ಬೆಳಕನ್ನೇ ಕಾಣದೆ ಶತದಿನೋತ್ಸವ ಆಚರಿಸುತ್ತಿವೆ ಬೆಳ್ಳಿಪರದೆಗಳು!

Suvarna News   | Asianet News
Published : Jun 24, 2020, 02:42 PM IST

ಕೊರೋನಾ ವೈರಸ್ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿ ಹೋಗುತ್ತಿರುವ ಕರುನಾಡಿನಲ್ಲಿ ದಿನೇದಿನೇ ವ್ಯಾಪಾರವಹಿವಾಟು ನೆಲಕಚ್ಚುತ್ತಿವೆ.ಇದಕ್ಕೆ ಮನರಂಜನಾ ಮಾಧ್ಯಮ ,ಸಿನಿಮಾ ಚಿತ್ರೀಕರಣ,ಚಿತ್ರಮಂದಿರಗಳು ಹೊರತಾಗಿಲ್ಲ.ಪ್ರತಿದಿನ ನಮ್ಮೆಲ್ಲರನ್ನೂ ೨ ರಿಂದ ೩ ಗಂಟೆಗಳ ಕತ್ತಲ ಕೋಣೆಯಲ್ಲಿ ರಂಜಿಸುತ್ತಿದ್ದ,ಬೇಸರ,ನಗು,ಅಳು,ವ್ಯಂಗ್ಯ ಎಲ್ಲವನ್ನೂ ತನ್ನೊಳಗೆ ನುಂಗಿಕೊಂಡು ನಗುನಗುತ್ತಾ ಪ್ರದರ್ಶಿಸುತ್ತಿದ್ದ ಬೆಳ್ಳಿಪರದೆ ಇಂದು ಬೆಳಕನ್ನೇ ಕಾಣದ ಬಡಪಾಯಿಯಂತಾಗಿದೆ.ಯಾವ ಸ್ಟಾರ್ ನಟರ ಸಿನಿಮಾಗಳು ಇಲ್ಲದೆಯೂ ಶತಕ ಬಾರಿಸಿದೆ.ಇಷ್ಟೆಲ್ಲಾ ಪೀಠಿಕೆಗೆ ಕಾರಣವೇನೆಂದರೆ ಥಿಯೇಟರ್ ಗಳು ಬಾಗಿಲು ಮುಚ್ಚಿಕೊಂಡು ಇಂದಿಗೆ ಸರಿಯಾಗಿ ನೂರು ದಿನಗಳಾಗಿವೆ.

PREV
111
ಬೆಳಕನ್ನೇ ಕಾಣದೆ ಶತದಿನೋತ್ಸವ ಆಚರಿಸುತ್ತಿವೆ ಬೆಳ್ಳಿಪರದೆಗಳು!

ಸಿನಿಮಾ ಈ ಒಂದು ಪದ ನಮ್ಮೆಲ್ಲರ ಬದುಕಿನ ಭಾಗವಾಗಿದೆ ಎಂದರೆ ತಪ್ಪಲ್ಲ.ಕೆಲವೊಮ್ಮೆ ಮನುಷ್ಯನ ಆಯಾಸ,ಬೇಸರ,ಸಂತೋಷ ಎಲ್ಲದಕ್ಕೂ ಒಂದಲ್ಲ ಒಂದು ರೀತಿ ಕಾರಣವಾಗಿರುತ್ತದೆ ಸಿನಿಮಾ.

211

ಶುಕ್ರವಾರ ಎನ್ನುವುದು ಪ್ರತಿ ಸಿನಿಮಾ ಉದ್ಯೋಗಿಯ ಪಾಲಿಗೆ ವಿಶೇಷ ದಿನವಾಗಿರುತ್ತದೆ.ಆದರೆ ಕಳೆದ ಮೂರುವರೆ ತಿಂಗಳುಗಳಿಂದ ಸಿನಿಮಾ ಸಂಬಂಧಿಸಿದ ಚಟುವಟಿಕೆಗಳು ಬಂದ್ ಆಗಿದ್ದು ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ.
 
311

ಸಿನಿಮಾಗಳ ಬಿಡುಗಡೆಯಿಲ್ಲದೆ ,ಜನರ ಕೂಗು,ಜೈಕಾರ,ಶಿಳ್ಳೆ,ಚಪ್ಪಾಳೆ ಹೀಗೆ ನಾನಾರೀತಿಯಿಂದ ಸದಾ ಸಂಭ್ರಮಿಸುತ್ತಿದ್ದ ಚಿತ್ರಮಂದಿರಗಳು ಇಂದು ಸೂತಕ ವಾತಾವರಣದಲ್ಲಿ ಕಂಗಾಲಾಗಿವೆ.
 
411

ಚಿತ್ರರಂಗದಲ್ಲಿ ಕಥೆ, ಚಿತ್ರಕಥೆಯ ತಯಾರಿಯಿಂದ ಹಿಡಿದು ಸಿನಿಮಾ ಚಿತ್ರೀಕರಣ ಮುಗಿಸುವುದು ಒಂದು ಸವಾಲಾದರೇ ಆ ಸಿನಿಮಾವನ್ನು ಬಿಡುಗಡೆಗೆ ಮಾಡುವುದು,ಚಿತ್ರಮಂದಿರಗಳನ್ನು ಪಡೆದುಕೊಳ್ಳುವುದು ಮತ್ತೊಂದು ಸವಾಲು ಎನ್ನುತ್ತಾರೆ ಸಿನಿಮಾ ತಜ್ಞರು.
 
511

ಮೊದಲೇ ಪರಭಾಷೆಯ ಸಿನಿಮಾಗಳಿಂದ ತತ್ತರಿಸಿದ್ದ ಸ್ಯಾಂಡಲ್ ವುಡ್ ಗೆ ಮತ್ತು ಸಿನಿಮಾವನ್ನೇ ನಂಬಿ ಬದುಕುತಿದ್ದ ಸಿನಿ ಕರ್ಮಿಗಳನ್ನು ಈ ಅನಿರೀಕ್ಷಿತ ಸಮಸ್ಯೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
 
611

ಚಿತ್ರಮಂದಿರಗಳಿಗೆ ಅದರ ಮಾಲೀಕರಿಗೆ ಕೊರೋನಾ,ಲಾಕ್ ಡೌನ್,ಥಿಯೇಟರ್ ತೆರೆಯಲು ಸರ್ಕಾರದ ಅನುಮತಿ ಇವೆಲ್ಲಾ ಒಂದು ರೀತಿಯ  ತೊಂದರೆಯಾದರೆ ಡಿಜಿಟಲ್ ಮಾಧ್ಯಮ,OTT ವೇದಿಕಗಳಲ್ಲಿ ನೇರವಾಗಿ ಸಿನಿಮಾ ಬಿಡುಗಡೆಗೊಂಡು ಜನರನ್ನು ವೇಗವಾಗಿ ತಲುಪುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

711

ಎಷ್ಟೋ ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿವೆ,ಕೆಲವು ಸಿನಿಮಾಗಳು ಬಿಡುಗಡೆಯಾಗಲು ತುದಿಗಾಲಲ್ಲಿ ಕಾಯುತ್ತಿವೆ ಇದಕ್ಕೆ ಸ್ಟಾರ್ ಸಿನಿಮಾಗಳು ಹೊರತಾಗಿಲ್ಲ. ಆದರೆ  ಸರ್ಕಾರದಿಂದ ಸಿನಿಮಾ ಹಾಲ್ ಗಳು ತೆರೆಯಲು ಅನುಮತಿ ಸಿಕ್ಕರೂ ಕೊರೋನಾ ಕಾಟಕ್ಕೆ ಭಯಭೀತರಾಗಿರುವ ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವರೇ ಎಂಬ ಪ್ರಶ್ನೆಯೂ ಕಾಡುತ್ತಿದೆ.

811

ಈ ಮಧ್ಯೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಡಬ್ಬಿಂಗ್ ಧಾರವಾಹಿ, ಸಿನಿಮಾಗಳು ಯಶಸ್ವಿಯಾಗುತ್ತಿದ್ದು ಇದು ಬೆಳ್ಳಿತೆರೆಯ ಮೇಲೂ ಪರಿಣಾಮ ಬಿರುವುದೇ ಎಂಬ ಆತಂಕ ಸಿನಿಮಾ ಮಂದಿಯದ್ದು.

911

ಕೊರೋನಾ ಅಟ್ಟಹಾಸದ ಮುಂದೆ ಮಂಡಿಯೂರಿ ಕೂತಿರುವ ಚಿತ್ರಮಂದಿರಗಳು ಬಾಗಿಲು ಮುಚ್ಚಿ ಇಂದಿಗೆ ನೂರು ದಿನಗಳನ್ನು ಪೂರೈಸಿರುವುದು ಚಿತ್ರರಸಿಕರಿಗೆ ಅಪರೂಪದ ಬೇಸರದ ಸಂಗತಿಯಾಗಿದೆ.ಚಿತ್ರಮಂದಿರ ತುಂಬಿದೆ ಎಂದು ಬೋರ್ಡ್ ಹಾಕುತ್ತಿದ್ದ ಮಾಲೀಕರು ಇಂದು ಚಿತ್ರಮಂದಿರ ಮುಚ್ಚಿದೆ ಎಂಬ ಬೋರ್ಡ್ ಹಾಕುವ ಸ್ಥಿತಿಗೆ ಬಂದಿದ್ದಾರೆ.
 
1011

ಏನೇ ಇರಲಿ ಆದಷ್ಟು ಬೇಗ ಸಿನಿಮಾರಂಗದ ಚಟುವಟಿಕೆಗಳು ಮತ್ತೆ ಶುರುವಾಗಲಿ.

1111

ಬಿಡುಗಡೆಗೆ ಸಿದ್ದವಾಗಿರುವ ಸಿನಿಮಾಗಳು ತೆರೆಕಂಡು ಯಶಸ್ವಿಯಾಗಲಿ ಕನ್ನಡ ಚಿತ್ರರಂಗ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. 

click me!

Recommended Stories