ಹೌದು ಈ ಟ್ಯಾಟೂ ಸುಶಾಂತ್ ಹಾಗೂ ಅವರ ತಾಯಿ ನಡುವಿನ ಸಂಬಂಧವಿತ್ತು, ಜೊತೆಗೊಂದು ವಿಶೇಷ ಸಂದೇಶವೂ ಇತ್ತು. ಈ ಮೊದೂ ಈ ವಿಚಾರ ಹಲವಾರು ಬಾರಿ ಸುಶಾಂತ್ ತನ್ನ ತಾಯಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದರೆಂಬುವುದು ಅವರ ಪೋಸ್ಟ್‌ಗಳ ಮೂಲಕ ಬಹಿರಂಗಗೊಂಡಿದೆ. ಜೊತೆಗೆ ಅವರ ಅಂತಿಮ ಇನ್ಸ್ಟಾಗ್ರಾಂ ಪೋಸ್ಟ್ ಕೂಡಾ ತಾಯಿ ಕುರಿತಾಗಿತ್ತು.
ಸುಶಾಂತ್ ಸಿಂಗ್ ರಜಪೂತ್ ಕಳೆದ ಜೂನ್ 14ರಂದು ಸಾವನ್ನಪ್ಪಿದ್ದಾರೆ. ಅವರ ಕುರಿತಾಗಿ ಎಷ್ಟು ವಿಚಾರಗಳು ಬಹಿರಂಗಗೊಳ್ಳುತ್ತಿದೆಯೋ ಅಷ್ಟೇ ಅವರ ಮೇಲೆ ಅಭಿಮಾನಿಗಳಿಗೆ ಪ್ರೀತಿ ಹೆಚ್ಚಾಗುತ್ತಿದೆ. ಸುಶಾಂತ್ 2016ರಲ್ಲಿ ಮೊದಲು ಟ್ಯಾಟೂ ಹಾಕಿಸಿಕೊಂಡಿದ್ದರು. ಆದರೀಗ ಈ ಟ್ಯಾಟೂ ಹಿಂದಿನ ರೋಚಕ ಕತೆ ಹಾಗೂ ಫೋಟೋಗಳು ವೈರಲ್ ಆಗುತ್ತಿವೆ.
ಸುಶಾಂತ್ ಸಿಂಗ್ ರಜಪೂತ್ ಹದಿನಾರು ವರ್ಷದವರಿದ್ದಾಗ ತಾಯಿಯನ್ನು ಕಳೆದುಕೊಂಡಿದ್ದರು. ಆದರೆ ಸುಶಾಂತ್ ತನ್ನ ತಾಯಿ ಜೊತೆ ಬಹಳ ಕ್ಲೋಸ್ ಆಗಿದ್ದರು. ಇದೇ ಕಾರಣದಿಂದ ಅವರು ತಮ್ಮ ಕೊನೆ ದಿನಗಳಲ್ಲೂ ತಾಯಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ತಾಯಿ ನೆನಪಿಗೆಂದೇ ಅವರು 2016ರಲ್ಲಿ ಮೊದಲ ಟ್ಯಾಟೂ ಹಾಕಿಸಿಕೊಂಡಿದ್ದರು.
ಅವರು ಈ ಟ್ಯಾಟೂ ಫೋಟೋಗಳನ್ನು ಅಂದೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾ ಇದರ ಹಿಂದಿನ ಸಂದೇಶವನ್ನೂ ಡಿಕೋಡ್ ಮಾಡಿದ್ದರು.
ಈ ಬಗ್ಗೆ ಬರೆದಿದ್ದ ಸುಶಾಂತ್ 5 ಎಲಿಮೆಂಟ್ಸ್, ತಾಯಿ ಹಾಗೂ ನಾನು. ಇನ್ನು ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ತ್ರಿಕೋನದೊಳಗೆ ಮಗುವನ್ನು ಅಪ್ಪಿಕೊಂಡ ತಾಯಿಯನ್ನೂ ನೋಡಬಹುದು.
ಇನ್ನು ಲಭ್ಯವಾದ ಮಾಹಿತಿ ಅನ್ವಯ ಸುಶಾಂತ್ ಇದನ್ನು ತಮ್ಮ ಕತ್ತಿನ ಭಾಗದಲ್ಲಿ ಮಾಡಲಿಚ್ಛಿಸಿದ್ದರು. ಆದರೆ ಸಹೋದರಿ ಅಭಿಪ್ರಾಯದಂತೆ ಇದನ್ನು ಬೆನ್ನ ಮೇಲೆ ಹಾಕಿಸಿಕೊಂಡಿದ್ದರು.
ಇನ್ನು ಸುಶಾಂತ್ ಹಲವಾರು ಹರಕೆಗಳನ್ನು ಹೊತ್ತ ಬಳಿಕ ಜನಿಸಿದ್ದರೆಂದು ಅವರ ತಂದೆ ಈಗಾಗಲೇ ಹೇಳಿದ್ದಾರೆ. ಸುಶಾಂತ್‌ಗೆ ನಾಲ್ವರು ಸಹೋದರಿಯರಿದ್ದು, ಅವರಲ್ಲಿಒಬ್ಬರು ಈಗಾಗಲೇ ನಿಧನ ಹೊಂದಿದ್ದಾರೆ. ಇನ್ನು ಅವರ ತಾಯಿ ಮೆದದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದರೆನ್ನಲಾಗಿದೆ. ಸುಶಾಂತ್ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಮೂಲಕ ಆಗಾಗ ತಾಯಿಯನ್ನು ನೆನಪಿಸಿಕೊಳ್ಳುತ್ತಿದ್ದರು.
ಇನ್ನು ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದಾರೆಎಂಬುವುದನ್ನು ಅವರ ಗೆಳಳೆಯರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅಲ್ಲದೇ ಅವರ ಸಾವಿನ ತನಿಖೆಯನ್ನು CBIಗೆ ವಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಸದ್ಯ ಮುಂಬೈ ಪೊಲೀಸ್ ಈ ತನಿಖೆ ನಡೆಸುತ್ತಿದೆ.