ಮನೆಯ ಒಂದು ಭಾಗಕ್ಕೆ ನೆಟ್ವರ್ಕ್ ಬಂದ್ರೆ ಇನ್ನೊಂದು ಜಾಗದಲ್ಲಿ ಬರೋದಿಲ್ಲ. ಬಿಎಸ್ ಎನ್ ಎಲ್ ಗ್ರಾಹಕರ ಈ ದೂರಿಗೆ ಇನ್ಮುಂದೆ ಬ್ರೇಕ್ ಬೀಳಲಿದೆ. ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗೆ ಉಚಿತ ಸೇವೆಯೊಂದನ್ನು ನ್ಯೂ ಇಯರ್ ಗಿಫ್ಟ್ ಆಗಿ ನೀಡ್ತಿದೆ.
2026ರ ಮೊದಲ ದಿನವೇ, ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ ಎನ್ ಎಲ್ (BSNL) ತನ್ನ ಲಕ್ಷಾಂತರ ಗ್ರಾಹಕರಿಗೆ ದೊಡ್ಡ ಗಿಫ್ಟ್ ನೀಡಿದೆ. ಸಿಟಿಯಲ್ಲಿದ್ರೂ ಕೆಲ ಪ್ರದೇಶದಲ್ಲಿ ಸರಿಯಾಗಿ ನೆಟ್ವಕ್ ಬರೋದಿಲ್ಲ. ಸಿಗ್ನಲ್ ಇಲ್ದೆ ಕರೆ ಸ್ವೀಕರಿಸೋದು ಕಷ್ಟ. ಮನೆ, ಆಫೀಸ್ ಗಳಲ್ಲಿ ಸಿಗ್ನಲ್ ಸಮಸ್ಯೆ ಎದುರಿಸುವವರು ಇನ್ಮುಂದೆ ಚಿಂತಿಸಬೇಕಾಗಿಲ್ಲ. ಬಿಎಸ್ಎನ್ ಎಲ್ ನಿಮ್ಮ ಸಮಸ್ಯೆ ಬಗೆಹರಿಸಲು ಈ ಸ್ಪೇಷಲ್ ಸೇವೆ ನೀಡ್ತಿದೆ.
27
ವಾಯ್ಸ್ ಓವರ್ ವೈ-ಫೈ
ಬಿಎಸ್ ಎನ್ ಎಲ್ ದೇಶಾದ್ಯಂತ ವೈ-ಫೈ ಕಾಲಿಂಗ್ ಹೆಸರಿನ ತನ್ನ ವಾಯ್ಸ್ ಓವರ್ ವೈ-ಫೈ (VoWiFi) ಸೇವೆ ಪ್ರಾರಂಭಿಸಿದೆ. ಸಿಮ್ ಸಿಗ್ನಲ್ ಇಲ್ಲದೆಯೂ ಸಹ ನಿಮ್ಮ ವೈ-ಫೈ ಮೂಲಕ ನೀವು ಸ್ಪಷ್ಟ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗುತ್ತದೆ. ಎಲ್ಲ ವಲಯದ ಗ್ರಾಹಕರಿಗೆ ಬಿಎಸ್ ಎನ್ ಎಲ್ ಈ ಸೇವೆ ಲಭ್ಯವಾಗಲಿದೆ. ಸೆಲ್ಯುಲಾರ್ ನೆಟ್ವರ್ಕ್ಗಳು ಲಭ್ಯವಿಲ್ಲದ ಪ್ರದೇಶಗಳಿಗೆ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
37
ಐಎಂಎಸ್ ಆಧಾರಿತ ಸೇವೆ
ಈ ಸೇವೆಯನ್ನು IMS-ಆಧಾರಿತ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ ಎಂದು ಕಂಪನಿ ಹೇಳುತ್ತದೆ. ಇದರಲ್ಲಿ ಮೊಬೈಲ್ ನೆಟ್ವರ್ಕ್ ಮತ್ತು Wi-Fi ಬದಲಾಯಿಸುವುದು ಸುಲಭವಾಗುತ್ತದೆ.
ಬಿಎಸ್ ಎನ್ ಎಲ್ ನೀಡ್ತಿರುವ ಈ ವೈಶಿಷ್ಟ್ಯವನ್ನು ಬಳಸಲು ಬಳಕೆದಾರರಿಗೆ ಯಾವುದೇ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಅಗತ್ಯವಿಲ್. ಇದು ಗ್ರಾಹಕರಿಗೆ ನೇರವಾಗಿ ಲಭ್ಯವಿರುತ್ತದೆ. ಗ್ರಾಹಕರು ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದಿಲ್ಲ. ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು, ನೀವು ನಿಮ್ಮ ಫೋನ್ನ ಸೆಟ್ಟಿಂಗ್ ನಲ್ಲಿ ಕೆಲ ಬದಲಾವಣೆ ಮಾಡ್ಬೇಕಾಗುತ್ತದೆ.
57
ಫೋನ್ ನಲ್ಲಿ ಬದಲಾವಣೆ
ಮೊದಲು, ನಿಮ್ಮ ಫೋನ್ನ ಸೆಟ್ಟಿಂಗ್ ಗೆ ಹೋಗಿ. ಇಲ್ಲಿ, ನೀವು ನೆಟ್ವರ್ಕ್ ಅಥವಾ ಕನೆಕ್ಟಿವಿಟಿ ಎಂಬ ಆಯ್ಕೆಯನ್ನು ಕಾಣಬಹುದು. ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿಂದ, ನೀವು Wi-Fi ಕರೆ ಮಾಡುವಿಕೆಯನ್ನು ಸಕ್ರಿಯಗೊಳಿಸಬಹುದು. ಈ ವೈಶಿಷ್ಟ್ಯವು ಕಾರ್ಯನಿರ್ವಹಿಸಲು ನಿಮ್ಮ ಫೋನ್ Wi-Fi ಗೆ ಸಂಪರ್ಕಗೊಂಡಿರಬೇಕು ಎಂಬುದನ್ನು ನೆನಪಿನಲ್ಲಿಡಿ.
67
ಸ್ಮಾರ್ಟ್ ಸ್ವಿಚ್
ನೀವು ಫೋನ್ ಮಾಡ್ತಿರುವ ಸಂದರ್ಭದಲ್ಲಿ ಒಂದ್ವೇಳೆ ವೈ-ಫೈ ಇಲ್ಲ ಎಂದಾದ್ರೆ ಕಾಲ್ ಕಟ್ ಆಗೋದಿಲ್ಲ. ಸ್ವಯಂಚಾಲಿತವಾಗಿ ಮೊಬೈಲ್ ನೆಟ್ವರ್ಕ್ಗೆ ಇದು ಬದಲಾಗುತ್ತದೆ. ಇದ್ರಿಂದ ನೀವು ಸುಲಭವಾಗಿ ಮಾತು ಮುಂದುವರೆಸಬಹುದು. ವೈಫ್ ನಿಂದ ಮೊಬೈಲ್ ನೆಟ್ವರ್ಕ್ ಗೆ ಸೆಟ್ಟಿಂಗ್ ಬದಲಿಸುವ ಅಗತ್ಯ ಇರೋದಿಲ್ಲ.
77
ಎಲ್ಲ ಕಡೆ ಲಭ್ಯ
ಸಂವಹನ ಸಚಿವಾಲಯದ ಪ್ರಕಾರ, ಬಿಎಸ್ ಎನ್ ಎಲ್ ನ ವಾಯ್ಸ್ ಓವರ್ ವೈ-ಫೈ ಸೇವೆ ಬಹುತೇಕ ಎಲ್ಲಾ ಹೊಸ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಸೆಟ್ಟಿಂಗ್ ನಲ್ಲಿ ವೈಫೈ ಕಾಲ್ ಸೇವೆ ಸಕ್ರಿಯಗೊಳಿಸಲು ನಿಮಗೆ ಕಷ್ಟವಾಗ್ತಿದೆ ಎಂದಾದ್ರೆ ಅಥವಾ ನಿಮ್ಮ ಫೋನ್ ಗೆ ಈ ಸೇವೆ ಲಭ್ಯ ಇದ್ಯಾ ಎಂಬುದನ್ನು ಚೆಕ್ ಮಾಡಲು ಬಯಸಿದ್ರೆ ಹತ್ತಿರದ ಯಾವುದೇ ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು. ಸಹಾಯಕ್ಕಾಗಿ ನೀವು ಮನೆಯಿಂದಲೇ ಬಿಎಸ್ಎನ್ಎಲ್ನ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1800-150-3 ಗೆ ಕರೆ ಮಾಡಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.