ಅರ್ಜುನ್‌ ಸರ್ಜಾ ಮನೆಯಲ್ಲಿ ಕಳೆಕಟ್ಟಿದ ಮಗಳ ಮದುವೆ ಸಂಭ್ರಮ, ಇಲ್ಲಿವೆ ಐಶ್ವರ್ಯಾ ಮೆಹಂದಿ ಫೋಟೋಸ್‌!

First Published | Jun 8, 2024, 8:30 PM IST

ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ ಹಾಗೂ ನಿವೇದಿತಾ ಅರ್ಜುನ್‌ ಅವರ ಹಿರಿಯ ಪುತ್ರಿ ಐಶ್ವರ್ಯಾ ಅರ್ಜುನ್‌ ಅವರ ಮದುವೆ ಸಮಾರಂಭ ಆರಂಭಗೊಂಡಿದೆ. ಶುಕ್ರವಾರ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮ ನೆರವೇರಿದೆ..

ನಟ ಅರ್ಜುನ್‌ ಸರ್ಜಾ ತಮ್ಮ ಹಿರಿಯ ಮಗಳು ಐಶ್ವರ್ಯಾ ಅರ್ಜುನ್‌ ಅವರ ಮದುವೆಯಲ್ಲಿ ಬ್ಯುಸಿಯಿದ್ದಾರೆ. ಶುಕ್ರವಾರ ಅದ್ದೂರಿಯಾಗಿ ಮೆಹಂದಿ ಸಮಾರಂಭ ನೆರವೇರಿದೆ.

ನಟ ಹಾಗೂ ನಿರ್ದೇಶಕ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯ ಅವರನ್ನು ಐಶ್ವರ್ಯಾ ಅರ್ಜುನ್‌ ವಿವಾಹವಾಗಲಿದ್ದಾರೆ. ಹಲ್ದಿ ಕಾರ್ಯಕ್ರಮದೊಂದಿಗೆ ಮದುವೆ ಕೆಲಸಗಳಿಗೆ ಚಾಲನೆ ಸಿಕ್ಕಿದೆ.

Tap to resize

ಕವರ್‌ ಮೀ ಇನ್‌ ಸನ್‌ಶೈನ್‌ ಥೀಮ್‌ನಲ್ಲಿ ಹಲ್ದಿ ಕಾರ್ಯಕ್ರಮ ನೆರವೇರಿದೆ. ತೀರಾ ಆಪ್ತರಷ್ಟೇ ಈ ಕಾರ್ಯಕ್ರಮದಲ್ಲಿದ್ದರು. ಹಳದಿ ಬಣ್ಣದ ಸಿಂಪಲ್‌ ಕುರ್ತಾ ಧರಿಸಿ ಐಶ್ವರ್ಯಾ ಮುದ್ದಾಗಿ ಕಾಣಿಸುತ್ತಿದ್ದರು.

ಹಲ್ದಿ ಕಾರ್ಯಕ್ರಮದ ಬೆನ್ನಲ್ಲಿಯೇ ಚೆನ್ನೈನಲ್ಲಿರುವ ಐಶ್ವರ್ಯಾ ಅರ್ಜುನ್‌ ಅವರ ನಿವಾಸದಲ್ಲಿಯೇ ಆಪ್ತರಿಗಷ್ಟೇ ಮೀಸಲಾಗಿದ್ದ ಮೆಹಂದಿ ಕಾರ್ಯಕ್ರಮ ನೆರವೇರಿದೆ.


ದ ಸ್ಕೈ ಟರ್ನಡ್‌ ಪಿಂಕ್‌ ಥೀಮ್‌ನಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ಐಶ್ವರ್ಯಾ ಅರ್ಜುನ್‌, ಅನಾಮಿಕಾ ಖನ್ನಾ ಔಟ್‌ಪಿಟ್‌ನ ವೈಬ್ರಂಟ್‌ ಯೆಲ್ಲೋ ಡ್ರೆಸ್‌ ಧರಿಸಿದ್ದರು.

ಐಶ್ವರ್ಯಾ ತನ್ನ ಮೊದಲ ತೆಲುಗು ಸಿನಿಮಾಗೆ ತಯಾರಿ ನಡೆಸುತ್ತಿರುವಾಗ ಮತ್ತು ಉಮಾಪತಿ ತನ್ನ ಎರಡನೇ ನಿರ್ದೇಶನದ ಚಲನಚಿತ್ರವನ್ನು ಯೋಜಿಸುತ್ತಿರುವಾಗ, ಅವರ ಮದುವೆಯ ಪೂರ್ವದ ಆಚರಣೆಗಳು ಹೊಸ ಆರಂಭದ ಉತ್ಸಾಹದಿಂದ ತುಂಬಿವೆ.
 

ಐಶ್ವರ್ಯಾ ಹಾಗೂ ಉಮಾಪತಿ ಮದುವೆ ಸಮಾರಂಭಗಳ ಸುತ್ತ ನಿರೀಕ್ಷೆ ಹೆಚ್ಚಿದೆ. ಇದರ ನಡುವೆ ಜೂನ್ 14 ರಂದು ಆರತಕ್ಷತೆ ನಡೆಯಲಿದೆ ಎಂದು ವರದಿಯಾಗಿದೆ.
 


ಜೂನ್‌ 14 ರಂದು ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ಮದುವೆಯ ಆರತಕ್ಷತೆ ಕಾರ್ಯಕ್ರಮ ನೆರವೇರಲಿದೆ. ಸಂಜೆ 6.30ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ.


ಮದುವೆಗೂ ಮುನ್ನ ಐಶ್ವರ್ಯಾ ಅರ್ಜುನ್‌ ಇತ್ತೀಚೆಗೆ ಅದ್ದೂರಿಯಾದ ಬ್ಯಾಚುಲರೇಟ್‌ ಪಾರ್ಟಿ ನೀಡಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ಖುಷಿಯಿಂದ ನಲಿದು ಬಂದಿದ್ದಾರೆ.


ಐಶ್ವರ್ಯಾ ಅರ್ಜುನ್‌ ಹಾಗೂ ಉಮಾಪತಿ ರಾಮಯ್ಯ , ಸರ್ವೈವರ್‌ ಎನ್ನುವ ರಿಯಾಲಿಟಿ ಶೋನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಶೋಗೆ ಅರ್ಜುನ್‌ ಅರ್ಜಾ ಅವರೇ ನಿರೂಪಕರಾಗಿದ್ದರು.

ಅಂದಿನಿಂದ ಬೆಳೆದ ಐಶ್ವರ್ಯಾ ಅರ್ಜುನ್‌ ಹಾಗೂ ಉಮಾಪತಿ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಬ್ಬರ ನಿಶ್ಚಿತಾರ್ಥ ನಡೆದಿತ್ತು.


ಬಾಲಿಯಲ್ಲಿ ನಡೆದ ಬ್ಯಾಚುಲರೇಟ್‌ ಪಾರ್ಟಿಯಲ್ಲಿ ಐಶ್ವರ್ಯಾ ಅರ್ಜುನ್‌ ಅವರೊಂದಿಗೆ ಅವರ ಸಹೋದರಿ ಅಂಜನಾ ಸರ್ಜಾ ಅವರ ಫೋಟೋ ಕೂಡ ವೈರಲ್‌ ಆಗಿದ್ದವು.


ಬಾಲಿಯ ಬ್ಯಾಚುಲರೇಟ್‌ನ ಸಾಕಷ್ಟು ಫೋಟೋಗಳನ್ನು ಐಶ್ವರ್ಯಾ ತಮ್ಮ ಇನ್ಸ್‌ಟಾಗ್ರಾಮ್‌ ಹ್ಯಾಂಡಲ್‌ನಲ್ಲಿಯೇ ಪೋಸ್ಟ್‌ ಮಾಡಿದ್ದರು. ಕೆಲವು ಸಾಹಸಿಕ ಪ್ರಯತ್ನವನ್ನೂ ಇವರು ಮಾಡಿದ್ದರು.

ಕೆಸರಿನ ಟ್ರ್ಯಾಕ್‌ನಲ್ಲಿ ಸ್ಪೋರ್ಟ್ಸ್‌ ಕಾರ್‌ ಡ್ರೈವ್‌, ಸ್ಪೀಡ್‌ ಬೋಟ್‌ ಹಾಗೂ ಬಂಗಿ ಜಂಪ್‌ ಸಾಹಸವನ್ನೂ ಐಶ್ವರ್ಯಾ ಅರ್ಜುನ್‌ ತಮ್ಮ ಬ್ಯಾಚುಲರೇಟ್‌ ಪಾರ್ಟಿಯಲ್ಲಿ ಮಾಡಿದ್ದಾರೆ.

Latest Videos

click me!