ಐಫೋನ್ 18 ಬಿಡುಗಡೆಗೆ ಸಜ್ಜಾಗಿದೆ. ಭಾರತದಲ್ಲಿ ಐಫೋನ್ 18ರ ಬೆಲೆ ಎಷ್ಟಿರಲಿದೆ? ಕ್ಯಾಮೆರಾ ಹಾಗೂ ಅಪ್‌ಡೇಟೆಡ್ ಫೀಚರ್ಸ್ ಏನು? ಫೋನ್ ಬಿಡುಗಡೆಗೂ ಮೊದಲೇ ರೋಚಕ ಮಾಹಿತಿ ಲೀಕ್ ಆಗಿದೆ. ಇಲ್ಲಿದೆ ಸಂಪೂರ್ಣ ವಿವರ.
ಐಫೋನ್ 18 ಪ್ರೀಮಿಯಂ ಫ್ಲ್ಯಾಗ್‌ಶಿಪ್ ಫೋನ್ ಕುರಿತು ಕೆಲ ರೋಚಕ ಮಾಹಿತಿ ಬಹಿರಂಗವಾಗಿದೆ. ಐಫೋನ್ 18 ಬಿಡುಗಡೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಇದೆ. ಭಾರತದಲ್ಲಿ ಅದ್ಧೂರಿಯಾಗಿ ಐಫೋನ್ 18 ಬಿಡುಗಡೆ ನಡೆಯಲಿದೆ. ಐಫೋನ್ ಪ್ರಿಯರ್ ಖರೀದಿಗಾಗಿ ಈಗಾಗಲೇ ತಯಾರಿ ನಡೆಸುತ್ತಿದ್ದಾರೆ. ಐಫೋನ್ 18ಕ್ಕೆ ಭಾರತದಲ್ಲಿನ ಬೆಲೆ, ಫೀಚರ್ಸ್, ಕ್ಯಾಮೆರಾ ಸೇರಿದಂತೆ ಹಲವು ಮಾಹಿತಿಗಳು ಲೀಕ್ ಆಗಿದೆ.
25
ಐಫೋನ್ 18ರ ಪ್ರಮುಖ ಬದಲಾವಣೆ
ಬಳಕೆದಾರರಿಗೆ ಸ್ಕ್ರೀನ್ ಸ್ಪೇಸ್ ಹೆಚ್ಚು ಮಾಡಲು ಕೆಲ ಬದಲಾವಣೆ ಮಾಡಲಾಗಿದೆ. ಪ್ರಮುಖವಾಗಿ ಡೈನಾಮಿಕ್ ಐಲ್ಯಾಂಡ್ ಗಾತ್ರವನ್ನು ಗಣನೀಯವಾಗಿ ಕಡಿಮೆ ಮಾಡಲಾಗುತ್ತಿದೆ. ಶೇಕಡಾ 35ರಷ್ಟು ಕಿರಿದು ಮಾಡಿ ಬಳಕೆದಾರರಿಗೆ ಸ್ಕ್ರೀನ್ ಸ್ಪೇಸ್ ಹೆಚ್ಚು ಸಿಗುವಂತೆ ಮಾಡಲಾಗುತ್ತಿದೆ. ಇದರಿಂದ ಯೂಸರ್ ಎಕ್ಸ್‌ಪೀರಿಯೆನ್ಸ್ ಹೆಚ್ಚಿಸಲಾಗುತ್ತದೆ. ಇನ್ನು ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಫ್ಲಾಟ್ ಎಡ್ಜ್ ಫ್ರೇಮ್ ಮುಂದುವರಿಯಲಿದೆ.
35
ಭಾರತದಲ್ಲಿ ಐಫೋನ್ 18 ಬೆಲೆ
ಈಗಾಗಲೇ ಐಫೋನ್ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತದೆ ಎಂದು ಟಿಮ್ ಕುಕ್ ಘೋಷಿಸಿದ್ದಾರೆ. ಇತ್ತ ಆಮದು ಸುಂಕ, ತೆರಿಗೆಯಿಂದ ಭಾರತದಲ್ಲಿ ಐಫೋನ್ 18 ಬೆಲೆ ಕೊಂಚ ದುಬಾರಿಯಾಗಲಿದೆ. ಈ ಹಿಂದಿನ ಐಫೋನ್ 17 ಪ್ರೊ ಭಾರತದಲ್ಲಿ 1,34,900 ರೀಪಾಯಿ ಮತ್ತು ಪ್ರೊ ಮ್ಯಾಕ್ಸ್ 1,49,900 ರೂಪಾಯಿ ಕ್ಕೆ ಬಿಡುಗಡೆಯಾಗಿದ್ದವು. ಪ್ರಸ್ತುತ ಲೀಕ್ ಆಗಿರುವ ಜಾಗತಿಕ ಬೆಲೆ ಏರಿಕೆಯ ಟ್ರೆಂಡ್ ಗಮನಿಸಿದರೆ, ಭಾರತದಲ್ಲಿ ಮುಂಬರುವ ಐಫೋನ್ 18 ಪ್ರೊ ಆರಂಭಿಕ ಬೆಲೆ ಸುಮಾರು 1,45,000 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ 1,60,000 ಬೆಲೆ ಆಸುಪಾಸಿನಲ್ಲಿ ಇರುವ ಸಾಧ್ಯತೆ ಇದೆ.
ಐಫೋನ್ 18 ಪ್ರೊ ಸರಣಿಯಲ್ಲಿ ಬ್ಯಾಟರಿ ಲೈಭ್ ಹೆಚ್ಚಿಸಲಾಗುತ್ತಿದೆ ವಿಶೇಷವಾಗಿ ಐಫೋನ್ 18 ಪ್ರೊ ಮ್ಯಾಕ್ಸ್ ಮಾಡೆಲ್‌ನಲ್ಲಿ 5,100mAh ನಿಂದ 5,200mAh ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ನೀಡುವ ಸಾಧ್ಯತೆಯಿದೆ. ಇದಕ್ಕಾಗಿ ಫೋನಿನ ದಪ್ಪವನ್ನು 8.75mm ನಿಂದ 8.8mm ಗೆ ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗುತ್ತಿದೆ. ಇನ್ನು ಐಫೋನ್ 18 ಪ್ರೊ ಮಾಡೆಲ್ 4,056mAh ನಿಂದ 4,288mAh ಬ್ಯಾಟರಿ ಹೊಂದಿರಲಿದೆ.
55
ಐಫೋನ್ ಕ್ಯಾಮೆರಾ ತಂತ್ರಜ್ಞಾನ
ಕಂಟೆಂಟ್ ಕ್ರಿಯೇಟರ್ಸ್ , ಫೋಟೋ, ವಿಡಿಯೋ ಹೆಚ್ಚಾಗಿ ತೆಗೆಯುವ ಬಳಕೆದಾರರಿಗೆ ಐಫೋನ್ 18 ಉತ್ತಮ ಫೋನ್ ಆಗಲಿದೆ. ಕಾರಣ ವೇರಿಯೆಬಲ್ ಅಪರ್ಚರ್ ಸಿಸ್ಟಮ್ ನೀಡಲಾಗುತ್ತಿದೆ. ಇದರಿಂದ ಐಫೋನ್ 18 ಡಿಎಸ್ಎಲ್ಆರ್ ಕ್ಯಾಮೆರಾ ರೀತಿ ವರ್ತಿಸಲಿದೆ. ಈ ಮೂಲಕ ಯಾವುದೇ ಸಂದರ್ಭದಲ್ಲೂ ಅತ್ಯುತ್ತಮ ಕ್ಲಾರಿಟಿ ಫೋಟೋ, ವಿಡಿಯೋ ಕ್ಯಾಪ್ಚರ್ ನೀಡಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.