ಪುಷ್ಪಾ 2 ಪ್ರೀಮಿಯರ್ ಶೋ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ರೇವತಿ ಹೆಸರಿನ ಮಹಿಳೆ ಸಾವು ಕಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಂಧನವಾಗಿದೆ.
ಶುಕ್ರವಾರ ಬೆಳಗ್ಗೆ ಹೈದರಾಬಾದ್‌ನಲ್ಲಿರುವ ಅಲ್ಲು ಅರ್ಜುನ್ ನಿವಾಸಕ್ಕೆ ಆಗಮಿಸಿದ ಚೊಕ್ಕಡಪಲ್ಲಿ ಪೊಲೀಸ್ ಸ್ಟೇಷನ್‌ನ ಅಧಿಕಾರಿಗಳು ವಿಚಾರಣೆಗೆ ಆಗಮಿಸುವಂತೆ ಅಲ್ಲು ಅರ್ಜುನ್ ಅವರನ್ನು ಕೇಳಿದ್ದಾರೆ. ಈ ವೇಳೆ ತಿಳೀ ಹಸಿರು ಬಣ್ಣದ ಶಾರ್ಟ್ಸ್ ಹಾಗೂ ಟಿ ಶರ್ಟ್ ಧರಿಸಿದ್ದ ಅಲ್ಲು ಅರ್ಜುನ್ ಅವರನ್ನು ಬೇಸ್‌ಮೆಂಟ್‌ಗೆ ಕರೆದುಕೊಂಡು ಬಂದಿರುವ ವಿಡಿಯೋ ವೈರಲ್ ಆಗಿದೆ.
ಬೇಸ್‌ಮೆಂಟ್‌ಗೆ ಬಂದ ಬಳಿಕ ಬಿಳಿ ಬಣ್ಣದ ಜಾಗರ್ಸ್ ಧರಿಸಿದ ಅಲ್ಲು ಅರ್ಜುನ್ ಪೊಲೀಸ್ ಕಾರು ಏರುವ ಮುನ್ನ ಒಂದು ಕಪ್ ಟೀ ಕುಡಿದಿದ್ದಾರೆ. ಬಳಿಕ ಪತ್ನಿ ಸ್ನೇಹಾ ರೆಡ್ಡಿ ಕೆನ್ನೆಗೆ ಮುತ್ತಿಟ್ಟು ಸ್ಟೈಲ್ ಅಲ್ಲಿ ಪೊಲೀಸ್ ಕಾರ್ ಏರಿದ್ದಾರೆ.
ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅಲ್ಲು ಅರ್ಜುನ್ ವಿರುದ್ಧ ಕೆಲುವು ಗಂಭೀರ ಸೆಕ್ಷನ್‌ಗಳನ್ನು ಕೂಡ ಹಾಕಲಾಗಿದೆ. ಇದೇ ಕಾರಣಕ್ಕಾಗಿ ಅವರ ಬಂಧನ ಕೂಡ ಆಗಿದೆ ಎನ್ನಲಾಗಿದೆ.
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಡಿಸೆಂಬರ್ 4 ರಂದು ನಡೆದ ಘಟನೆಯಲ್ಲಿ ರೇವತಿ ಎನ್ನುವ ಮಹಿಳೆ ಕಾಲ್ತುಳಿತದಿಂದ ಸಾವು ಕಂಡಿದ್ದಳು. ಮಧ್ಯರಾತ್ರಿ ಸಿನಿಮಾದ ಪ್ರೀಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಥಿಯೇಟರ್‌ಗೆ ಬಂದಿದ್ದರು.