ರಾಮಾಯಣ ಸಿನಿಮಾದ ಮೊದಲ ಭಾಗ, ಅಂದರೆ 'ರಾಮಾಯಣ: ಪಾರ್ಟ್-1' ಈಗ ಬಿಡುಗಡೆ ಆಗಿದೆ. ಒಟ್ಟೂ 4000 ಕೋಟಿ ಬಜೆಟ್‌ನಲ್ಲಿ ರಾಮಾಯಣ ಸಿನಿಮಾದ 2 ಭಾಗಗಳು ನಿರ್ಮಾಣವಾಗಲಿವೆ ಎಂದಿದ್ದು, ಇದೀಗ 2000 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಹುನಿರೀಕ್ಷೆ ಹುಟ್ಟಿಸಿದ್ದ ರಾಮಾಯಣ-1 ಬಿಡುಗಡೆ ಆಗಿ ಹೊಸ ದಾಖಲೆ ಬರೆಯುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಈ ಸಿನಿಮಾ ಬಿಡುಗಡೆಗೂ ಮೊದಲೇ ಸಾಕಷ್ಟು ಮೂಲಗಳಿಂದ 1150 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಬಜೆಟ್ ಲೆಕ್ಕಾಚಾರದಂತೆ, ಇನ್ನುಳಿದ 850 ಕೋಟಿ ರೂಪಾಯಿ ಗಳಿಸಲು ಈ ಚಿತ್ರಕ್ಕೆ ಬಹುಶಃ ಗರಿಷ್ಠ ಒಂದು ವಾರ ಸಾಕು ಎನ್ನಲಾಗುತ್ತಿದೆ.
ಅಂದಹಾಗೆ; ಕನ್ನಡದ ಪ್ಯಾನ್ ವರ್ಲ್ಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಈ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸಿರುವುದರ ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. ಈ ಸಿನಿಮಾ ಬಿಡುಗಡೆ ಬಳಿಕ ನಟ ಯಶ್ ಅವರ ನಟನೆ ಹಾಗೂ ರಾವಣ ಪಾತ್ರದಲ್ಲಿನ ಅಮೋಘ ನಟನೆಉ ಬಗ್ಗೆ ರಾಜಮೌಳಿಯಂತಹ ಶ್ರೇಷ್ಠ ನಿರ್ದೇಶಕರೂ ಸೇರಿದಂತೆ ಎಲ್ಲಾ ಕಡೆಗಳಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ನಮ್ಮ ಭಾರತೀಯ ಪರಂಪರೆಯ ಮಹಾಕಾವ್ಯಕ್ಕೆ ಯಶ್ ಮೂಲಕ ಕನ್ನಡನಾಡಿನ ಕಾಣಿಕೆ ಕೂಡ ಸೇರಿಕೊಂಡಿದೆ ಎಂಬುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ರಾಮಾಯಣ ಸಿನಿಮಾ ನಿರ್ಮಾಣ:-
ನಮಿತ್ ಮಲ್ಹೋತ್ರಾ (ಪ್ರೈಮ್ ಫೋಕಸ್) ಅವರು ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ನಿರ್ಮಾಪಕರಾಗಿದ್ದಾರೆ.
ಹಾಗೆಯೇ ಈ ಚಿತ್ರಕ್ಕೆ ನಟ ಯಶ್ ಅವರು ಸಹ-ನಿರ್ಮಾಪಕರಾಗಿ (ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ) ಸಾಥ್ ನೀಡಿದ್ದಾರೆ.
ನಿರ್ದೇಶಕರು: ನಿತೇಶ್ ತಿವಾರಿ
ಪ್ರಮುಖ ತಾರಾಗಣ: ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್