ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಅಧಿಕ ಫೀಚರ್‌ಗಳನ್ನು ಹೊಂದಿರುವ ನಾಲ್ಕು ಅತ್ಯುತ್ತಮ ಫೋನ್‌ಗಳ ಮಾಹಿತಿ ನೀಡಲಾಗಿದೆ. ಈ ಫೋನ್‌ಗಳು ದೈತ್ಯ ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಬಲಿಷ್ಠ ಪ್ರೊಸೆಸರ್‌ಗಳನ್ನು ಒಳಗೊಂಡಿವೆ.
ಹೊಸ ಮೊಬೈಲ್ ಖರೀದಿ ಮಾಡಬೇಕಿದ್ರೆ ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ. ಇಂದು ನಾವು ನಿಮಗೆ ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಮಾಹಿತಿಕ ಹೇಳುತ್ತಿದ್ದೇವೆ.
25
ಒಪ್ಪೋ ಕೆ14 - Oppo K14
7,000mAh ಬ್ಯಾಟರಿ ಹೊಂದಿರುವ ಒಪ್ಪೋ ಕೆ14 ಸ್ಮಾರ್ಟ್‌ಫೋನ್, 6.75-ಇಂಚಿನ ಡಿಸ್ಪ್ಲೇ ಹೊಂದಿದೆ. ಡೈಮೆನ್ಸಿಟಿ 6300 ಚಿಪ್‌ಸೆಟ್, ಪ್ರೈಮರಿ ಕ್ಯಾಮೆರಾ 50MP ಮತ್ತು ಸೆಲ್ಫಿ ಕ್ಯಾಮೆರಾ 8MP ಹೊಂದಿದೆ. 7,000mAh ಬ್ಯಾಟರಿ ಹೊಂದಿರುವ ಕಾರಣ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ. ಹಾಗೆಯೇ 6.75-ಇಂಚಿನ ಡಿಸ್ಪ್ಲೇ ಇದ್ದು, ಫ್ಲಿಪ್‌ಕಾರ್ಟ್‌ನಲ್ಲಿ ₹19,999ಗೆ ಸಿಗುತ್ತದೆ.
35
ವಿವೋ ಟಿ5ಎಕ್ಸ್ 5ಜಿ- Vivo T5x 5G
Vivo ಫೋನ್ 6.76-ಇಂಚಿನ ಡಿಸ್ಪ್ಲೇ ಹೊಂದಿದ್ದು, ಅದ್ಭುತ ವಿಡಿಯೋ ಅನುಭವ ಬಳಕೆದಾರರಿಗೆ ಸಿಗಲಿದೆ. ಈ 5ಜಿ ಸ್ಮಾರ್ಟ್‌ಫೋನ್ ಡೈಮೆನ್ಸಿಟಿ 7400-ಟರ್ಬೊ ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇನ್ನು 7200mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ, 50MP+2MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು ಸೆಲ್ಫಿಗಾಗಿ 32MP ಕ್ಯಾಮೆರಾ ಹೊಂದಿದೆ. ಈ 5ಜಿ ಸ್ಮಾರ್ಟ್‌ಫೋನ್ ನಿಮಗೆ ಅಮೆಜಾನ್‌ನಲ್ಲಿ 18,999 ರೂಪಾಯಿಗೆ ಲಭ್ಯವಾಗುತ್ತದೆ.
6.7-ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿರುವ Samsung Galaxy A17, ಪ್ರೈಮರಿ (ಬ್ಯಾಕ್) 50MP + 5MP + 2MP ಟ್ರಿಪಲ್ ಕ್ಯಾಮೆರಾ ಸೆಟಪ್ ಮತ್ತು ಮುಂಭಾಗದ 13MP ಸೆನ್ಸಾರ್ ಕ್ಯಾಮೆರಾ ಒಳಗೊಂಡಿದೆ. Exynos 1330 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ 19,499 ರೂಪಾಯಿಗೆ ಸಿಗುತ್ತದೆ. ಆನ್‌ಲೈನ್‌ನಲ್ಲಿ ಕ್ಯಾಶ್‌ಬ್ಯಾಕ್, ಡಿಸ್ಕೌಂಟ್ ಸೇರಿದಂತೆ ಹಲವು ಆಫರ್‌ಗಳು ಸಿಗುತ್ತವೆ.
55
ಮೊಟೊರೊಲಾ ಜಿ96- Motorola G96
6.67-ಇಂಚಿನ 3D ಕರ್ವ್ಡ್ pOLED ಡಿಸ್ಪ್ಲೇಯನ್ನು ಹೊಂದಿರುವ ಮೊಟೊರೊಲಾ ಜಿ96, 144Hz ರಿಫ್ರೆಶ್ ರೇಟ್ ಸಪೋರ್ಟ್ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 7s 2 ನೇ ಜನರೇಷನ್ ಪ್ರೊಸೆಸರ್, ಪ್ರೈಮರಿ ಕ್ಯಾಮೆರಾ ಸೆಗ್ಮೆಂಟ್-ಬೆಸ್ಟ್ 50MP ಸೋನಿ ಸೆನ್ಸರ್ ಇದೆ. ಇದು 5500mAh ಬ್ಯಾಟರಿ ಹೊಂದಿದ್ದು, ಅಮೆಜಾನ್‌ನಲ್ಲಿ ₹18,850 ಗೆ ಸಿಗಲಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.