Published : Apr 09, 2024, 07:05 PM ISTUpdated : Apr 09, 2024, 07:07 PM IST
ತನ್ನ ಬ್ಯೂಟಿ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ನಯನತಾರಾ ಬಾಡಿಗೆ ತಾಯ್ತನಕ್ಕೆ ಮುಂದಾಗಿದ್ದಲ್ಲ. ಆಕೆ ಬಂಜೆ, ಮಗುವಿಗೆ ಜನ್ಮ ನೀಡುವ ಭಾಗ್ಯ ಆಕೆಯ ಜಾತಕದಲ್ಲಿಲ್ಲ ಎಂದು ಆಂಧ್ರದ ಜ್ಯೋತಿಷಿ ವೇಣು ಸ್ವಾಮಿ ಹೇಳಿರುವ ಮಾತು ಸಾಕಷ್ಟು ವೈರಲ್ ಆಗಿದೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ ಎಂದು ತಿಳಿದಿದೆ. ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗೆ ಲೇಡಿ ಸೂಪರ್‌ಸ್ಟಾರ್ ಬಗ್ಗೆ ಸಂವೇದನಾಶೀಲ ಕಾಮೆಂಟ್‌ಗಳನ್ನು ಮಾಡಿದ್ದರು.
215
ಆದರೆ, ಜ್ಯೋತಿಷಿ ವೇಣುಸ್ವಾಮಿ ಇತ್ತೀಚೆಗೆ ಲೇಡಿ ಸೂಪರ್‌ಸ್ಟಾರ್ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ನಯನತಾರಾ ಸರೋಗಸಿ ಆಯ್ಕೆ ಮಾಡಿದ್ದರ ಹಿಂದಿನ ಕಾರಣವನ್ನು ಅವರು ತಿಳಿಸಿದ್ದಾರೆ.
315
ತಮಿಳು ಸಿನಿಮಾ ನಿರ್ದೇಶದ ವಿಘ್ನೇಶ್ ಶಿವನ್ ಅವರನ್ನು ಪ್ರೀತಿ ಮಾಡ್ತಿದ್ದ ನಯನತಾರಾ ಬಳಿಕ ಅವರನ್ನೇ ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಎರು ವರ್ಷಗಳ ಹಿಂದೆ ಇವರ ಮದುವೆ ನಡೆದಿತ್ತು.
415
ಮದುವೆಯಾದ ಕೆಲವೇ ತಿಂಗಳಲ್ಲಿ ತಾವಿಬ್ಬರೂ ತಂದೆ-ತಾಯಿ ಆಗಿರುವುದಾಗಿ ತಿಳಿಸಿದ್ದರು. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸರೋಗಸಿ ಅಂದರೆ ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಿದ್ದರು.
515
ಆದರೆ, ಇದು ವಿವಾದಕ್ಕೆ ಕಾರಣವಾಗಿತ್ತು. ಕೇಸ್‌ಗಳಾದರೂ, ಇದರ ಬಗ್ಗೆ ಎಚ್ಚರಿಕೆಯಲ್ಲಿದ್ದ ಅವರು ಎಲ್ಲವನ್ನೂ ಸುಸೂತ್ರವಾಗಿ ಬಗೆಹರಿಸಿಕೊಂಡರು.
615
ತಮ್ಮ ಸೌಂದರ್ಯ ಹಾಳಾಗುತ್ತದೆ ಹಾಗೂ ಹಿಂದಿನ ಶೇಪ್‌ಗೆ ಬರೋಕೆ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ನಯನತಾರಾ ಸರೋಗಸಿಯನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ವ್ಯಾಪಕವಾಗಿ ವರದಿಯಾಗಿತ್ತು.
715
ಬಾಡಿ ಶೇಪ್ ಚೇಂಜ್ ಆದರೆ, ಸೌಂದರ್ಯ ಕೂಡ ಹಾಳಾಗುತ್ತದೆ. ಸಿನಿಮಾದಲ್ಲಿ ಅವಕಾಶ ಕೂಡ ಕಡಿಮೆ ಆಗುತ್ತದೆ ಎನ್ನುವ ಕಾರಣಕ್ಕೆ ಸರೋಗಸಿಯನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಇದನ್ನು ಮಾಡುತ್ತಾರೆ.
815
ಈಗ ವಿವಾದಾತ್ಮಕ ಜ್ಯೋತಿಷಿ ವೇಣುಸ್ವಾಮಿ ನಯನತಾರಾ ಅವರ ವೈಯಕ್ತಿಕ ವಿಚಾರದ ಬಗ್ಗೆ ಬಾಂಬ್ ಎಸೆದಿದ್ದಾರೆ. ನಯನತಾರಾಗೆ ಮಕ್ಕಳನ್ನು ಹೆರುವ ಭಾಗ್ಯವೇ ಇಲ್ಲ ಎಂದಿದ್ದಾರೆ.
915
ಬಾಡಿ ಶೇಪ್ ಹಾಳಾಗುತ್ತದೆ, ಸೌಂದರ್ಯ ಕಡಿಮೆ ಆಗುತ್ತದೆ ಅನ್ನೋದಲ್ಲೆ ಸುಳ್ಳು, ಆಕೆ ಸರೋಗಸಿ ಆಯ್ಕೆ ಮಾಡಿಕೊಂಡಿರುವ ನಿಜವಾದ ಕಾರಣ ಬೇರೆಯದೇ ಇದೆ ಎಂದು ಹೇಳಿದ್ದಾರೆ.
1015
Nayanthara
ವಿಚಾರವೇನೆಂದರೆ, ನಟಿ ನಯನತಾರಾ ಬಂಜೆ. ಫರ್ಟಿಲಿಟಿ ಟ್ರೀಟ್‌ಮೆಂಟ್ ಮಾಡಿಸಿಕೊಂಡರೂ ಮಕ್ಕಳಾಗುವ ಭಾಗ್ಯ ಆಕೆಗೆ ಸಿಕ್ಕಿರಲಿಲ್ಲ. ಅದಕ್ಕಾಗಿಯೇ ಅವರು ಸರೋಗಸಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
1115
ಇನ್ನು ಆಕೆಯ ಜಾತಕವನ್ನು ನೋಡಿದರೆ, ಆಕೆಗೆ ಮಕ್ಕಳನ್ನು ಹೆರುವ ಭಾಗ್ಯವೇ ಇಲ್ಲ. ಹೀಗಿದ್ದಾಗ ಅವಳಿಗೆ ಮಕ್ಕಳ ಭಾಗ್ಯ ಸಿಗೋದಿಲ್ಲ. ಅದರ ನಂತರವೇ ಆಕೆ ಸರೋಗಸಿ ಡ್ರಾಮಾ ಮಾಡಿದ್ದಾರೆ ಎಂದು ವೇಣುಸ್ವಾಮಿ ಹೇಳಿದ್ದಾರೆ.
1215
ನಟಿ ಕಾಜಲ್ ಅಗರ್ವಾಲ್ ಕೂಡ ಮದುವೆಯಾಗಿದ್ದಾರೆ. ಆ ಬಳಿಕ ಗರ್ಭಿಣಿಯೂ ಆದರು. ಈಗ ಅವರು ಸಿನಿಮಾದಲ್ಲಿ ನಟಿಸುತ್ತಿಲ್ಲವೇ? ಹಾಗಿದ್ದಾಗ ನಯನತಾರಾಗೆ ಏನು ಸಮಸ್ಯೆ ಆಗಿತ್ತು? ಎಂದು ಪ್ರಶ್ನೆ ಮಾಡಿದ್ದಾರೆ.
1315
ನಮ್ಮಲ್ಲಿ ಈಗಾಗಲೇ ಸಾಕಷ್ಟು ನಟಿಯರು ಮದುವೆಯಾದ ಬಳಿಕವೂ ಸಿನಿಮಾ ಮಾಡಿಲ್ಲವೇ? ನಯನಾತಾರಾ ಹೇಳಿರೋದೆಲ್ಲ ಸುಳ್ಳು. ಆಕೆಗೆ ಗರ್ಭ ಧರಿಸಿ ಮಕ್ಕಳಿಗೆ ಜನ್ಮ ನೀಡುವ ಭಾಗ್ಯವಿಲ್ಲ ಅದಕ್ಕಾಗಿ ಸರೋಗಸಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
1415
ಯುಗಾದಿ ಸಮಯದಲ್ಲಿ ಕ್ಯೂಬ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ವೇಣುಸ್ವಾಮಿ ಆಡಿರುವ ಮಾತುಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
1515
ತೆಲುಗು ಚಿತ್ರ ಗಾಡ್‌ಫಾದರ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಯನತಾರಾ, ಪ್ರಸ್ತುತ ತಮಿಳು ಸಿನಿಮಾ ಟೆಸ್ಟ್‌ನಲ್ಲಿ ನಟಿಸುತ್ತಿದ್ದಾರೆ.