ನಟಿ ರಕ್ಷಿತಾ ಪ್ರೇಮ್‌ ಸಹೋದರ ನಟ ರಾಣಾ ನಿಶ್ಚಿತಾರ್ಥ, ಜೋಗಿ ಪ್ರೇಮ್‌ ಮಿಸ್ಸಾಗಿದ್ದು ಯಾಕೆ?

First Published | Nov 21, 2024, 10:13 PM IST

ಏಕ್ ಲವ್ ಯಾ ಚಿತ್ರದ ನಾಯಕ ನಟ ರಾಣಾ ಅವರ ನಿಶ್ಚಿತಾರ್ಥ ಸರಳವಾಗಿ ನೆರವೇರಿದೆ. ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರೇಮ್ ನಿಶ್ಚಿತಾರ್ಥದಲ್ಲಿ ಭಾಗಿಯಾಗಿಲ್ಲ ಎನ್ನಲಾಗಿದೆ.

ಏಕ್‌ ಲವ್‌ ಯಾ ಸಿನಿಮಾದ ನಾಯಕ ನಟ ಹಾಗೂ ನಟಿ ರಕ್ಷಿತಾ ಪ್ರೇಮ್‌ ಅವರ ಸಹೋದರ ರಾಣಾ ಅವರ ನಿಶ್ಚಿತಾರ್ಥ ನೆರವೇರಿದೆ. ಸದ್ದುಗದ್ದಲವಿಲ್ಲದೆ ಸರಳವಾಗಿ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
 

ನಿಶ್ಚಿತಾರ್ಥದ ನಂತರ ಅವರು ಹುಡುಗಿಯ ಜೊತೆ ತೆಗೆದುಕೊಂಡಿರುವ ಫೋಟೋಗಳು ವೈರಲ್‌ ಆಗಿವೆ. ಜೋಗಿ ಪ್ರೇಮ್‌ ಅವರ ಅಳಿಯನಾಗಿರುವ ರಾಣಾ, ಏಕ್‌ ಲವ್‌ ಯಾ ಸಿನಿಮಾದ ಮೂಲಕ ಕನ್ನಡ ಸಿನಿ ಅಭಿಮಾನಿಗಳಿಗೆ ಪರಿಚಯವಾಗಿದ್ದರು.
 

Tap to resize

ರಾಣಾ ಅವರ ಭಾವಿ ಪತ್ನಿ, ರಕ್ಷಿತಾ ಪ್ರೇಮ್‌ ಹಾಗೂ ಅವರ ಸ್ನೇಹಿತರೆಲ್ಲರೂ ಈ ಫೋಟೋದಲ್ಲಿದ್ದಾರೆ. ವೈರಲ್‌ ಆಗಿರುವ ಫೋಟೋದಲ್ಲಿ ಮಿಸ್‌ ಆಗಿರುವುದು ಜೋಗಿ ಪ್ರೇಮ್‌ ಮಾತ್ರ. ಅವರು ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರೋ, ಇಲ್ಲವೋ ಎನ್ನುವುದು ಗೊತ್ತಿಲ್ಲ. ಮೂಲಗಳ ಪ್ರಕಾರ, ಕೆಡಿ ಸಿನಿಮಾದ ಶೂಟಿಂಗ್‌ಗಾಗಿ ಚಿಕ್ಕಮಗಳೂರಿನಲ್ಲಿರುವ ಪ್ರೇಮ್‌, ನಿಶ್ಚಿತಾರ್ಥದಲ್ಲಿ ಭಾಗಿಯಾಗಿಲ್ಲ ಎನ್ನಲಾಗಿದೆ.
 

ಇನ್ನು ರಾಣಾ ಅವರ ಭಾವಿ ಪತ್ನಿಯ ಹೆಸರು, ಅವರು ಎಲ್ಲಿಯವರು ಎನ್ನುವ ಯಾವ ಮಾಹಿತಿ ಕೂಡ ಬಂದಿಲ್ಲ. ಆದರೆ, ಜೋಡಿ ಮಾತ್ರ ಸೂಪರ್‌ ಆಗಿದ್ದು, ಹೀಗೆ ಖುಷ್‌ ಖುಷಿಯಾಗಿ ಇರಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
 

ಇನ್ನು ನಿಶ್ಚಿತಾರ್ಥ ನಡೆದಿದ್ದು ಎಲ್ಲಿ? ಮದುವೆ ಯಾವಾಗ ಎನ್ನುವ ಮಾಹಿತಿಗಳು ತಿಳಿದುಬಂದಿಲ್ಲ. ಪೋಟೋ ಗಮನಿಸಿದರೆ, ಮನೆಯಲ್ಲಿಯೇ ಸರಳವಾಗಿ ನಿಶ್ಚಿತಾರ್ಥವಾಗಿರುವ ಸಾಧ್ಯತೆ ಇದೆ.

ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್‌ ಮಾಡ್ತಿದ್ದೀರಾ' ಅನ್ನೋದಾ?

ಏಕ್‌ ಲವ್‌ ಯಾ ಸಿನಿಮಾದ ಮೂಲಕ ಪರಿಚಯವಾಗಿದ್ದ ರಾಣಾ ಕಳೆದ ಜುಲೈನಲ್ಲಿ ಮಲೈ ಮಹದೇಶ್ವರ ಬೆಟ್ಟದ ತಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್‌ ಪೂಜೆಯನ್ನು ನಡೆಸಿದ್ದರು. ಆದರೆ, ಆ ಸಿನಿಮಾದ ಬಗ್ಗೆ ಇನ್ನೂ ಮಾಹಿತಿ ಹೊರಬಂದಿಲ್ಲ.

2 ರೂಪಾಯಿ ಇದ್ದ ಷೇರಿನ ಬೆಲೆ ಈಗ 65 ರೂಪಾಯಿ, 4 ವರ್ಷದಲ್ಲೇ 3700% ಲಾಭ!

Latest Videos

click me!