ಕಂಟೆಂಟ್ ಕ್ರಿಯೇಟರ್ಸ್‌ ಮೂಲಕ ಆದಾಯಗಳಿಸಲು ಇಲ್ಲಿದೆ 30 ಸಾವಿರ ರೂ ಒಳಗಿನ ಉತ್ತಮ ಕ್ಯಾಮೆರಾ ಫೋನ್

Published : Jul 05, 2026, 08:17 PM IST

ಯೂಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ಸ್ ಆಗಿ ಆದಾಯಗಳಿಸಲು 30 ಸಾವಿರ ರೂ ಒಳಗಿನ ಉತ್ತಮ ಕ್ಯಾಮೆರಾ ಫೋನ್ ಲಿಸ್ಟ್ ಇಲ್ಲಿದೆ.

PREV
15
ಕಂಟೆಂಟ್ ಕ್ರಿಯೇಟರ್ಸ್‌ಗಾಗಿ ಕ್ಯಾಮೆರಾ ಫೋನ್

ಡಿಜಿಟಲ್ ಕಂಟೆಂಟ್ ಕ್ರಿಯೇಶನ್ ಇದೀಗ ಹವ್ಯಾಸವಾಗಿ, ಪಾರ್ಟ್ ಟೈಮ್ ಆಗಿ ಉಳಿದಿಲ್ಲ. ಭಾರತದಲ್ಲಿ ಪ್ರಮುಖ ವೃತ್ತಿಯಾಗಿ ಕಂಟೆಂಟ್ ಕ್ರಿಯೇಶನ್ ಬೆಳೆದು ನಿಂತಿದೆ. ಯೂಟ್ಯೂಬ್ ವಿಡಿಯೋ, ಶಾರ್ಟ್ಸ್, ಫೇಸ್‌ಬುಕ್ ವಿಡಿಯೋ, ರೀಲ್ಸ್, ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಆದಾಯಗಳಿಸುತ್ತಿದ್ದಾರೆ. ಹಲವರು ಹೀಗೆ ಕಂಟೆಂಟ್ ಕ್ರಿಯೇಶನ್ ಮೂಲಕ ಆದಾಯಗಳಿಸಲು ಆರಂಭಿಕ ಹೆಜ್ಜೆ ಇಡುತ್ತಿದ್ದರೆ, ಸಣ್ಣ ಬಜೆಟ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾ ಫೋನ್ ವಿವರ ಇಲ್ಲಿದೆ.

25
ಮೊಟೊರೊಲಾ ಎಡ್ಜ್ 70 ಫ್ಯೂಷನ್

ಬಜೆಟ್ ಫ್ಲೆಂಡ್ಲಿ ಮೊಟೊರೋಲಾ ಎಡ್ಜ್ 70 ಫೋನ್ ವಿಶೇಷವಾಗಿ 50ಎಂಪಿ ಕ್ಯಾಮೆರಾ ಹೊಂದಿದೆ. ಆಪ್ಟಿಕಲ್ ಇಮೇಜ್ ಸ್ಟೆಬಿಲೈಶೇನ್(OIS) ತಂತ್ರಜ್ಞಾನದಿಂದ ಅತ್ಯುತ್ತಮ ಗುಣಮಟ್ಟದ ವಿಡಿಯೋ ಹಾಗೂ ಫೋಟೋ ತೆಗೆಯಲು ಸಾಧ್ಯ. ಇದರಿಂದ ಕ್ಯಾಮೆರಾ ಅಲುಗಾಡಿದರೂ ವಿಡಿಯೋ ಹಾಗೂ ಫೋಟೋದ ಗುಣಮಟ್ಟ ಕಡಿಮೆಯಾಗುವುದಿಲ್ಲ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ. ಇನ್ನು ವಿಡಿಯೋ ಎಡಿಟಿಂಗ್ ಮಾಡಲು ಈ ಫೋನ್ ಬೆಂಬಲ ನೀಡುತ್ತದೆ.

35
ಸ್ಯಾಮ್‌ಸಂಗ್ ಗ್ಯಾಲಕ್ಸಿ F56

ಸ್ಯಾಮ್‌ಸಂಗ್ ಇತ್ತೀಚೆಗೆ ಬಿಡುಗಡೆ ಮಾಡುತ್ತಿರುವ ಫೋನ್‌ಗಳು ಎಐ ತಂತ್ರಜ್ಞಾನ ಸೇರಿದಂತೆ ಅತ್ಯುತ್ತಮ ಕ್ಯಾಮೆರಾ ಲೆನ್ಸ್ ನೀಡುತ್ತಿದೆ. ಕಡಿಮೆ ಬೆಳೆಕು, ಅಥವಾ ರಾತ್ರಿ ವೇಳೆ ಫೋಟೋ, ವಿಡಿಯೋ ಚಿತ್ರೀಕರಿಸಲು ಇದರಲ್ಲಿ ನೈಟೋಗ್ರಫಿ ಫೀಚರ್ ನೀಡಲಾಗಿದೆ. ಸೂಪರ್ AMOLED ಡಿಸ್‌ಪ್ಲೇ, ಸುದೀರ್ಘ ಬಾಳಿಕೆಯ ಬ್ಯಾಟರಿ ನೀಡಲಾಗಿದೆ. ಹೀಗಾಗಿ ಹೆಚ್ಚು ಸಮಯ ಶೂಟ್ ಮಾಡಿ, ಎಡಿಟ್ ಮಾಡಿ ಹಾಕುವಾಗ ಸಮಯ ತೆಗೆದುಕೊಂಡರೂ ಬ್ಯಾಟರಿ ಚಿಂತೆ ಇರುವುದಿಲ್ಲ.

45
ಒನ್‌ಪ್ಲಸ್ ಹಾಗೂ ರಿಯಲ್ ಮಿ ಫೋನ್

ಒನ್‌ಪ್ಲಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ನಾರ್ಡ್ ಸೀರಿಸ್ ಹಾಗೂ ರಿಯಲ್ ಮಿಯ ಪ್ರೋ ಸೀರಿಸ್ ಫೋನ್‌ಗಳು ಉತ್ತಮ ಕ್ವಾಲಿಟಿ ಕ್ಯಾಮೆರಾ ಲೆನ್ಸ್ ನೀಡಿದೆ. 50ಎಂಪಿ ಕ್ಯಾಮೆರಾ ಕ್ವಾಲಿಟಿ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯಲಿದೆ. ವಿಶೇಷ ಅಂದರೆ ಸಿನಿಮ್ಯಾಟಿಕ್ ಫಿಲ್ಟರ್ ನೀಡಲಾಗಿದೆ. ಹೀಗಾಗಿ ಸೆರೆಹಿಡಿಯುವ ದೃಶ್ಯಗಳನ್ನು ಸಿನಿಮ್ಯಾಟಿಕ್ ಫೀಲ್ ಮೂಲಕ ತೆಗೆಯಲು ಸಾಧ್ಯ. ರೀಲ್ಸ್, ವಿಡಿಯೋ ನೇರವಾಗಿ ಅಪ್ಲೋಡ್ ಮಾಡಲು ನೆರವು ನೀಡುತ್ತದೆ.

55
ನಂಥಿಂಗ್ ಫೋನ್ 3a ಪ್ರೋ

ನಂಥಿಂಗ್ ಬಿಡುಗಡೆ ಮಾಡಿರುವ 3ಎ ಪ್ರೋ ಫೋನ್ ಟ್ರಿಪಲ್ ಕ್ಯಾಮೆರಾ ಹೊಂದಿದೆ. 50 ಎಂಪಿ ಕ್ಯಾಮೆರಾ, 50ಎಂಪಿ ಟೆಲಿಸ್ಕೋಪಿಕ್ ಕ್ಯಾಮೆರಾ, 8ಎಂಪಿ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ ನೀಡಲಾಗಿದೆ. ಜೊತೆಗೆ 12GB RAM ಹಾಗೂ 256GB ಸ್ಟೋರೇಜ್ ನೀಡಲಾಗಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories