ಈ ಪಟ್ಟಿಯಲ್ಲಿ ಖಂಡಿತವಾಗಿ ಮೊದಲಿಗೆ ಬರುವ ಹೆಸರು ಸೌಂದರ್ಯವತಿ ಶ್ರೀದೇವಿ. ಬೋನಿ ಕಪೂರ್‌ರನ್ನು ಮದುವೆಯಾಗುವ ಮುನ್ನವೇ ತಾವು ಗರ್ಭಿಣಿಯಾಗಿದ್ದೆ ಎನ್ನುವುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದರು.
ಬಾಲಿವುಡ್ ನಟಿ ಹಾಗೂ ಬ್ಯೂಟಿ ಪೇಜೆಂಟ್ ಸೆಲಿನಾ ಜೇಟ್ಲಿ ಕೂಡ ಮದುವೆಗೂ ಮುನ್ನ ಪ್ರೆಗ್ನೆಂಟ್ ಆದ ನಟಿ. 2011ರಲ್ಲಿ ದುಬೈ ಮೂಲದ ಆಸ್ಟ್ರಿಯನ್ ಬಾಯ್‌ಫ್ರೆಂಡ್ ಪೀಟರ್ ಹಾಗ್‌ನನ್ನು ಮದುವೆಯಾಗಿದ್ದರು. ಈ ವೇಳೆ ಅವರು ಗರ್ಭಿಣಿಯಾಗಿದ್ದರು.
ಇನ್ನು ಮಹಿಮಾ ಚೌಧರಿ ವಿಚಾರದಲ್ಲೂ ಹೀಗೇ ಆಗಿತ್ತು. 2006ರಲ್ಲಿ ಸಡನ್ ಆಗಿ ಮಹಿಮಾ ಚೌಧರಿ, ಬಾಬಿ ಮುಖರ್ಜಿಯನ್ನು ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಬಂದಿತು. ಕೊನೆಗೆ ಗೊತ್ತಾಗಿದ್ದೇನೆಂದರೆ, ಮದುವೆಗೂ ಮುನ್ನ ಈಕೆ ಗರ್ಭಿಣಿಯಾಗಿದ್ದರು.
ನಟಿ ಕಲ್ಕಿ ಕೊಚೆನ್ ಬಗ್ಗೆ ಈಗಿನವರುಗೆ ಹೆಚ್ಚಾಗಿ ಗೊತ್ತಿಲ್ಲ. ಜಿಂದಗೀ ನಾ ಮಿಲೀಗಿ ದುಬಾರಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಈಕೆ ಕೂಡ ಮದುವೆಗೂ ಮುನ್ನ ಪ್ರೆಗ್ನೆಂಟ್ ಆಗಿದ್ದರು.
ನಟಿ ಸಾರಿಕಾ, ಕಮಲ್ ಹಾಸನ್ ಅವರ ಮಾಜಿ ಪತ್ನಿ. ಕಮಲ್ ಹಾಸನ್ ಮೊದಲ ಪತ್ನಿಯ ಜೊತೆಯ ಇರುವಾಗಲೇ ಸಾರಿಕಾ ಜೊತೆ ಸಂಬಂಧ ಹೊಂದಿದ್ದರು. ಶೃತಿ ಹಾಸನ್ ಜನ್ಮಕ್ಕೂ ಕಾರಣರಾಗಿದ್ದರು. 2ನೇ ಪುತ್ರಿ ಅಕ್ಷರಾ ಹಾಸನ್ ಹುಟ್ಟಿದ ಬಳಿಕವೂ ಇಬ್ಬರೂ ಮದುವೆಯಾಗಿದ್ದರು.
ನಟ ರಣವೀರ್ ಶೋರೆ ಅವರೊಂದಿಗೆ ಡೇಟಿಂಗ್‌ನಲ್ಲಿ ಇರುವಾಗಲೇ ಒಂದು ದಿನ ಖಾಸಗಿ ಸಮಾರಂಭದಲ್ಲಿ ಕೊಂಕಣ್ ಸೆನ್ ಶರ್ಮ ಹಾಗು ರಣವೀರ್ ಶೋರೆ ವಿವಾಹವಾಗಿದ್ದರು. ಅದಾದ ಕೆಲವೇ ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು.
ನೇಹಾ ಧೂಪಿಯಾ ಹಾಗೂ ಅಂಗದ್ ಬೇಡಿ ವಿವಾಹ ಕೂಡ ಇದೇ ಕಾರಣಕ್ಕಾಗಿ ನಡೆದಿತ್ತು. ನೇಹಾ ಧೂಪಿಯಾ ಸಡನ್ ಆಗಿ ಮದುವೆಯ ದಿನ ಘೋಷಣೆ ಮಾಡಿದಾಗ ಇವರು ಮೊದಲ ಟ್ರೈಮಿಸ್ಟರ್‌ನಲ್ಲಿದ್ದರು.
ನಟಿ ದಿಯಾ ಮಿರ್ಜಾ ವಿಚಾರ ಕೂಡ ಇದೇ ಆಗಿತ್ತು. ಬಾಯ್‌ಫ್ರೆಂಡ್ ವೈಭವ್ ರೇಖಿಯನ್ನು ಮದುವೆಯಾಗುವ ವಿಚಾರ ಮಾಡುತ್ತಿದ್ದಾಗಲೇ ಗರ್ಭಿಣಿ ಎನ್ನುವುದು ಗೊತ್ತಾಗಿತ್ತು. ಬಳಿಕ ಮದುವೆ ಮುದ್ರೆ ಒತ್ತಿದ್ದರು.
ಅಮೃತಾ ಅರೋರಾ ಕೂಡ ತಮ್ಮ ಮದುವೆಯನ್ನು ಗುಟ್ಟಾಗಿ ಇರಿಸಿದ್ದರು. ಶಕೀಲ್ ಅರೋರಾರನ್ನು ವಿವಾಹವಾದ ಬಳಿಕ ಈಕೆ ಗರ್ಭಿಣಿ ಎನ್ನುವುದು ಗೊತ್ತಾಗಿತ್ತು.
ಮದುವೆಗೂ ಮುನ್ನ ಗರ್ಭಿಣಿಯಾದ ನಟಿಯರ ವಿಚಾರಕ್ಕೆ ಬಂದರೆ, ನೀನಾ ಗುಪ್ತಾ ಇದರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ವಿವಿಯನ್ ರಿಚರ್ಡ್ಸ್ ಜೊತೆ ಮದುವೆಗೂ ಮುನ್ನ ನಡೆಸಿದ ಸಂಬಂಧದಿಂದ ಇವರು ಗರ್ಭಿಣಿಯಾಗಿದ್ದರು. ಆದರೆ, ಮದುವೆಯಾಗಲು ಸಾಧ್ಯವಾಗಿರಲಿಲ್ಲ.
ನಟಿ ನತಾಶಾ ಸ್ಟಾಂಕೋವಿಕ್ ಕೂಡ ಈ ಲಿಸ್ಟ್‌ನಲ್ಲಿದ್ದಾರೆ. ಕ್ರಿಕೆಟಿಗ ಹಾರ್ದಿಕ್ ಪಾಂಡ್ಯರನ್ನು ವಿವಾಹವಾಗುವ ಮುನ್ನವೇ ಇವರು ಗರ್ಭಿಣಿಯಾಗಿದ್ದರು. ಇದನ್ನು ಮುಕ್ತವಾಗಿಯೂ ಹೇಳಿಕೊಂಡಿದ್ದರು.
ನಟಿ ಆಲಿಯಾ ಭಟ್ ಅವರದ್ದೂ ಇದೇ ಕಥೆ. ರಣಬೀರ್ ಕಪೂರ್ ಅವರ ಮೊದಲ ಮಗುವಿಗೆ ಆಲಿಯಾ ಭಟ್ ಗರ್ಭಿಣಿ ಎಂದು ಗೊತ್ತಾದ ಬಳಿಕ ಮದುವೆ ಫಿಕ್ಸ್ ಮಾಡಿಕೊಂಡಿದ್ದರು.
ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ನಟ ಅರ್ಜುನ್ ರಾಮ್‌ಪಾಲ್ ಅವರ ಪತ್ನಿ. ತಾವು ಗರ್ಭಿಣಿ ಎಂದು ಗೊತ್ತಾದ ಬಳಿಕ ತೀರಾ ಸರಳ ಸಮಾರಂಭದಲ್ಲಿ ಇವರಿಬ್ಬರೂ ವಿವಾಹವಾಗಿದ್ದರು.