ಒಂದು ಲಕ್ಷದ iPhone ಈಗ ₹49161 ಗೆ ಲಭ್ಯ.. ಖರೀದಿಸುವ ಮುನ್ನ ಈ ನಿಯಮ ತಿಳಿದುಕೊಳ್ಳಿ

Published : Oct 14, 2026, 06:02 PM IST

iPhone 18 ಪ್ರೋ ಸರಣಿ ಬರುತ್ತಿದೆ. 17 ಬೆಲೆ ಕಡಿಮೆ ಆಗಲಿದೆ ಅಂದ್ಕೊಂಡವ್ರಿಗೆ Apple ಬಿಗ್ ಶಾಕ್ ನೀಡಿತ್ತು. 18 ಬಿಡುಗಡೆ ಬೆನ್ನಲ್ಲೇ 17 ಬೆಲೆಯನ್ನು ಒಂದು ಲಕ್ಷ ರೂಪಾಯಿಗೆ ಏರಿಕೆ ಮಾಡಿತ್ತು. ಆದರೆ ಇದೀಗ ನೀವು ಅದೇ 17 ಫೋನ್ ಅನ್ನು 49161 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

PREV
14
ಷರತ್ತು ಅನ್ವಯ

ಅಂದ್ಹಾಗೆ ಕಂಪನಿ ಅಧಿಕೃತವಾಗಿ 17 ಬೆಲೆಯನ್ನು ಕಡಿತ ಮಾಡಿಲ್ಲ. ಐಫೋನ್ 17 256 ಸ್ಟೋರೇಜ್‌ನ ಆಪಲ್ ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ಆಫರ್ ಮೂಲಕ ಖರೀದಿ ಮಾಡಬಹುದು. ಈ ಬೆಲೆಗೆ ನೀವು ಫೋನ್ ಖರೀದಿಸುತ್ತೀರಿ ಎಂದರೆ ನಿಮಗೆ ಕೆಲವು ಷರತ್ತುಗಳು ಇವೆ. ಹಳೆ ಫೋನ್ ವಿನಿಮಯ ಹಾಗೂ ಬ್ಯಾಂಕ್ ಕೊಡುಗೆ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

24
ಐಫೋನ್ 15 ಎಕ್ಸ್‌ಚೇಂಜ್ ಮಾಡಿಕೊಂಡ್ರೆ 34250 ರೂಪಾಯಿ

17 ಬೆಲೆಗೆ ಪ್ರಸ್ತುತ ಅಧಿೃತ ಮಾರಾಟದ ಬೆಲೆ 99,900 ರೂಪಾಯಿ. ಬಿಗ್ ಬಿಲಿಯನ್ಸ್ ಡೇ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್ 86,999 ರೂಪಾಯಿಗೆ ಪಟ್ಟಿ ಮಾಡಿದೆ. ಅದನ್ನ 49161 ರೂಪಾಯಿಗೆ ನೀವು ಖರೀದಿಸಬೇಕು ಅಂದರೆ..ನೀವು ನಿಮ್ಮ ಹಳೆಯ ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬೇಕು. ಜೊತೆಗೆ ಬ್ಯಾಂಕ್ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬೇಕು. ಫ್ಲಿಪ್‌ಕಾರ್ಟ್ ಆಪಲ್ 15ಕ್ಕೆ ಗರಿಷ್ಟ 34250 ರೂಪಾಯಿ ಬೆಲೆ ನೀಡಿದೆ. ಹೆಚ್ಚುವರಿಯಾಗಿ ಆಕ್ಸಿಸ್ ಕಾರ್ಡ್‌ ಬಳಸಿ ಪಾವತಿ ಮಾಡಿದರೆ ಹೆಚ್ಚುವರಿಯಾಗಿ 3588 ರೂಪಾಯಿ ರಿಯಾಯತಿ ಸಿಗಲಿದೆ. ಈ ಎರಡು ಕೊಡುಗೆಗಳನ್ನ ಪಡೆದುಕೊಂಡು ಐಫೋನ್ 17 ಅನ್ನು 49161 ಖರೀದಿಸಬಹುದು.

ಒಂದು ವೇಳೆ ನಿಮ್ಮ ಬಳಿ ಹಳೆಯ ಐಫೋನ್ ಇಲ್ಲದಿದ್ದರೆ, ಬ್ಯಾಂಕ್ ಕಾರ್ಡ್‌ ಇಲ್ಲದಿದ್ದರೆ ಈ ಆಫರ್‍‌ನಿಂದ ವಂಚಿತರಾಗುತ್ತೀರಿ. ಅಲ್ಲದೇ ಐಫೋನ್ 17 ಖರೀದಿ ಮಾಡಬೇಕು ಅಂದರೆ ಅಷ್ಟೂ ಹಣವನ್ನು ನೀಡಿ ಖರೀದಿ ಮಾಡಬೇಕಾಗುತ್ತದೆ.

34
ಐಫೋನ್ 17 ವಿಶೇಷತೆ
  • ಐಫೋನ್ 17 6.3-ಇಂಚಿನ OLED ಡಿಸ್‌ಪ್ಲೇ
  • ಆಪಲ್‌ನ A19 ಚಿಪ್‌ನಿಂದ ಚಾಲಿತ
  • ದೈನಂದಿನ ಕೆಲಸಗಳು, ಗೇಮಿಂಗ್
  • ಫೋಟೋ ಮತ್ತು ವಿಡಿಯೋ ಎಡಿಟಿಂಗ್‌ಗಾಗಿ ಡಿಸೈನ್
  • ಫೋನ್ 2 48MP ಬ್ಯಾಕ್ ಕ್ಯಾಮೆರಾ
  • ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 18MP ಫ್ರಂಟ್ ಕ್ಯಾಮೆರಾ ಲಭ್ಯ
  • 5G ಸಂಪರ್ಕ ಮತ್ತು ಫೇಸ್ ಐಡಿ
  • 256GB ಸ್ಟೋರೇಜ್
44
ಫೋನ್ ಖರೀದಿಸಲು ಯೋಗ್ಯವೇ?

ಒಂದು ಕ್ಷಣ ರಿಯಾಯಿತಿ ನೋಡಿ ಖರೀದಿಸುವುದು ಒಳ್ಳೆಯದಲ್ಲ. ಆದರೆ ನಿಮ್ಮ ಬಳಿ ಹಳೆಯ ಫೋನ್ ಹಾಗೂ ಬ್ಯಾಂಕ್ ಕಾರ್ಡ್ ಹೊಂದಿದ್ದರೆ ಈಗಿರುವ ಬೆಲೆಗೆ ಖರೀದಿಸೋದ್ರಿಂದ ನಿಮಗೆ ಪ್ರಯೋಜನ ಆಗಬಹುದು. ಆದರೆ ನಿಮ್ಮ ಬಳಿ ಹಳೆಯ ಫೋನ್ ಇಲ್ಲ, ಕಾರ್ಡ್ ಇಲ್ಲ ಎಂದಾಗ ಸ್ವಲ್ಪ ವಿಚಾರಿಸಿ. ಮುಂದೊಂದು ದಿನ ಇನ್ನೂ ಕಡಿಮೆಗೆ ಸಿಕ್ಕರೂ ಸಿಗಬಹುದು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories