25 ವರ್ಷಗಳ ನಂತರ ಬಾಲಿವುಡ್‌ಗೆ ಮರಳಿರುವ ನಟಿ ಜ್ಯೋತಿಕಾ, 47ನೇ ವಯಸ್ಸಿನಲ್ಲೂ ತಮ್ಮ ಫಿಟ್‌ನೆಸ್‌ನಿಂದ ಗಮನ ಸೆಳೆದಿದ್ದಾರೆ. ನಿಯಮಿತ ವ್ಯಾಯಾಮ ಮತ್ತು ಕಡಿಮೆ ಕ್ಯಾಲೋರಿ ಆಹಾರದ ಮೂಲಕ 16 ಕೆ.ಜಿ ತೂಕ ಇಳಿಸಿಕೊಂಡಿರುವ ಅವರ ಫಿಟ್ನೆಸ್ ರಹಸ್ಯದ ಬಗ್ಗೆ ಈ ಲೇಖನ ವಿವರಿಸುತ್ತದೆ.
ತೆರೆಯಿಂದ ಮರೆಯಾಗಿದ್ದ ಖ್ಯಾತ ನಟಿ, ತಮಿಳಿನ ಸ್ಟಾರ್ ನಟ ಸೂರ್ಯ ಪತ್ನಿ ಜ್ಯೋತಿಕಾ (Jyotika) ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶೇಷ ಎಂದರೆ ಜ್ಯೋತಿಕಾ 2024ರಲ್ಲಿ ಬಿಡುಗಡೆಯಾದ ಸೈತಾನ್ ಚಿತ್ರದ ಮೂಲಕ ಬಾಲಿವುಡ್‌ಗೆ 25 ವರ್ಷಗಳ ಮರಳಿದ್ದರು. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ (Ajay Devagan) ಮತ್ತು ಆರ್ ಮಾಧವನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ ನಟಿಯ ಫಿಟ್ನೆಸ್ ಕುರಿತು ಸಾಕಷ್ಟು ಚರ್ಚೆಯಾಗಿತ್ತು.
26
47ರಹರೆಯದಲ್ಲೂ ಫಿಟ್
ಅಷ್ಟಕ್ಕೂ ಸೂರ್ಯ ಮತ್ತು ಜ್ಯೋತಿಕಾ ದಂಪತಿಗೆ ಇಬ್ಬರು ಮಕ್ಕಳು. ಮಗಳು ದಿಯಾ (18 ವರ್ಷ) ಮಗ ದೇವ್ (15 ವರ್ಷ). ಜ್ಯೋತಿಕಾ ಅವರಿಗೆ 47 ವರ್ಷ ವಯಸ್ಸು. ಈ ವಯಸ್ಸಿನಲ್ಲಿಯೂ, ಇಬ್ಬರು ದೊಡ್ಡ ಮಕ್ಕಳ ಅಮ್ಮನಾದ ಮೇಲೂ ಜ್ಯೋತಿಕಾ ಫಿಟ್ ಆಗಿದ್ದಾರೆ. ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ.
36
2 ಗಂಟೆಯಲ್ಲಿ ಮಿಲಿಯನ್ ಫಾಲೋವರ್ಸ್
ಇದಕ್ಕೆ ಕಾರಣ, ಇವರ ವರ್ಕ್ಔಟ್. ಅಸಾಧ್ಯ ಎನ್ನಿಸುವ ವರ್ಕ್ಔಟ್ ಮಾಡಿರುವ ನಟಿಯ ವಿಡಿಯೋ ನೋಡಿ ಫ್ಯಾನ್ಸ್ ಫಿದಾ (Fans Fida) ಆಗಿದ್ದಾರೆ. ಇದರ ವಿಡಿಯೋ ಅನ್ನು ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. 2021ರಲ್ಲಿ ಇವರು ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದರು. ಖಾತೆ ತೆರೆದ 2 ಗಂಟೆಯಲ್ಲಿ ಮಿಲಿಯನ್ ಫಾಲೋವರ್ಸ್ ಪಡೆದುಕೊಳ್ಳುವ ಮೂಲಕವಾಗಿ ದಾಖಲೆ ಮಾಡಿದ್ದರು ನಟಿ.
ಈಗ ಅದರಲ್ಲಿಯೇ ತಮ್ಮ ವರ್ಕ್ಔಟ್ ಶೇರ್ ಮಾಡಿದ್ದಾರೆ. ಅಸಾಧ್ಯ ಎನಿಸುವ ವರ್ಕ್ಔಟ್ ಮಾಡಿದ್ದಾರೆ. ಭಾರವಾಗಿರುವ ವರ್ಕ್ಔಟ್ ಸಲಕರಣೆಗಳನ್ನು ಎತ್ತುವ ಮೂಲಕ ತಮ್ಮ ಶೌರ್ಯ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಸಕತ್ ವೇಟ್ ಲಾಸ್ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳಿಂದ ವರ್ಕ್ಔಟ್ (workout) ನಡೆಸುತ್ತಿರುವ ನಟಿ, ಕಳೆದ ವರ್ಷ ಸುಮಾರು 16 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಇದನ್ನು ನೋಡಿಯೇ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದರು.
56
ಫಿಟ್ನೆಸ್ ಗುಟ್ಟು
ಈಗ ಮತ್ತೊಂದು ಬಾರಿ ನಟಿ ತಮ್ಮ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಫಿಟ್ನೆಸ್ ಕುರಿತು ಮಾತನಾಡಿದ್ದಾರೆ. ಈ ಮೊದಲು ನಾನು ತೂಕವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಲಿಲ್ಲ, ನಿಯಮಿತವಾಗಿ ವ್ಯಾಯಾಮ ಮಾಡಲು ಸೋಮಾರಿಯಾಗಿದ್ದೆ.
66
ಕಡಿಮೆ ಕ್ಯಾಲೋರಿ ಆಹಾರ
ನಂತರ ನಾನು ಸಾಕಷ್ಟು ತೂಕವನ್ನು ಹೊಂದಿದ್ದೇನೆ ಎಂದು ಅರಿತುಕೊಂಡೆ. ಆದ್ದರಿಂದ ಕಳೆದ ಕೆಲವು ತಿಂಗಳುಗಳಿಂದ, ನಾನು ಆರೋಗ್ಯಕರ ಆದರೆ ಕಡಿಮೆ ಕ್ಯಾಲೋರಿ ಆಹಾರವನ್ನು ಅನುಸರಿಸುತ್ತಿದ್ದೇನೆ. ನಾನು ನಿಯಮಿತವಾಗಿ ವ್ಯಾಯಾಮ ಮಾಡುತ್ತೇನೆ ಮತ್ತು ಕೆಲವು ಕಿಲೋಗಳನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ನಟಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.