ಆಫ್‌ ಶೋಲ್ಡರ್‌ ಗೌನ್‌ನಲ್ಲಿ Sexiest ಆಗಿ ಕಾಣಿಸಿದ ಕರೀನಾ ಕಪೂರ್‌ ಖಾನ್‌, ವೈರಲ್‌ ಆದ Hot Photos!

First Published | May 30, 2024, 8:22 PM IST

ನಟಿ ಕರೀನಾ ಕಪೂರ್‌ ಖಾನ್‌ (Bollywood Actress Kareena Kapoor) ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮುಂಬೈನಲ್ಲಿ (Mumbai ) ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕರೀನಾ ಧರಿಸಿದ್ದ ಡ್ರೆಸ್‌ (Off Shoulder Gown Dress) ಎಲ್ಲರ ಗಮನಸೆಳೆದಿದೆ.

ಬಾಲಿವುಡ್‌ ನಟಿ ಹಾಗೂ ಪಟೌಡಿ ಮನೆತನದ ಸೊಸೆ ಕರೀನಾ ಕಪೂರ್‌ ಖಾನ್‌ ಫ್ಯಾಶನ್‌ (Fashion)  ಐಕಾನ್‌ ಅನ್ನೋದರಲ್ಲಿ ಯಾವುದೇ ಅನುಮಾನಗಳಿಲ್ಲ.


ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾದರೂ ಅಥವಾ ತಮ್ಮ ಹೊಸ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡರೂ ಅದರಲ್ಲಿ ಹಾಟ್‌ನೆಸ್‌ ತುಂಬಿರುತ್ತದೆ.

Tap to resize


ಬುಧವಾರ ಮುಂಬೈನಲ್ಲಿ ಪ್ರಸಿದ್ಧ ಫ್ಯಾಶನ್‌ ಬ್ರ್ಯಾಂಡ್‌ ಬ್ಲಗರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರೀನಾ ಕಪೂರ್‌ ಅದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಕರೀನಾ ಕಪೂರ್‌ ಖಾನ್‌ ಹಂಚಿಕೊಂಡಿರುವ ಪೋಟೋದಲ್ಲಿ ಸಖತ್‌ ಹಾಟ್‌ ಆಗಿ ಕಂಡಿದ್ದಾರೆ ಎಂದು ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ.
 

ಈ ಇತ್ತೀಚಿನ ಕ್ಲಿಕ್‌ಗಳಲ್ಲಿ, ಕರೀನಾ ಕಪೂರ್ ಸುಂದರವಾದ ಗುಲಾಬಿ ಬಣ್ಣದ sequinಆಫ್-ಶೌಡ್ ಗೌನ್‌ನಲ್ಲಿ ಪೋಸ್ ನೀಡಿದ್ದಾರೆ.

ತನ್ನ ಲುಕ್‌ಗೆ ಇನ್ನ್ಟು ಮೆರುಗು ನೀಡುವ ಸಲುವಾಗಿ ಕರೀನಾ ಕಪೂರ್‌, ಬೆಳ್ಳಿಯ ಉಂಗುರ, ಡ್ರೆಸ್‌ಗೆ ಒಪ್ಪುವಂಥ ಕಿವಿಯೋಲೆ, ಹಾಗೂ ಮ್ಯಾಚಿಂಗ್‌ ಬ್ರೇಸ್‌ಲೆಟ್‌ ಕೂಡ ಧರಿಸಿದ್ದರು.


ಗ್ಲಾಮ್‌ ಮೇಕಪ್‌ನಲ್ಲಿದ್ದ ಕರೀನಾ ಕಪೂರ್‌, ನ್ಯೂಡ್‌ ಶೇಡ್‌ ಲಿಪ್‌ಸ್ಟಿಕ್‌ ಬಳಸಿದ್ದರು. ಎಂದಿನಿಂತೆ ಈ ಫೋಟೋಗಳಲ್ಲೂ ಕರೀನಾ ಸುಂದರವಾಗಿ ಕಂಡಿದ್ದಾರೆ.

ಕರೀನಾ ಕಪೂರ್ ಅವರು ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಸುಂದರವಾದ ಚಿತ್ರಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋಗಳು ಆನ್‌ಲೈನ್‌ನಲ್ಲಿ ಬಂದ ಬೆನ್ನಲ್ಲಿಯೇ ಅವರ ಅಭಿಮಾನಿಗಳು ಕಾಮೆಂಟ್‌ ಬಾಕ್ಸ್‌ನಲ್ಲಿ ದಂಡಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

ಹೆಚ್ಚಿನವರು ಈ ಡ್ರೆಸ್‌ನಲ್ಲಿ ನೀವು ಸಖತ್‌ ಹಾಟ್‌ ಆಗಿ ಕಾಣುತ್ತಿದ್ದೀರಿ ಎಂದು ಬರೆದಿದ್ದು, ಫೈರ್‌ ಇಮೋಜಿಯನ್ನು ಪೋಸ್ಟ್‌ ಮಾಡಿದ್ದಾರೆ. ಅನಿಲ್‌ ಕಪೂರ್‌ ಅವರ ಪುತ್ರಿ ರೇಹಾ ಕಪೂರ್‌ ಕೂಡ ಕಾಮೆಂಟ್‌ ಮಾಡಿದ್ದಾರೆ.


ಇತ್ತೀಚೆಗೆ ಕ್ರೀವ್‌ ಚಿತ್ರದಲ್ಲಿ ನಟಿಸಿದ್ದ ಕರೀನಾ ಕಪೂರ್‌, ಅದಕ್ಕಾಗಿ ಮೆಚ್ಚುಗೆ ಪಡೆದಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಇದು ಬಿಡುಗಡೆಯಾಗಿತ್ತು.


ಚಿತ್ರದಲ್ಲಿ ಕರೀನಾ ಅವರೊಂದಿಗೆ ಹಿರಿಯ ನಟಿ ಟಬು ಹಾಗೂ ಕೃತಿ ಸನೋನ್‌ ಕೂಡ ನಟಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.

ಕ್ರೀವ್‌ ಸಿನಿಮಾ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಏರ್‌ಲೈನ್ ವಲಯದ ಕಥೆಯನ್ನು ಹೊಂದಿದೆ. ಈ ಮೂವರು ಫ್ಲೈಟ್ ಅಟೆಂಡೆಂಟ್‌ಗಳ ಜೀವನವನ್ನು ಇದರಲ್ಲಿ ತಿಳಿಸಲಾಗಿತ್ತು. ಇನ್-ಫ್ಲೈಟ್ ಅಟೆಂಡೆಂಟ್‌ ಗೀತಾ ಸೇಥಿ (ಟಬು), ಹಿರಿಯ ಫ್ಲೈಟ್ ಅಟೆಂಡೆಂಟ್ ಜಾಸ್ಮಿನ್ ರಾಣಾ (ಕರೀನಾ ಕಪೂರ್) ಮತ್ತು ಜೂನಿಯರ್ ಫ್ಲೈಟ್ ಅಟೆಂಡೆಂಟ್ ದಿವ್ಯಾ ಬಜ್ವಾ (ಕೃತಿ ಸನೋನ್) ಕಥೆ ಇದರಲ್ಲಿತ್ತು.

Latest Videos

click me!