ಮೆಗಾ ಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ವಿಚ್ಛೇದನವಾಗುವ ಸಾಧ್ಯತೆ ಇದೆ ಎಂದು ಪ್ರಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಹೇಳಿಕೆ ನೀಡಿದ್ದಾರೆ. ಮೆಗಾಸ್ಟಾರ್ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ನಡುವೆ ವಿಚ್ಛೇದನ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.
ವಿವಾದಿತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಸೆಲೆಬ್ರಿಟಿಗಳನ್ನು ಟಾರ್ಗೆಟ್ ಮಾಡಿ ಭವಿಷ್ಯ ಹೇಳುವ ಮೂಲಕವೇ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಪ್ರಖ್ಯಾತರಾಗಿದ್ದಾರೆ.
214
Inaya Sulthana
ಪ್ರಭಾಸ್ ಅವರಂತಹ ಅನೇಕರು ಸೆಲೆಬ್ರಿಟಿಗಳ ಜಾತಕ ಹೇಳಿ ವೇಣು ಸ್ವಾಮಿ ಶಾಕ್ ಕೊಟ್ಟಿದ್ದರು. ಟಾಲಿವುಡ್ ಸೆಲೆಬ್ರಿಟಿ ಜೋಡಿ ಬೇರೆಯಾಗುವ ಬಗ್ಗೆ ಅವರು ಹೇಳುವ ಜಾತಕಗಳು ವೈರಲ್ ಆಗುತ್ತದೆ. ಪ್ರಭಾಸ್ ಕುರಿತಾದ ಜಾತಕ ಹೇಳುವ ಮೂಲಕ ಇವರು ಪ್ರಖ್ಯಾತರಾಗಿದ್ದರು.
314
ಈಗ ವೇಣುಸ್ವಾಮಿ ಮೆಗಾಸ್ಟಾರ್ ಕುಟುಂಬದ ಕುರಿತಾಗಿ ಭವಿಷ್ಯ ಹೇಳಿದ್ದು, ಅವರ ಮಾತನ್ನು ಕೇಳಿ ಫ್ಯಾನ್ಸ್ ಆಘಾತ ವ್ಯಕ್ತಪಡಿಸಿದ್ದಾರೆ. ಮೆಗಾಸ್ಟಾರ್ ಕುಟುಂಬದಲ್ಲಿ ಶೀಘ್ರದಲ್ಲೇ ಮತ್ತೊಂದು ವಿಚ್ಛೇದನವಾಗಬಹುದು ಎಂದಿದ್ದಾರೆ.
414
ಹೌದು ಮೆಗಾಸ್ಟಾರ್ ಸಹೋದರ ನಾಗಬಾಬು ಅವರ ಪುತ್ರ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ಅವರ ಅದ್ದೂರಿ ಮದುವೆಯಾಗಿ ಆರು ತಿಂಗಳಷ್ಟೇ ಆಗಿದೆ. ಆದರೆ, ಈ ಮದುವೆ ಹೆಚ್ಚು ದಿನ ಉಳಿಯೋದಿಲ್ಲ ಎಂದು ವೇಣುಸ್ವಾಮಿ ತಿಳಿಸಿದ್ದಾರೆ.
514
ಮೆಗಾಸ್ಟಾರ್ ಕುಟುಂಬಕ್ಕೆ ವಿಚ್ಛೇದನವೇ ಶಾಪವಾಗಿದೆ. ಹೊಸದಾಗಿ ಮದುವೆಯಾಗಿರುವ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರು ಬೇರೆಯಾಗುತ್ತಾರೆ ಮತ್ತು ಹೆಚ್ಚು ಕಾಲ ಒಟ್ಟಿಗೆ ಇರುವುದಿಲ್ಲ ಎಂದು ಹೇಳಿದ್ದಾರೆ. ನವ ಜೋಡಿಯ ಬಗ್ಗೆ ಸೆನ್ಸೇಷನಲ್ ಕಾಮೆಂಟ್ಸ್ಅನ್ನು ಅವರು ಮಾಡಿದ್ದಾರೆ.
614
ಇದನ್ನು ನಾನು ಹೇಳುತ್ತಿಲ್ಲ ಅವರ ಜಾತಕವೇ ಹೇಳುತ್ತಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಜಾತಕದ ಪ್ರಕಾರ ಒಟ್ಟಾಗಿ ಇರುವ ಸಾಧ್ಯತೆ ಇಲ್ಲ. ಮದುವೆಯೂ ಇವರ ನಡುವೆ ಸೂಕ್ತವಲ್ಲ ಎಂದಿದ್ದಾರೆ.
714
ಅವರಿಬ್ಬರೂ ಜೊತೆಯಾಗಿರುವುದು ದೊಡ್ಡ ಪವಾಡ’ ಎಂದು ವೇಣು ಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಾನು ಹೇಳುವ ಮಾತಿಗೆ ಎಲ್ಲರೂ ನನ್ನು ಟೀಕೆ ಮಾಡಬಹುದು. ಆದರೆ, ಇದು ಅವರ ಜಾತಕ. ವೈಯಕ್ತಿಕವಾಗಿ ಅವರೊಂದಿಗೆ ನನಗೆ ಯಾವುದೇ ಜಗಳವೂ ಇಲ್ಲ, ಆತ್ಮೀಯತೆಯೂ ಇಲ್ಲ ಎಂದಿದ್ದಾರೆ.
814
Varun Tej
ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಅವರ ಜಾತಕವು ಗುರು ಮತ್ತು ಶುಕ್ರರು ನಕಾರಾತ್ಮಕವಾಗಿದ್ದು, ಅವರ ಭೇಟಿಗೆ ಅವಕಾಶವಿಲ್ಲ ಎಂದು ಹೇಳುತ್ತದೆ.
914
ಲಾವಣ್ಯ ತ್ರಿಪಾಠಿಗೆ ಗುರುದೋಷ, ವರುಣ ತೇಜ್‌ಗೆ ನಾಗದೋಷವಿದೆ ಎಂದೂ ಅವರು ಹೇಳಿದ್ದಾರೆ. ಇದರೊಂದಿಗೆ ನಾಗದೋಷ, ಕುಜದೋಷ ಲಾವಣ್ಯಳನ್ನು ಕಾಡುತ್ತಿದ್ದು, ಇಂತಹ ದೋಷಗಳ ನಡುವೆಯೂ ಇವರಿಬ್ಬರು ಜೊತೆಯಾಗಿರುವುದು ದೊಡ್ಡ ಪವಾಡವೇ ಸರಿ ಎಂದಿದ್ದಾರೆ.
1014
ಇವರಿಬ್ಬರು ಬೇರೆ ಆಗುವುದಾದರೆ, ಅದಕ್ಕೆ ಕಾರಣವನ್ನು ವೇಣುಸ್ವಾಮಿ ಬಹಿರಂಗಪಡಿಸಿದ್ದಾರೆ. ಅವರ ಕುಟುಂಬದ ಪ್ರಮುಖ ಮಹಿಳೆಯಿಂದಾಗಿ ಇಬ್ಬರೂ ಬೇರೆಯಾಗುತ್ತಾರೆ ಎಂದು ತಿಳಿಸಿದ್ದು, ಆ ಮಹಿಳೆ ಯಾರೂ ಎಂದು ಹೇಳಿಲ್ಲ.
1114
ನಾನು ಹೇಳಿರುವುದು ನಿಜ. ಈಗಲ್ಲದಿದ್ದರೂ ತಡವಾಗಿಯಾದರೂ ಆಗಬಹುದು ಎಂದಿದ್ದಾರೆ. ಮೂರು ತಿಂಗಳ ಹಿಂದೆ 'ಕ್ಯೂಬ್ ಟಿವಿ' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವೇಣು ಸ್ವಾಮಿ ಈ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
1214
ಸುಮಾರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಕಳೆದ ವರ್ಷ ನವೆಂಬರ್ 1 ರಂದು ಇಟಲಿಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು.
1314
ಡೆಸ್ಟಿನಿ ವೆಡ್ಡಿಂಗ್ ತುಂಬಾ ಅದ್ಧೂರಿಯಾಗಿ ನಡೆದಿತ್ತು. ಅದಾದ ಬಳಿಕ ಇಬ್ಬರೂ ಸಿನಿಮಾದಲ್ಲಿ ಮುಂದುವರಿದಿದ್ದಾರೆ. ವರುಣ್ ತೇಜ್ ಸದ್ಯ 'ಮಟ್ಕಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲಾವಣ್ಯ ವೆಬ್ ಸಿರೀಸ್ ಮತ್ತು ಒಟಿಟಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.
1414
ವರುಣ್ ತೇಜ್ ಅವರ ಸಹೋದರಿ ನಿಹಾರಿಕಾ ಕೊನಿಡೇಲಾ ಕೂಡ ಕಳೆದ ವರ್ಷ ವಿವಾಹದಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇನ್ನು ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಡೈವೋರ್ಸ್ ಹೊಸದಲ್ಲ.