ಕೇವಲ 36,000 ರೂಪಾಯಿಗೆ ಐಫೋನ್ 15, ಈ ಆಫರ್ ಜನವರಿ 4ರ ವರೆಗೆ ಮಾತ್ರ

Published : Dec 22, 2025, 03:29 PM IST

ಕೇವಲ 36,000 ರೂಪಾಯಿಗೆ ಐಫೋನ್ 15, ಈ ಆಫರ್ ಜನವರಿ 4ರ ವರೆಗೆ ಮಾತ್ರ, ಭಾರತದಲ್ಲಿ ಐಫೋನ್ ಬೇಡಿಕೆ ಹೆಚ್ಚಾಗುತ್ತಿದೆ. ಕ್ರಿಸ್ಮಸ್, ಹೊಸ ವರ್ಷದ ನಡುವೆ ಇದೀಗ ಭರ್ಜರಿ ಆಫರ್ ನೀಡಲಾಗಿದೆ. ಸೀಮಿತ ಅವಧಿಯ ಆಫರ್ ಆಗಿರುವ ಕಾರಣ ಜನ ಮುಗಿಬಿದ್ದಿದ್ದಾರೆ.

PREV
16
ಅತೀ ದೊಡ್ಡ ಐಫೋನ್ ಆಫರ್

ಭಾರತದಲ್ಲಿ ಐಫೋನ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ಸೀರಿಸ್ ಬಿಡುಗಡೆಯಾದಾಗ, ಹಿಂದಿನ ವರ್ಶನ್ ಫೋನ್ ಮೇಲೆ ಡಿಸ್ಕೌಂಟ್ ನೀಡಲಾಗುತ್ತಿದೆ. ಇನ್ನು ಇ ಕಾಮರ್ಸ್ ಸೇರಿದಂತೆ ಇತರ ಪ್ಲಾಟ್‌ಫಾರ್ಮ್‌ಗಳಲ್ಲೂ ಡಿಸ್ಕೌಂಟ್ ನೀಡಲಾಗುತ್ತಿದೆ. ಆದರೂ ಐಫೋನ್, ಆ್ಯಂಡ್ರಾಯ್ಡ್ ಫೋನ್ ಬೆಲೆಯಲ್ಲಿ ಲಭ್ಯವಾಗಲ್ಲ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ನಡುವೆ ಅತೀ ದೊಡ್ಡ ಆಫರ್ ನೀಡಲಾಗಿದೆ.

26
ಕ್ರೋಮಾ ಆಫರ್, ಕೆಲವೇ ದಿನ ಮಾತ್ರ

ಈ ಭಾರಿ ಡಿಸ್ಕೌಂಟ್ ಆಫರ್‌ನ್ನು ಕ್ರೋಮಾ ಘೋಷಿಸಿದೆ. ಕ್ರೋಮಾ ಮೂಕ ಐಫೋನ್ 15 ಖರೀದಿಸಿದರೆ ಕನಿಷ್ಠ 36,000 ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಐಫೋನ್ ಬೆಲೆಗಳ ಪೈಕಿ ಕೈಗೆಟುಕುವ ದರವಾಗಿದೆ. ಐಫೋನ್ 15 (128ಜಿಬಿ) ಫೋನ್ ಆರಂಭಿಕ ಬೆಲೆ 79,000 ರೂಪಾಯಿ.

36
ಜನವರಿ 4ರ ವರೆಗೆ ಕ್ರೋಮಾ ಆಫರ್

ಕ್ರೋಮಾ ಐಫೋನ್ ಮೇಲೆ ಸೀಮಿತ ಅವಧಿಯ ಆಫರ್ ನೀಡಿದೆ. ಜನವರಿ 4ರ ವರೆಗೆ ಐಫೋನ್ 15 ಬುಕಿಂಗ್ ಮಾಡುವ ಗ್ರಾಹಕರು ಈ ಆಫರ್ ಆ್ಯಕ್ಟಿವೇಟ್ ಮಾಡಿ ಕಡಿಮೆ ಬೆಲೆಯಲ್ಲಿ ಐಫೋನ್ ಖರೀದಿಸಲು ಸಾಧ್ಯವಿದೆ. ಇದರಲ್ಲಿ ಫ್ಲ್ಯಾಟ್ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್, ಬ್ಯಾಂಕ್ ಆಫರ್‌ಗಳು ಸೇರಿದೆ.

46
ಕ್ರೋಮಾ 36,000 ರೂಪಾಯಿಗೆ ಐಫೋನ್ ಆಫರ್ ವಿವರ

ಕ್ರೋಮಾ ಮೂಲಕ ಐಫೋನ್ 15 ಖರೀದಿಸುವ ಗ್ರಾಹಕರು ಈ ಆಫರ್ ಪಡೆಯಬಹುದು. ಐಫೋನ್ 15( 128 ಜಿಬಿ) ಫೋನ್ ಬೆಲೆ 79,000 ರೂಪಾಯಿ. ಕ್ರೋಮಾ ಪ್ರಮೋಶನ್ ಆಫರ್‌ನಲ್ಲಿ ಬೇಸ್ ಮಾಡೆಲ್‌ನ್ನು ಡಿಸ್ಕೌಂಟ್ ಮಾಡಿ 57,990 ರೂಪಾಯಿಗೆ ನೀಡಲಾಗಿದೆ. ಇದರ ಜೊತೆಗೆ ಹಳೇ ಸ್ಮಾರ್ಟ್‌ಫೋನ್ ಎಕ್ಸ್‌ಜೇಂಜ್ ಮಾಡಿದರೆ ಗರಿಷ್ಠ 14,000 ರೂಪಾಯಿ (ಫೋನ್ ಗುಣಮಟ್ಟ ಅನ್ವಯ) ನೀಡಲಾಗುತ್ತದೆ. ಇದರ ಜೊತೆಗೆ ಎಕ್ಸ್‌ಚೇಂಜ್ ಬೋನಸ್ 4,000 ರೂಪಾಯಿ ಸೇರಿಕೊಳ್ಳಲಿದೆ. ಈ ಎಲ್ಲಾ ಆಫರ್ ಪಡೆದುಕೊಂಡರೆ 36,490 ರೂಪಾಯಿಗೆ ಐಫೋನ್ 15 ಲಭ್ಯವಾಗಲಿದೆ.

56
ನೋ ಕಾಸ್ಟ್ ಇಎಂಐ

ಇದೇ ವೇಳೆ ಕ್ರೋಮಾ ನೋ ಕಾಸ್ಟ್ ಇಎಂಐ ಆಫರ್ ಕೂಡ ನೀಡುತ್ತಿದೆ. ಕಂತುಗಳ ಮೂಲಕ ಐಫೋನ್ ಖರೀದಿಸಿದರೂ ಹೆಚ್ಚಿಗೆ ಯಾವುದೇ ಮೊತ್ತ ಪಾವತಿಬೇಕಿಲ್ಲ. ನಿರ್ದಿಷ್ಟ ತಿಂಗಳ ಕಾಲ ಕ್ರೋಮಾ ಇಎಂಐ ಆಫರ್ ಕೂಡ ನೀಡಿದೆ. ಈ ಮೂಲಕ ಅತೀ ಕಡಿಮೆ ಬೆಲೆಯಲ್ಲಿ ಐಫೋನ್ ಲಭ್ಯವಾಗುತ್ತಿದೆ.

ನೋ ಕಾಸ್ಟ್ ಇಎಂಐ

66
ಐಫೋನ್ 15

ಐಫೋನ್ 15‌ನಲ್ಲಿ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಹೊಂದಿದೆ. ಆ್ಯಪಲ್ ಎ16 ಬಯೋನಿಕ್ ಚಿಪ್, 48ಎಂಪಿ ಕ್ಯಾಮೆರಾ, 12ಎಂಪಿ ಅಲ್ಟ್ರಾ ವೈಡ್ ಲೆನ್ಸ್, 12ಎಂಪಿ ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಈ ಮೂಲಕ ಫೋಟೋ ಹಾಗೂ ವಿಡಿಯೋ ಕ್ವಾಲಿಟಿ ಉತ್ತಮವಾಗಿ ಮೂಡಿ ಬರಲಿದೆ. ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಸೇರಿದಂತೆ ಕ್ಯೂಐ2 ವೈಯರ್‌ಲೆಸ್ ಚಾರ್ಜಿಂಗ್ ಹೊಂದಿದೆ.

ಐಫೋನ್ 15

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories