ಆ್ಯಂಡ್ರಾಯ್ಡ್ ಅಥವಾ ಐಫೋನ್ ಯಾವುದು ಹೆಚ್ಚು ಸುರಕ್ಷಿತ? ಗೂಗಲ್-YouGov ಸರ್ವೆ ವರದಿ

Published : Nov 04, 2025, 04:38 PM IST

ಆ್ಯಂಡ್ರಾಯ್ಡ್ ಅಥವಾ ಐಫೋನ್ ಯಾವುದು ಹೆಚ್ಚು ಸುರಕ್ಷಿತ? ಗೂಗಲ್-YouGov ಸರ್ವೆ ವರದಿ, ಬಹುತೇಕರು ಐಫೋನ್ ದುಬಾರಿಯಾದರೂ ಸುರಕ್ಷತೆ ಹಾಗೂ ಗಣಮಟ್ಟದ ಕಾರಣದಿಂದ ಖರೀದಿಸುತ್ತಾರೆ. ಆದರೆ ಅಧ್ಯಯನ ವರದಿಯಲ್ಲಿ ಅಚ್ಚರಿ ಮಾಹಿತಿ ಹೊರಬಂದಿದೆ.

PREV
16
ಐಫೋನ್ ಅಥವಾ ಆ್ಯಂಡ್ರಾಯ್ಡ್?

ಫೋನ್ ಬಳಸುತ್ತಿರುವ ಬಹುತೇಕರು ಸ್ಮಾರ್ಟ್‌ಫೋನ್ ಬಳಸುತ್ತಾರೆ. ಇದು ಅನಿವಾರ್ಯವೂ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಆ್ಯಂಡ್ರಾಯ್ಡ್ ಫೋನ್ ಹಾಗೂ ಐಫೋನ್ ಕುರಿತು ಸಾಕಷ್ಟು ಚರ್ಚೆಗಳಿವೆ. ಹಲವರು ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಐಫೋನ್ ದುಬಾರಿಯಾದರೂ ಹೆಚ್ಚು ಸುರಕ್ಷಿತ ಅನ್ನೋ ಮಾತಿದೆ. ಇತ್ತ ಆ್ಯಂಡ್ರಾಯ್ಡ್ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕಾರಣ ಸರಕ್ಷತೆ ಅಷ್ಟಕಷ್ಟೆ ಎಂದು ಹೇಳಲಾಗುತ್ತದೆ.

26
ಗೂಗಲ್-YouGov ಸರ್ವೆ ವರದಿ

ಗೂಗಲ್ ಹಾಗೂ ಯೂ ಗವರ್ನಮೆಂಟ್ ಫೋನ್ ಸುರಕ್ಷತೆ ಕುರಿತು ಸರ್ವೆ ನಡೆಸಿದೆ. ಭಾರತ, ಅಮೆರಿಕ ಹಾಗೂ ಬ್ರೆಜಿಲ್ ದೇಶದಲ್ಲಿ ಈ ಸರ್ವೆ ಮಾಡಲಾಗಿದೆ. ಕಾರಣ ಈ ಮೂರು ದೇಶದಲ್ಲಿ ಅತೀ ಹಚ್ಚು ಫೋನ್ ಬಳಕೆದಾರರಿದ್ದಾರೆ. 5,000 ಫೋನ್ ಬಳಕೆದಾರರನ್ನು ಈ ಸಮೀಕ್ಷೆಯಲ್ಲಿ ಸಂದರ್ಶಿಸಿ ಅಧ್ಯಯನ ವರದಿ ತಯಾರಿಸಲಾಗಿದೆ.

36
ಅಧ್ಯಯನ ವರದಿ ಪ್ರಕಾರ ಆ್ಯಂಡ್ರಾಯ್ಡ್ ಹೆಚ್ಚು ಸೇಫ್

ಈ ಮಹತ್ವದ ಅಧ್ಯಯನ ವರದಿ ಪ್ರಕಾರ ಐಫೋನ್‌ಗಿಂತ ಆ್ಯಂಡ್ರಾಯ್ಡ್ ಹೆಚ್ಚು ಸುರಕ್ಷಿತ ಅನ್ನೋ ಮಾಹಿತಿ ಬಯಲಾಗಿದೆ. ಇದು ಖುದ್ದು ಐಫೋನ್ ಹಾಗೂ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರು ನೀಡಿದ ಮಾಹಿತಿ ಆಧರಿಸಿ ನಡೆಸಿದ ಸರ್ವೆಯಾಗಿದೆ. ಹೀಗಾಗಿ ಇದು ಪ್ರಾಯೋಗಿಕವಾಗಿ ಯಾರು ಹೆಚ್ಚು ಸುರಕ್ಷಿತ ಅನ್ನೋ ಮಾಹಿತಿ ನೀಡುತ್ತಿದೆ. ಈ ಕುರುತ ಅಂಕಿ ಅಂಶಗಳನ್ನು ಸರ್ವೆ ತೆರೆದಿಟ್ಟಿದೆ.

46
ಸ್ಕ್ಯಾಮ್ ಅಥಾ ಫ್ರಾಡ್ ಮೆಸೇಜ್

ಸರ್ವೆ ಪ್ರಕಾರ ಐಒಎಸ್ (ಐಫೋನ್) ಬಳಕೆದಾರರಿಗಿಂತ ಶೇಕಡಾ 58 ರಷ್ಟು ಆ್ಯಂಡ್ರಾಯ್ಡ್ ಬಳಕೆದಾರರು ತಮಗೆ ಸರ್ವೆ ನಡೆಸುವ ಒಂದು ವಾರಮೊದಲಿನಿಂದ ಸರ್ವೆ ದಿನದವರಗೆ ಯಾವುದೇ ಸ್ಕ್ಯಾಮ್, ಫ್ರಾಡ್, ವಂಚನೆ ಮೆಸೇಜ್, ಫೈಲ್ ಬಂದಿಲ್ಲ ಎಂದಿದ್ದಾರೆ. ವಿಶೇಷ ಅಂದರೆ ಪಿಕ್ಸೆಲ್ ಬಳಕೆದಾರರ ಈ ಸಂಖ್ಯೆ ಶೇಕಡಾ 96.

ಸ್ಕ್ಯಾಮ್ ಅಥಾ ಫ್ರಾಡ್ ಮೆಸೇಜ್

56
ವಾರದಲ್ಲಿ ಸ್ಕ್ಯಾಮ್ ಮೆಸೇಜ್

ಐಒಎಸ್ (ಐಫೋನ್) ಫೋನ್ ಬಳಕೆದಾರರ ಪೈಕಿ ಶೇಕಡಾ 65ರಷ್ಟು ಮಂದಿ ವಾರದಲ್ಲಿ ಕನಿಷ್ಠ ಮೂರು ಬಾರಿಯಾದರೂ ಸ್ಕ್ಯಾಮ್ ಮೆಸೇಜ್, ಎಪಿಕೆ ಫೈಲ್, ವಂಚಕರ ಮೆಸೇಜ್ ಬರುತ್ತದೆ. ಇನ್ನು ಐಫೋನ್ ಹಾಗೂ ಪಿಕ್ಸೆಲ್‌ಗೆ ಹೋಲಿಕೆ ಮಾಡಿದರೆ ಐಫೋನ್ ಬಳಕೆದಾರರು ಸ್ಕ್ಯಾಮ್ ಮಸೇಜ್‌ನಿಂದ ಬೇಸತ್ತಿದ್ದಾರೆ ಎಂದಿದ್ದಾರೆ.

ವಾರದಲ್ಲಿ ಸ್ಕ್ಯಾಮ್ ಮೆಸೇಜ್

66
ಬಳಕೆದಾರರ ಪ್ರಕಾರ ಯಾವುದು ಸುರಕ್ಷಿತ

ಸ್ಕ್ಯಾಮ್ ಮೆಸೇಜ್, ವಂಚಕರ ಮಸೇಜ್, ಕಂಪನಿ ಎಂದು ಬರುವ ವಂಚನೆ ಮೆಸೇಜ್‌ಗಳಿಂದ ಮೋಸ ಹೋಗುತ್ತಿದ್ದಾರೆ. ಈ ಪೈಕಿ ಶೇಕಡಾ 20 ರಷ್ಟು ಆ್ಯಂಡ್ರಾಯ್ಡ್ ಬಳಕೆದಾರರು ತಮ್ಮ ಆ್ಯಂಡ್ರಾಯ್ಡ್ ಫೋನ್ ಸುರಕ್ಷಿತ ಎಂದಿದ್ದಾರೆ. ಆದರೆ ಬಳಕೆದಾರರ ಯಾವುದೇ ಸಮಸ್ಯೆಗಳಿಲ್ಲದೆ ಐಫೋನ್ ಸುರಕ್ಷಿತ ಎಂದು ಹೇಳಿದವರ ಸಂಖ್ಯೆ ಬೆರೆಳೆಣಿಕೆ.

ಬಳಕೆದಾರರ ಪ್ರಕಾರ ಯಾವುದು ಸುರಕ್ಷಿತ

Read more Photos on
click me!

Recommended Stories