ಭಾರತದಲ್ಲಿ ನಾಳೆಯಿಂದ ಐಫೋನ್ 17 ಮಾರಾಟ ಆರಂಭ,ಭರ್ಜರಿ ಡಿಸ್ಕೌಂಟ್ ಆಫರ್, ಎಲ್ಲಾ ಆ್ಯಪಲ್ ಸ್ಟೋರ್‌ನಲ್ಲಿ ಲಭ್ಯವಿದೆ. ರಿಟೇಲ್ ಔಟ್‌ಲೆಟ್, ಇ ಕಾಮರ್ಸ್ ಮೂಲಕವೂ ಫೋನ್ ಖರೀದಿಗೆ ಲಭ್ಯವಿದೆ.
ಆ್ಯಪಲ್ ಈಗಾಗಲೇ ಐಫೋನ್ 17 ಲಾಂಚ್ ಮಾಡಿದೆ. ಭಾರತದಲ್ಲಿ ನಾಳೆಯಿಂದ (ಸೆ.19) ಹೊಸ ಐಫೋನ್ 17 ಅಧಿಕೃತ ಮಾರಾಟ ಆರಂಭಗೊಳ್ಳುತ್ತಿದೆ. ಆ್ಯಪಲ್ ಸ್ಟೋರ್, ರಿಟೇಲ್ ಶಾಪ್, ಇ ಕಾಮರ್ಸ್ ಮೂಲಕ ಆ್ಯಪಲ್ 17 ಖರೀದಿಸಲು ಸಾಧ್ಯವಿದೆ. ಐಫೋನ್ 17, ಐಫೋನ್ 17 ಪ್ರೋ, ಐಫೋನ್ 17 ಪ್ರೋ ಮ್ಯಾಕ್ಸ್, ಐಫೋನ್ ಏರ್ ಫೋನ್‌ಗಳು ನಾಳೆಯಿಂದ ಲಭ್ಯವಿದೆ.
25
ಐಫೋನ್ 17ಗೆ ಭರ್ಜರಿ ಆಫರ್ ಘೋಷಿಸಿದ ಆ್ಯಪಲ್
ಐಫೋನ್ 17ಗೆ ಭರ್ಜರಿ ಆಫರ್ ಘೋಷಿಸಿದ ಆ್ಯಪಲ್
ಆ್ಯಪಲ್ ವೆಬ್‌ಸೈಟ್ ಮೂಲಕ ಐಫೋನ್ 17 ಖರೀದಿಸುವ ಗ್ರಾಹಕರಿಗೆ ಕೆಲ ಆಫರ್ ನೀಡಲಾಗಿದೆ. ಕ್ಯಾಶ್‌ಬ್ಯಾಕ್ ಆಫರ್, ನೋ ಕಾಸ್ಟ್ ಇಎಂಐ, ಎಕ್ಸ್‌ಚೇಂಜ್ , ಕ್ರೆಡಿಟ್ ಆಫರ್ ನೀಡಲಾಗಿದೆ.
35
ಯಾವೆಲ್ಲಾ ಆಫರ್ ಘೋಷಣೆ?
ಯಾವೆಲ್ಲಾ ಆಫರ್ ಘೋಷಣೆ?
ಐಫೋನ್ 17 ಖರೀದಿಸವು ಗ್ರಾಹಕರಿಗೆ ಪ್ರಮುಖ ಬ್ಯಾಂಕ್‌ಗಳಿಂದ ನೋ ಕಾಸ್ಟ್ ಇಎಂಐ ಸೌಲಭ್ಯ ನೀಡುತ್ತಿದೆ.
10,000 ರೂಪಾಯಿ ವರೆಗೆ ಇನ್‌ಸ್ಟ್ಯಾಂಟ್ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. ಅಮೆರಿಕನ್ ಎಕ್ಸ್‌ಪ್ರೆಸ್, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಐಸಿಸಿ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಈ ಆಫರ್ ಅನ್ವಯವಾಗಲಿದೆ.
ಐಫೋನ್ ಏರ್ ಫೋನ್ 19,150 ರೂಪಾಯಿ ತಿಂಗಳಿಗೆ ಜೊತೆಗೆ ಇನ್‌ಸ್ಟಾಂಗ್ ಕ್ಯಾಶ್‌ಬ್ಯಾಕ್ ಆರ್ ಹಾಗೂ ನೋ ಕಾಸ್ಟ್ ಇಎಂಐ ಅಥವಾ 1,19,900 ರೂಪಾಯಿ ಆಫರ್.
ಐಫೋನ್ 17 ತಿಂಗಳಿಗೆ 12,983 ರೂಪಾಯಿ ಜೊತೆಗೆ ಇನ್‌ಸ್ಟಾಂಟ್ ಕ್ಯಾಶ್‌ಬ್ಯಾಕ್ ಆಫರ್ ಹಾಗೂ ನೋ ಕಾಸ್ಟ್ ಇಎಂಐ ಅಥವಾ 82,900 ಆಫರ್.
ಆ್ಯಪಲ್ ಟ್ರೇಡ್ ಮೂಲಕ ಗರಿಷ್ಠ 64,000 ರೂಪಾಯಿ ಉಳಿತಾಯ ಮಾಡಬಹುದು. ಎಕ್ಸ್‌ಚೇಂಜರ್ ಮೂಲಕ ಈ ಉಳಿತಾಯ ಮಾಡಿಕೊಳ್ಳಬಹುದು.
ಕ್ರೋಮಾ ಈಗಾಗಲೇ ಫ್ಲ್ಯಾಟ್ 6,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಆಫ್‌ಲೈನ್ ಹಾಗೂ ಆನಲೈನ್ ಎರಡಲ್ಲೂ ಲಭ್ಯವಿದೆ.
55
ಐಫೋನ್ 17ಗೆ ಭರ್ಜರಿ ಸ್ಪಂದನೆ
ಐಫೋನ್ 17ಗೆ ಭರ್ಜರಿ ಸ್ಪಂದನೆ
ಗ್ರಾಹಕರು ಖರೀದಿಗೆ ಮುಗಿ ಬೀಳುತ್ತಿರುವ ಕಾರಣ ಐಫೋನ್ 17 ಉತ್ಪಾದನೆಯಲ್ಲೂ ಮುತುವರ್ಜಿ ವಹಿಸಲಾಗಿದೆ. ಉತ್ಪಾದನೆ ವೇಗ ಹೆಚ್ಚಿಸಲಾಗಿದೆ. ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ ಐಫೋನ್ 17 ಲಭ್ಯವಿರುವಂತೆ ನೋಡಿಕೊಳ್ಳಲಾಗಿದೆ. ಕಳೆದ ವರ್ಷ ಐಫೋನ್ 16ಗೆ ಸಿಕ್ಕ ಸ್ಪಂದನೆಗಿಂತ ಈ ಬಾರಿ ಐಫೋನ್ 17ಗೆ ಸಿಕ್ಕಿರುವ ಸ್ಪಂದನೆ ಹೆಚ್ಚಾಗಿದೆ. ಈ ಬಾರಿಯೂ ಐಫೋನ್ ಭಾರತದಲ್ಲಿ ದಾಖಲೆಯ ಮಾರಾಟ ಕಾಣುವ ಸಾಧ್ಯತೆ ದಟ್ಟವಾಗಿದೆ.