ತಿಂಗಳಲ್ಲಿ 2ನೇ ಬಾರಿಗೆ ಟಾಪ್‌ಲೆಸ್‌ ಆದ ಹಾಲಿವುಡ್‌ ಬ್ಯೂಟಿ ಕ್ವೀನ್‌, ಕ್ಯಾಮೆರಾದಲ್ಲಿ ಸೆರೆಯಾಯ್ತು ಕೆಂಡಲ್‌ ಸೌಂದರ್ಯ!

First Published | May 25, 2024, 4:25 PM IST

ಒಲಿಂಪಿಕ್‌ ಸ್ವರ್ಣ ಪದಕ ವಿಜೇತ ವಿಲಿಯಂ ಬ್ರೂಸ್‌ ಜೆನ್ನೆರ್‌ (ಲಿಂಗ ಬದಲಾವಣೆ ಬಳಿಕ ಕೈಟ್ಲಿನ್ ಜೆನ್ನರ್) ಹಾಗೂ ಅಮೆರಿಕದ ಪ್ರಖ್ಯಾತ ಮೀಡಿಯಾ ಪರ್ಸನಾಲಿಟಿ ಕ್ರಿಸ್‌ ಜೆನ್ನರ್‌ ಪುತ್ರಿ ಕೆಂಡಲ್‌ ಜೆನ್ನರ್‌ ತಿಂಗಳಲ್ಲಿ 2ನೇ ಬಾರಿಗೆ ಟಾಪ್‌ಲೆಸ್‌ಆಗಿ ಫೋಟೋಗೆ ಪೋಸ್‌ ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್‌ ಫೋಟೋಗಳ ಮೂಲಕವೇ ಕಿಚ್ಚೆಬ್ಬಿಸುವ ನಟಿ, ಮಾಡೆಲ್‌ ಹಾಗೂ ಮೀಡಿಯಾ ಪರ್ಸನಾಲಿಟಿ ಕೆಂಡಲ್‌ ಜೆನ್ನೆರ್‌ ಮತ್ತೊಮ್ಮೆ ತಮ್ಮ ಹಾಟ್‌ ಅವತಾರವನ್ನು ಹಂಚಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಚಿತ್ರದಲ್ಲಿ ಅವರು ಪೂಲ್‌ನ ಬಳಿ ಹಸಿರು ಬಣ್ಣದ ಕೇವಲ ಈಜುಡುಗೆಯಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

Tap to resize

28 ವರ್ಷದ ಮಾಡೆಲ್‌ ಹಂಚಿಕೊಂಡಿರುವ ಫೋಟೋಗಳ ಕರೋಸಲ್‌ ಅಂದರೆ ಸರಣಿಗಳಿಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಂದು ಫೋಟೋದಲ್ಲಿ ಆಕೆ ಸಂಪೂರ್ಣವಾಗಿ ನಗ್ನವಾಗಿ ಕಾಣಿಸಿಕೊಂಡಿದ್ದು, ಇನ್ನೊಂದು ಕೈಗಳಿಂದ ತಮ್ಮ ಖಾಸಗಿ ಭಾಗವನ್ನು ಮುಚ್ಚಿಕೊಂಡಿದ್ದಾರೆ.

ಒಂದೇ ತಿಂಗಳಲ್ಲಿ ಕೆಂಡಲ್‌ ಜೆನ್ನರ್‌ 2ನೇ ಬಾರಿಗೆ ತಮ್ಮ ಟಾಪ್‌ಲೆಸ್‌ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಮೆರಿಕದ ಪ್ರಖ್ಯಾತ ಮಾಡೆಲ್ ಹಾಗೂ ಟಿವಿ ಪರ್ಸನಾಲಿಟಿಯಾಗಿರುವ ಕೆಂಡಲ್‌ ಜೆನ್ನರ್‌, 1995 ನವೆಂಬರ್‌ 3 ರಂದು ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲಿಸ್‌ನಲ್ಲಿ ಜನಿಸಿದ್ದರು.

ರಿಯಾಲಿಟಿ ಟೆಲಿವಿಷನ್ ಸರಣಿ "ಕೀಪಿಂಗ್ ಅಪ್ ವಿಥ್ ದಿ ಕಾರ್ಡಶಿಯನ್ಸ್" ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ, ಇದು ಅವರ ಪ್ರಸಿದ್ಧ ಕುಟುಂಬ ಸದಸ್ಯರ ಜೀವನದ ರಿಯಾಲಿಟಿ ಶೋ ಆಗಿದೆ.

ಟೀನೇಜ್‌ನ ಆರಂಭದಲ್ಲಿಯೇ ತಮ್ಮ ಮಾಡೆಲಿಂಗ್‌ ಕೆರಿಯರ್‌ ಆರಂಭಿಸಿದ್ದ ಕೆಂಡಲ್‌ ಜೆನ್ನರ್‌, ಇಂದು ಫ್ಯಾಶನ್‌ ಜಗತ್ತಿನ ಟಾಪ್‌ಮೋಸ್ಟ್‌ ಮಾಡೆಲ್‌ ಎನಿಸಿಕೊಂಡಿದ್ದಾರೆ.

ಕೆಂಡಲ್‌ ಜೆನ್ನರ್‌ ಹಂಚಿಕೊಂಡಿರುವ ಪ್ರತಿ ಪೋಟೋದಲ್ಲಿ ಆಕೆ ಬಹಳ ಅದ್ಭುತವಾಗಿ ಕಾಣುತ್ತಿದ್ದಾರೆ. ಜಗತ್ತಿನಲ್ಲಿ ಯಾರಾದರೂ ಮಾಡೆಲ್‌ ಇಷ್ಟು ಸುಂದರವಾಗಿರಲು ಹೇಗೆ ಸಾಧ್ಯ ಎಂದು ಕಾಮೆಂಟ್‌ ಬರೆದಿದ್ದಾರೆ.

ಈ ಭೂಮಿಯ ಮೇಲೆ ಅತ್ಯಂತ ಆಕರ್ಷಕ ಹಾಗೂ ಅಷ್ಟೇ ಮಾದಕವಾಗಿರುವ ಯಾರಾದರೂ ಒಬ್ಬರು ಮಾಡೆಲ್‌ ಇದ್ದರೆ ಅದು ಕೆಂಡಲ್‌ ಜೆನ್ನರ್‌ ಮಾತ್ರ ಎಂದಿದ್ದಾರೆ. 

ಮೇ ತಿಂಗಳಲ್ಲಿ, ಅವರು ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ FWRD ಯ ಬೇಸಿಗೆ ಈಜುಡುಗೆ ಪ್ರಚಾರಕ್ಕಾಗಿ ಟಾಪ್‌ಲೆಸ್ ಪೋಸ್ ನೀಡಿದರು, ಇದನ್ನು ಕ್ಯಾಮೆರಾನ್ ಹ್ಯಾಮಂಡ್ ತೆಗೆದಿದ್ದರು.

ಈ ವೇಳೆ ಕೆಂಡಾಲ್ ಹೊಸ ಈಜುಡುಗೆಗಳನ್ನು ಪ್ರದರ್ಶಿಸಿದರು, ಇದರಲ್ಲಿ ಕೆಂಪು ಮತ್ತು ಬಿಳಿ ಜೀಬ್ರಾ ಪಟ್ಟೆಯ ಈಜುಡುಗೆ, ಕಿತ್ತಳೆ ಹೂವಿನ ಬಣ್ಣದ ಬಿಕಿನಿ ಜೊತೆ ಪೋಸ್‌ ನೀಡಿದ್ದರು.

Latest Videos

click me!