದೇನೆಂದರೆ, ರಾಕಿ ಬಾಯ್‌ ಚಿನ್ನಕ್ಕೋಸ್ಕರ ಹೋರಾಟ ಮಾಡಿದರೆ, ಪುಷ್ಪ ರಕ್ತ ಚಂದನಕ್ಕಾಗಿ ಹೋರಾಟ ಮಾಡ್ತಾನೆ.

ರೆಡ್‌ ಡ್ರೆಸ್‌ನಲ್ಲಿ ಶಿಲಾ ಬಾಲಿಕೆಯಾದ ನಿವೇದಿತಾ ಗೌಡ, ಕಾಮೆಂಟ್‌ ಸೆಕ್ಷನ್‌ ಮಾತ್ರ ನೋಡೋದಲ್ಲ!
 

click me!