ಒನ್‌ಫ್ಲಸ್ ಇದೀಗ ಬಜೆಟ್ ಫ್ಲೆಂಡ್ಲಿ ಬೆಲೆಯಲ್ಲಿ ಅದ್ಭುತ ಫೋನ್ ಲಾಂಚ್ ಮಾಡಿದೆ. ಅತ್ಯುತ್ತಮ ಕ್ವಾಲಿಟಿ ಫೋಟೋ, ವಿಡಿಯೋ ಚಿತ್ರೀಕರಿಸಬಲ್ಲ ಕ್ಯಾಮೆರಾ, ದಿನವಿಡಿ ಬಳಸಿದರೂ ಸಮಸ್ಯೆ ಇಲ್ಲದ ಬ್ಯಾಟರಿ ಸೇರಿ ಹಲವು ವಿಶೇಷತೆಗಳಿವೆ.
ದುಬಾರಿ ಫೋನ್‌ಗಳ ನಡುವೆ ಅದೇ ಫೀಚರ್, ಅಷ್ಟೇ ಕ್ವಾಲಿಟಿ ಫೋಟೋ, ವಿಡಿಯೋ ರೆಕಾರ್ಡಿಂಗ್ ಸಾಮರ್ಥ್ಯದ ಬಜೆಟ್ ಫ್ಲೆಂಡ್ಲಿ ಫೋನ್ ಒನ್‌ಪ್ಲಸ್ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ OnePlus N6 ಸ್ಮಾರ್ಟ್‌ಫೋನ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಈ ಫೋನ್ ಒನ್‌ಪ್ಲಸ್‌ನ ಪ್ರೀಮಿಯಂ ಫೋನ್‌ಗಳಿಗಿಂತ ಕಡಿಮೆ ದರವನ್ನು ಹೊಂದಿದ್ದರೂ, ಇದರಲ್ಲಿ ಅಳವಡಿಸಲಾಗಿರುವ ಫೀಚರ್ಸ್‌ಗಳು ಮಾತ್ರ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸುತ್ತಿವೆ.
25
ಬಜೆಟ್ ಫ್ಲೆಂಡ್ಲಿ OnePlus N6
ಭಾರತದಲ್ಲಿ OnePlus N6 ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆಯನ್ನು ಕೇವಲ 22,999 ರೂಪಾಯಿ ಈ ಬೆಲೆಯು 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಮಾದರಿಗೆ ಅನ್ವಯಿಸಲಿದೆ. ಅದೇ ರೀತಿ, ಇದರ ಮತ್ತೊಂದು ಹೈ-ಎಂಡ್ ವೇರಿಯಂಟ್ ಆದ 6GB RAM ಮತ್ತು 128GB ಸ್ಟೋರೇಜ್ ಆವೃತ್ತಿಯ ಬೆಲೆ 24,999 ರೂಪಾಯಿ. ಈ ಸ್ಮಾರ್ಟ್‌ಫೋನ್ ಫ್ರೆಶ್ ಮಿಂಟ್ (Fresh Mint) ಮತ್ತು ಮಿಡ್‌ನೈಟ್ ಗ್ರೀನ್ (Midnight Green) ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.
35
ಡಿಸ್ಕೌಂಟ್ ಬೋನಸ್ ಆಫರ್
ಗ್ರಾಹಕರು ಈ ಫೋನನ್ನು ಪ್ರಮುಖ ಇ-ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ (Amazon India) ಮತ್ತು ಒನ್‌ಪ್ಲಸ್ ಅಧಿಕೃತ ವೆಬ್‌ಸೈಟ್ ಮೂಲಕ ಜುಲೈ 4 ರಿಂದ ಖರೀದಿಸಬಹುದಾಗಿದೆ. ಬಿಡುಗಡೆಯ ಕೊಡುಗೆಯಾಗಿ ಬ್ಯಾಂಕ್ ಕಾರ್ಡ್‌ಗಳ ಮೇಲೆ ನೋ-ಕಾಸ್ಟ್ ಇಎಂಐ ಮತ್ತು ಸ್ಪಾಟಿಫೈ ಪ್ರೀಮಿಯಂನ ಉಚಿತ ಚಂದಾದಾರಿಕೆಯೂ ಲಭ್ಯವಿದೆ.
ಈ ಸ್ಮಾರ್ಟ್‌ಫೋನ್‌ನ ಅತ್ಯಂತ ಪ್ರಮುಖ ಮತ್ತು ಆಕರ್ಷಕ ವೈಶಿಷ್ಟ್ಯವೆಂದರೆ ಇದರ ಬ್ಯಾಟರಿ ಸಾಮರ್ಥ್ಯ. ಒನ್‌ಪ್ಲಸ್ ಈ ಬಜೆಟ್ ಫೋನ್‌ನಲ್ಲಿ ಬರೋಬ್ಬರಿ 8000mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಅಳವಡಿಸಿದೆ. ಕಂಪನಿಯ ಪ್ರಕಾರ, ಈ ಬೆಲೆಯ ವಿಭಾಗದಲ್ಲೇ ಇದು ಅತ್ಯಂತ ದೊಡ್ಡ ಬ್ಯಾಟರಿಯಾಗಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸತತ 3 ದಿನಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ. 7 ವರ್ಷಗಳ ಸುದೀರ್ಘ ಬಾಳಿಕೆ ಸಾಮರ್ಥ್ಯವನ್ನು ಹೊಂದಿದೆ. 45W ಸೂಪರ್‌ವೂಕ್ (SuperVOOC) ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ನೀಡಲಾಗಿದ್ದು, ಕೇವಲ 47 ನಿಮಿಷಗಳಲ್ಲಿ ಶೇ. 50 ರಷ್ಟು ಬ್ಯಾಟರಿಯನ್ನು ಚಾರ್ಜ್ ಮಾಡಬಹುದಾಗಿದೆ.
55
ಕ್ಯಾಮೆರಾ ಫೀಚರ್ಸ್
ಫೋಟೋ, ವಿಡಿಯೋ ರೆಕಾರ್ಡ್ ಮಾಡಲು 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಐಎಫ್ (AI) ಪ್ರಮುಖ ಕ್ಯಾಮೆರಾವನ್ನು ನೀಡಲಾಗಿದೆ. ಇದು 60 FPS ನಲ್ಲಿ ವಿಡಿಯೋ ರೆಕಾರ್ಡಿಂಗ್ ಮತ್ತು ಡ್ಯುಯಲ್-ವ್ಯೂ ವಿಡಿಯೋ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆಕಸ್ಮಿಕವಾಗಿ ಕೈಯಿಂದ ಬಿದ್ದರೂ ಹಾನಿಯಾಗದಂತೆ ಆರ್ಮರ್ ಶೆಲ್ ಪ್ರೊಟೆಕ್ಷನ್ ಇದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.