ಮಲಯಾಳಂನ ಈ ಸಿನಿಮಾವು ಯಾವುದೇ ಆಡಂಬರವಿಲ್ಲದ ಸುಂದರ ಹಾಗೂ ನಿಗೂಢ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ನಾಯಕನ ವರ್ತನೆ ದಿಢೀರ್ ಬದಲಾಗುವ ಮೂಲಕ ಕಥೆ ಕುತೂಹಲಕಾರಿ ತಿರುವು ಪಡೆಯುತ್ತದೆ. ಕೇವಲ 3 ಕೋಟಿ ಬಜೆಟ್‌ನ ಈ ಯಶಸ್ವಿ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು.
ಮಲಯಾಳಂ ಸಿನಿಮಾಗಳಲ್ಲಿ ಸಣ್ಣದಾದ ಕಥೆಯನ್ನು ಸುಂದರವಾಗಿ ಯಾವುದೇ ಆಡಂಬರವಿಲ್ಲದೇ ತೆರೆ ಮೇಲೆ ತೆಗೆದುಕೊಂಡು ಬರುತ್ತದೆ. ಈ ಕಾರಣದಿಂದ ಸಿನಿಮಾ ನೋಡುವಾಗ ಇದು ನಮ್ಮ ಕಥೆ ಎಂಬ ಭಾವನೆಯುಂಟಾಗುತ್ತದೆ. ಇಂದು ನಾವು ಹೇಳುತ್ತಿರುವ ಸಿನಿಮಾ ಮಾಲಿವುಡ್ ಅಂಗಳದ ಅತ್ಯಂತ ಸುಂದರ ಚಿತ್ರ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
25
ಕ್ರೈಂ, ಥ್ರಿಲ್ಲರ್ ಅಲ್ಲ, ಆದ್ರೆ ಸಿಕ್ಕಾಪಟ್ಟೆ ಮಿಸ್ಟ್ರಿ ಕತೆ
ಈ ಸಿನಿಮಾದ ಕಥೆ ಸಿಕ್ಕಾಪಟ್ಟೆ ಥ್ರಿಲ್ಲರ್ ಅಥವಾ ಭಯಪಡಿಸೋ ಕತೆಯನ್ನು ಹೊಂದಿಲ್ಲ. ಆದ್ರೂ ಕಥೆಯಲ್ಲಿನ ನಿಗೂಢತೆ ನಿಮ್ಮನ್ನು ಅಂತ್ಯದವರೆಗೂ ಕರೆದುಕೊಂಡು ಹೋಗುವಲ್ಲಿ ಸಕಸ್ಸ್ ಆಗುತ್ತದೆ. ಕೇರಳದ ಸುಂದರತೆಯನ್ನು ಈ ಸಿನಿಮಾದಲ್ಲಿ ತೆಗೆದುಕೊಂಡು ಬರಲಾಗಿದೆ. 2022ರಲ್ಲಿ ಬಿಡುಗಡೆಗೊಂಡ ಈ ಮಲಯಾಳಂ ಸಿನಿಮಾಗೆ IMDbಯಲ್ಲಿ 7.2 ರೇಟಿಂಗ್ ನೀಡಲಾಗಿದೆ. ಹಾಗಾದ್ರೆ ಯಾವುದು ಈ ಸಿನಿಮಾ ಎಂದು ನೋಡೋಣ ಬನ್ನಿ.
ಮಮ್ಮೂಟಿ, ಸಂಜನಾ ದೀಪು, ರಮ್ಯಾ ಪಾಂಡಿಯನ್, ರಮ್ಯಾ ಸುವಿ, ವಿಪಿನ್ ಅಟ್ಲಿ ನಟನೆಯ ನಾನ್ಪಕಲ್ ನೆರತು ಮಾಯಕ್ಕಂ ಸಿನಿಮಾ ನೋಡಿ ಥಿಯೇಟರ್‌ನಿಂದ ಹೊರಗೂ ಕಥೆ ಬಗ್ಗೆ ಚಿಂತಿಸುವಂತೆ ಮಾಡಿತ್ತು. ಕೇವಲ 3 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಮೂರು ಪಟ್ಟು ಕಲೆಕ್ಷನ್ ಮಾಡಿತ್ತು. ಲಿಜೋ ಜೋಸ್ ಪೆಲ್ಲಿಸ್ಸೆರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರೆ, ಎಸ್ ಹರೀಶ್ ಅವರ ಲೇಖನದಲ್ಲಿ ಕಥೆ ಮೂಡಿ ಬಂದಿದೆ.
ಒಮ್ಮೆ ನಾಯಕ ನಟ ತನ್ನ ಕುಟುಂಬದೊಂದಿಗೆ ಪೂಜೆ ಹಿನ್ನೆಲೆ ಊರಿನಿಂದ ಹೊರಗೆ ಹೋಗುತ್ತಾನೆ. ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದ ನಾಯಕ, ಪೂಜೆಯಿಂದ ಹಿಂದಿರುಗಿ ಬರುವಾಗ ಆತನ ಕ್ಯಾರೆಕ್ಟರ್ ಸಂಪೂರ್ಣವಾಗಿ ಬದಲಾಗುತ್ತದೆ. ಇಲ್ಲಿಂದ ಸಿನಿಮಾ ನಿಗೂಢತೆ ಜೊತೆ ಹಲವು ತಿರುವುಗಳನ್ನು ಪಡೆದುಕೊಳ್ಳಲು ಆರಂಭಿಸುತ್ತದೆ. ಚಿತ್ರದ ಸುಂದರಂ ಎಂಬ ಪಾತ್ರ ಕಥೆಯ ಪ್ರಮುಖ ಆಕರ್ಷಣೆಯಾಗುತ್ತದೆ.
55
ಯಾವ OTT ಪ್ಲಾಟ್‌ಫಾರಂ?
ಮುಮ್ಮಟ್ಟಿ ಅವರ ನಾನ್ಪಕಲ್ ನೆರತು ಮಾಯಕ್ಕಂ ಸಿನಿಮಾವನ್ನು ನೀವು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾಗಿದೆ. ಡಿಸೆಂಬರ್ 12, 2022 ರಂದು 27 ನೇ ಅಂತರರಾಷ್ಟ್ರೀಯ ಕೇರಳ ಚಲನಚಿತ್ರೋತ್ಸವದಲ್ಲಿ (IIFK) ನಾನ್ಪಕಲ್ ನೆರತು ಮಾಯಕ್ಕಂ ಮೊದಲ ಬಾರಿ ಪ್ರದರ್ಶನಗೊಂಡಿತು. ಈ ಚಿತ್ರಕ್ಕೆ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.